ಗಾಯಕಿ ಮಂಗ್ಲಿ ನಿಜವಾಗಿಯೂ ಯಾರು ಗೊತ್ತಾ?ಅವರ ಲೈಫ್ ಹೇಗಿದೆ ನೋಡಿ

Featured-Article

2018 ರಿಂದಲೂ ತೆಲುಗು ಸಿನಿಮಾ ರಂಗದಲ್ಲಿ ಚಿತ್ರ ಗಾಯಕಿ ಆಗಿರುವ ಮಂಗ್ಲಿ ಅವರು ಮೂಲತಃ ರಾಜಸ್ಥಾನದವರು. ರಾಜಸ್ಥಾನದವರಾದರೂ ದಕ್ಷಿಣ ಕರ್ನಾಟಕದಲ್ಲಿ ಡಿಪ್ಲೋಮಾ ಮುಗಿಸಿ ಆಂಧ್ರದಲ್ಲಿ ತೆಲಂಗಾಣ ಹಾಗೂ ಹೈದ್ರಾಬಾದ್ ನಲ್ಲಿ ಜನಪದ ಶೈಲಿ ಹಾಡುಗಳನ್ನು ಪಾಪುಲರ್ ಗೊಳಿಸಿದ ಸಂಗೀತ ಕ್ಷೇತ್ರದ ಅಪರೂಪದ ಪ್ರತಿಭೆ.

ಮಂಗ್ಲಿ ಜನಿಸಿದ್ದು ಆಂಧ್ರದ ಅನಂತಪುರ ಜಿಲ್ಲೆಯ ಬತ್ತಲಪಲಿ ಎಂಬಲ್ಲಿ ಅಲ್ಲಿ ತಾಂಡಾ ಒಂದರಲ್ಲಿ ಬಾಲ ನಾಯ್ಕ್ ಹಾಗೂ ಲಕ್ಷ್ಮಿ ದೇವಿ ಎಂಬ ಸಾಧರಣ ದಂಪತಿಯ ಮಗಳಾಗಿ ಮಂಗ್ಲಿ 1994 ಜೂನ್ ಅಲ್ಲಿ ಜನಿಸುತ್ತಾರೆ. ಇವರ ನಿಜವಾದ ನಾಮದೇಯ ಸತ್ಯವತಿ ರಾಥೋಡ್.ಇವರು ಹೈದರಾಬಾದ್ ಬಂದಮೇಲೆ ಮಂಗ್ಲಿ ಎಂದು ಖ್ಯಾತಿ ಪಡೆದರು.

ಇವರು ಲಂಬಾಣಿ ಜನರು. ಇವರನ್ನು ದಕ್ಷಿಣ ಕನ್ನಡ ಕಡೆ ಕಾಣಬಹುದು.ಮಂಗ್ಲಿ ಅವರು ಈ ಕುಟುಂಬದಲ್ಲಿ ಹಿರಿಯ ಹೆಣ್ಣು ಮಗಳು. ಇವರ ಬಳಿಕ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು. ಇನ್ನೂ ದಕ್ಷಿಣ ಭಾರತದಲ್ಲಿ ಖ್ಯಾತ ಗಾಯಕಿಯಾಗಿ ಗುರುತಿಸಿಕೊಂಡಿರುವ ಮಂಗ್ಲಿ ಅವರ ಆರಂಭಿಕ ಜೀವನ ಕಡುಬಡತನದಿಂದ ಕೂಡಿತ್ತು.ಮಂಗ್ಲಿ ಅವರು 3ನೇ ತರಗತಿ ಇದ್ದಾಗಲೇ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡರು.ಮನೆಯ ಎಲ್ಲಾ ಕೆಲಸವನ್ನು ಮಾಡಿಕೊಂಡು ನಂತರ ಮಂಗ್ಲಿ ಶಾಲೆಗೆ ಹೋಗಬೇಕಿತ್ತು.

ಶಾಲೆ ಮುಗಿದ ನಂತರ ಹೆಚ್ಚಿನ ಸಮಯವನ್ನು ತಂದೆಯ ಬಳಿ ಕಳೆಯುತ್ತಿದ್ದರು. ತಂದೆಯ ಜೊತೆ ಚಿಕ್ಕಪುಟ್ಟ ಸಹಾಯವನ್ನು ಮಾಡುತ್ತಿದ್ದರು.ಮಂಗ್ಲಿ ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು.ಇನ್ನು ಇವರ ಸಮುದಾಯದವರು ಯಾವಾಗಲೂ ಹಾಡನ್ನು ಹಾಡುತ್ತಾ ಸಮಯವನ್ನು ಕಳೆಯುತ್ತಿದ್ದರು.

