ಆಸ್ಕರ್ ನಲ್ಲಿ NTR ಧರಿಸಿದ್ದ ಡ್ರೆಸ್ ಮೇಲಿನ ಗೋಲ್ಡನ್ ಟೈಗರ್ ಸಿಂಬಲ್ ನ 3 ಅರ್ಥ ತಿಳಿದರೆ ಥ್ರಿಲ್ ಆಗ್ತೀರಾ!

0
76

Kannada News:ಆಸ್ಕರ್ 2023 ಭಾರತೀಯ ಚಿತ್ರರಂಗಕ್ಕೆ ಇದು ನಿಸ್ಸಂಶಯವಾಗಿ ಬಹಳ ದೊಡ್ಡ ದಿನವಾಗಿತ್ತು. ಏಕೆಂದರೆ ಅತ್ಯಂತ ಜನಪ್ರಿಯತೆ ಪಡೆದಿರುವ RRR ನ ತಾರೆಗಳಾದ ಜೂನಿಯರ್ NTR ಮತ್ತು ರಾಮ್ ಚರಣ್ ಅವರು ಆಸ್ಕರ್(Oscar) ಸಮಾರಂಭಕ್ಕೆ ತಮ್ಮ ಅತ್ಯುತ್ತಮ ಎನಿಸುವ ಉಡುಪಿನಲ್ಲಿ ಹೆಜ್ಜೆ ಹಾಕಿದ್ದರು. ಜೂನಿಯರ್ ಎನ್ ಟಿ ಆರ್(Jr NTR) ತೊಟ್ಟಿದ್ದ ಡ್ರೆಸ್ ಅನೇಕರ ಗಮನವನ್ನು ಸೆಳೆದಿತ್ತು. ಅಲ್ಲದೇ ಅನೇಕರು ಅವರು ತೊಟ್ಟ ಡ್ರೆಸ್ ನ ವಿಶೇಷತೆ ಏನೆಂದು ತಿಳಿಯುವ ಕುತೂಹಲವನ್ನು ಸಹಾ ವ್ಯಕ್ತಪಡಿಸಿದ್ದರು. ಎಲ್ಲರನ್ನೂ ಬೆರಗುಗೊಳಿಸಿದ ಜೂನಿಯರ್ ಎನ್ಟಿಆರ್ ಅವರ ಡ್ರೆಸ್ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ತಿಳಿಯೋಣ ಬನ್ನಿ.

ಜೂನಿಯರ್ ಎನ್ಟಿಆರ್ ಅವರನ್ನು ಪ್ರೀತಿಯಿಂದ ಹೀರೋ ಆಫ್ ಮಾಸ್(Hero of mass) ಎಂದು ಕರೆಯಲಾಗುತ್ತದೆ. ಜೂನಿಯರ್ ಎನ್‌ ಟಿ ಆರ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಭಾರತವನ್ನು ತನ್ನ ಹೃದಯದಲ್ಲಿ ಹೊತ್ತುಕೊಂಡು ನಡೆಯುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಈಗ ಹೇಳಿದಂತೆ ನಟ ಎನ್ಟಿಆರ್ ಅವರು ಭಾರತವನ್ನು ತನ್ನ ಹೃದಯದಲ್ಲಿ ಮಾತ್ರವಲ್ಲದೇ ತೋಳಿನ ಮೇಲೂ ಹೊತ್ತಿದ್ದರು. ಹೌದು, ನಟ ಧರಿಸಿದ್ದ ಡ್ರೆಸ್ ನ ತೋಳಿನ ಮೇಲೆ ಹುಲಿಯ ಗೋಲ್ಡ್ ಮೆಟಾಲಿಕ್ ಕಸೂತಿಯೊಂದಿಗೆ ಕಪ್ಪು ವೆಲ್ವೆಟ್ ಕಸ್ಟಮ್ ನಿರ್ಮಿತವಾದ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಕಂಡಿತ್ತು.

Kannada News:ಇದು ಆರ್‌ ಆರ್‌ ಆರ್‌ ಸಿನಿಮಾದ ಮಧ್ಯಂತರ ದೃಶ್ಯದ ಸಂಕೇತವಾಗಿತ್ತು ಮಾತ್ರವೇ ಅಲ್ಲದೇ ಜೂನಿಯರ್ ಎನ್‌ಟಿಆರ್ ಅವರನ್ನು ಅಭಿಮಾನಿಗಳು ಅಭಿಮಾನದಿಂದ ಬಳಸುವ ಟೈಟಲ್ ಯಂಗ್ ಟೈಗರ್‌ ಎನ್ನುವುದನ್ನು ಸಹಾ ಪ್ರತಿನಿಧಿಸುವಂತೆ ಇತ್ತು. ಈ ಉಡುಪನ್ನು ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ (Gaurav Gupta) ಅವರು ಡಿಸೈನ್ ಮಾಡಿದ್ದರು. ಅವರು ಮಾತನಾಡುತ್ತಾ ಎನ್ ಟಿ ಆರ್ ಅವರ ವ್ಯಕ್ತಿತ್ವ ಮತ್ತು ಭಾರತವನ್ನು ಪ್ರತಿನಿಧಿಸುವ ಹಾಗೆ ಇರಬೇಕೆಂದು ಹೀಗೆ ಡಿಸೈನ್ ಮಾಡಲಾಗಿತ್ತೆಂದು ಹೇಳಿದ್ದಾರೆ.‌

LEAVE A REPLY

Please enter your comment!
Please enter your name here