Kannada Serial: ಕನ್ನಡ ಧಾರಾವಾಹಿಯ ಹೀರೋ ಹೀರೋಯಿನ್ ನಡುವೆ ಅಫೇರ್!ಶೂಟಿಂಗ್ ಸೆಟ್ ನಲ್ಲೇ ಹೀರೋಯಿನ್ ಗೆ ಚಪ್ಪಲಿಯಲ್ಲಿ ಹೊಡೆದ ಹೆಂಡತಿ!

Written by Pooja Siddaraj

Published on:

Kannada Serial: ಕಿರುತೆರೆ ಮತ್ತು ಚಿತ್ರರಂಗ ಈ ಎರಡು ಕಡೆ ಲವ್ ಅಫೇರ್ ಸುದ್ದಿಗಳು ಆಗಾಗ ಕೇಳಿಬರುತ್ತವೆ. ಇಂಥ ಸುದ್ದಿಗಳು ಚರ್ಚೆ ಕೂಡ ಆಗುವುದುಂಟು. ಇದೀಗ ಮತ್ತೊಂದು ಹೊಸ ಅಫೇರ್ ಸ್ಟೋರಿ ಸದ್ದು ಮಾಡುತ್ತಿದೆ. ಕನ್ನಡದ ಹಿಟ್ ಸೀರಿಯಲ್ ನ ಹೀರೋ ಹೀರೋಯಿನ್ ನಡುವೆ ಅಫೇರ್ ಇದೆ ಎನ್ನುವ ವಿಚಾರ ಈಗ ವೈರಲ್ ಆಗಿದೆ.

ಈ ಧಾರವಾಹಿಯಲ್ಲಿ ಹೀರೋ ಹೆಂಡತಿ ಮಿಸ್ ಆಗಿರುತ್ತಾಳೆ, ಆತನಿಗೆ ಮಧ್ಯ ವಯಸ್ಸು, ಚಿಕ್ಕ ವಯಸ್ಸಿನ ಹುಡುಗಿ ಜೊತೆಗೆ ಮದುವೆಯಾಗಿ ಅವರಿಬ್ಬರ ನಡುವೆ ವಯಸ್ಸಿನ ಅಂತರವಿಲ್ಲ ಎಂದು ತೋರಿಸುವ ಕಥೆ ಆಗಿದೆ ಈ ಧಾರವಾಹಿ. ಜನರಿಂದಲೂ ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಆದರೆ ಕಳೆದ ಐದಾರು ತಿಂಗಳುಗಳಿಂದ ಹೀರೋ ಹೀರೋಯಿನ್ ನಡುವೆ ಅಫೇರ್ ನಡೆಯುತ್ತಿದ್ದು, ಈ ವಿಚಾರ ಹೀರೋ ಹೆಂಡತಿಗೆ ಗೊತ್ತಾಗಿದೆ..

ಹೀರೋ ಹೆಂಡತಿ ಆ ಧಾರಾವಾಹಿಯ ಪ್ರೊಡ್ಯುಸರ್ ಕೂಡ ಹೌದು, ಕೆಲ ದಿನಗಳ ಹಿಂದೆ ಹೀರೋ ಮತ್ತು ಹೀರೋಯಿನ್ ಜೊತೆಯಾಗಿ ಫಾರಿನ್ ಟ್ರಿಪ್ ಹೋಗಿದ್ದರಂತೆ. ಈ ವಿಷಯ ಹೀರೋ ಹೆಂಡತಿಗೆ ಗೊತ್ತಾಗಿ, ಹೀರೋಯಿನ್ ಜೊತೆಗೆ ಇದರ ಬಗ್ಗೆ ಜಗಳ ಕೂಡ ಆಗಿತ್ತಂತೆ. ಇದೀಗ ಎರಡು ದಿನಗಳ ಹಿಂದೆ ಶೂಟಿಂಗ್ ಸೆಟ್ ಗೆ ಹೋಗಿ ಇದೇ ವಿಚಾರಕ್ಕೆ ಹೀರೋಯಿನ್ ಜೊತೆಗೆ ಜಗಳ ಆಡಿ ಆಕೆಗೆ ಚಪ್ಪಲಿಯಲ್ಲಿ ಹೊಡೆದಿದ್ದಾರಂತೆ ಹೀರೋ ಹೆಂಡತಿ.

ಇನ್ನು ಈ ಹೀರೋಯಿನ್ ಧಾರವಾಹಿಯಲ್ಲಿ ನಟಿಸೋದಿಲ್ಲ ಎಂದು ಚಾನೆಲ್ ಗೆ ಪತ್ರ ಬರೆದಿದ್ದಾರಂತೆ. ಆದರೆ ಚಾನೆಲ್ ಕೂಡ ಈ ವಿಚಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಹೀರೋಯಿನ್ ಧಾರಾವಾಹಿ ಇಂದ ಹೊರಬರೋದು ಬಹುತೇಕ ಖಚಿತ ಎನ್ನುವ ಹಾಗೆ ಆಗಿದೆ. ಆಕೆ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಮೊದಲ ಸಿನಿಮಾ ಬಿಡುಗಡೆ ಆಗಬೇಕಿದೆ. ಹಾಗಾಗಿ ಮತ್ತೆ ಧಾರವಾಹಿಗೆ ಬರುವುದು ಖಚಿತವಿಲ್ಲ.

ಇನ್ನು ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದ್ದು, ಇವರಿಬ್ಬರು ಯಾರು ಎನ್ನುವ ಬಗ್ಗೆ ಹೆಸರು ರಿವೀಲ್ ಆಗಿಲ್ಲ. ಒಂದು ವೇಳೆ ಈ ವಿಷಯ ರಿವೀಲ್ ಆದರೆ ಹೆಚ್ಚಿನ ತೊಂದರೆಯೇ ಆಗಬಹುದು ಎಂದು ಹೇಳಲಾಗುತ್ತಿದೆ.

Leave a Comment