ಕೊನೆಗೆ ಮಂಗ್ಲಿ ಅವರು ಇವರ ಜೊತೆ ಹಾಡುತ್ತ ಜಾನಪದ ಗಾಯಕಿ ಆಗಿ ಹೊರಬಂದರು.ಇವರ ಗಾಯನಕ್ಕೆ ಅವರ ಸಮುದಾಯದಿಂದ ಆಕ್ರೋಶ ವ್ಯಕ್ತಪಡಿಸಿದರು.ಅವರ ಸಮುದಾಯದಲ್ಲಿ ಹೆಣ್ಣು ಮಕ್ಕಳು ಎಲ್ಲಾರ ಮುಂದೆ ಹಾಡುವ ಆಗಿಲ್ಲ.ಇದು ಸಮುದಾಯಕ್ಕೆ ವಿರುದ್ಧ ಇದರಿಂದ ಮುಂದುವರೆದರೆ ಬಹಿಷ್ಕಾರ ಹಾಕುವಂತೆ ಬೆದರಿಕೆ ಅವರಿಗೆ ಬಂತು.

ಆದರೆ ಮಂಗ್ಲಿ ಪೋಷಕರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮಂಗ್ಲಿ ಅವರನ್ನು ಪಂಜಾಬಿಗೆ ಕಳಿಸುತ್ತಾರೆ. ಈ ಸ್ಪರ್ಧೆಯಲ್ಲಿ ಹಾಡಿದ ಮಂಗ್ಲಿಗೆ ಪ್ರಥಮ ಬಹುಮಾನ ದೊರಕಿತು. ಇದನ್ನು ಗಮನಿಸಿದ ಪೋಷಕರು ಇದೇ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗುವಂತೆ ಮತ್ತು ಕಲಿಯುವಂತೆ ಪ್ರೋತ್ಸಾಹ ನೀಡಿದರು.ಆದರೆ ಅವರ ಪೋಷಕರು ಮಾಡುತ್ತಿದ್ದ ಕೆಲಸ ಮನೆಯ ಖರ್ಚಿಗೆ ಸಾಲುತ್ತಿರಲಿಲ್ಲ.ಆಗಾಗಿ ಮಂಗ್ಲಿ ಅವರು ಉದ್ಯೋಗ ಪಡೆದು ಆರ್ಥಿಕ ಪರಿಸ್ಥಿತಿಗೆ ಸಹಾಯ ಮಾಡಬೇಕೆಂದು ಕೋರ್ಸನ್ನು ಅರ್ಧದಲ್ಲಿ ಬಿಟ್ಟು ಬಂದರು.

ತಿರುಪತಿಯಲ್ಲಿ ತನ್ನ ಸೀನಿಯರ್ ಸಹಾಯದಿಂದ ಅಲ್ಲಿನ ಖಾಸಗಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿ ಕೆಲಸಕ್ಕೆ ಸೇರಿ ಹಾಗೂ ಪಾರ್ಟ್ ಟೈಮ್ ಸಂಗೀತ ಶಿಕ್ಷಕಿ ಆಗಿ ಹೈದ್ರಾಬಾದ್ ನಲ್ಲಿ ಕೆಲಸವನ್ನು ಶುರು ಮಾಡಿದರು. ತೆಲಂಗಾಣ ಹಾಗೂ ಸಾಂಪ್ರದಾಯಕ ತೆಲುಗು ಜಾನಪದ ಹಾಡುಗಳನ್ನು ಅದರ ಮೂಲರೂಪದಲ್ಲಿ ರಾಗಬದ್ಧವಾಗಿ ಮಂಗ್ಲಿ ಹಾಡುವುದಕ್ಕೆ ಆರಂಭಿಸಿದರು ಹಾಗೂ ಜಾನಪದ ಹಾಡುಗಳನ್ನು ಹಾಡಿ ಫೇಮಸ್ ಆದರು.

ದುಮ್ ದಮ್ ಎಂಬ ಕಾರ್ಯಕ್ರಮದಲ್ಲಿ ಅವರನ್ನು ಕಿರುತೆರೆಯಲ್ಲಿ ಗೆಸ್ಟ್ ಆರ್ಟಿಸ್ಟ್ ಆಗಿ ಆಹ್ವಾನಿಸಿದರು.ನಂತರ ಹೀಗೆ ಒಂದೊಂದು ಹಾಡುಗಳನ್ನು ಹಾಡುತ್ತ ತಮ್ಮ ಗಾಯನದ ಛಾಪನ್ನು ಮೂಡಿಸುತ್ತಾ ಬಂದರು.

Leave a Reply

Your email address will not be published.