ಆಸ್ಕರ್ ರೇಸ್ ನಲ್ಲಿ ಮೊಳಗಿದ ಗಗ್ಗರ ಶಬ್ದ: ಆಸ್ಕರ್ ಗೆ ಹತ್ತಿರವಾಗ್ತಿದೆ ನಮ್ಮ ಕಾಂತಾರ

0
56

ಕನ್ನಡದಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಿದ ಕಾಂತಾರ(Kantara) ಸಿನಿಮಾ ಅನಂತರ ಬೇರೆ ಬೇರೆ ಭಾಷೆಗಳಲ್ಲಿ ಸಹಾ ಬಿಡುಗಡೆ ಆಗಿ ವಿಜಯದ ನಗೆಯನ್ನು ಬೀರಿದೆ. ಇಡೀ ದೇಶದ ಜನರ ಅಪಾರವಾದ ಆದರ,‌ ಅಭಿಮಾನವನ್ನು ಪಡೆದುಕೊಂಡ ಕಾಂತಾರ(Kantara collection) ಬಹುಕೋಟಿ ಗಳಿಸಿದ್ದು ಮಾತ್ರವೇ ಅಲ್ಲದೇ ಇದೀಗ ಕಾಂತಾರ ಸಿನಿಮಾ ವಿಶ್ವ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ಆಸ್ಕರ್ (Oscar Award) ಕಡೆಗೆ ತನ್ನ ಪ್ರಯಾಣವನ್ನು ಬೆಳೆಸಿದೆ. ಇದು ಕಾಂತಾರ ಸಿನಿಮಾವನ್ನು ಅಭಿಮಾನಿಸಿದ ಸಿನಿ ಪ್ರೇಕ್ಷಕರಿಗೆ ಇದು ಬಹಳ ಖುಷಿಯನ್ನು ನೀಡಿದೆ ಹಾಗೂ ಇದೀಗ ಎಲ್ಲರ ಗಮನ ಅತ್ತ ಕಡೆಗೆ‌ ನೆಟ್ಟಿದೆ.

ಕಾಂತಾರ(Kantara Oscar) ಸಿನಿಮಾ ಆಸ್ಕರ್ ರೇಸ್ ಗೆ ಎಂಟ್ರಿ ಯನ್ನು ನೀಡಿದೆ. ವಿಶೇಷ ಎಂದರೆ ಕಾಂತಾರ ಸಿನಿಮಾ ಆಸ್ಕರ್ ರೇಸ್ ನಲ್ಲಿ ಎರಡು ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದ್ದು, ಅಭಿಮಾನಿಗಳು ಥ್ರಿಲ್ ಆಗುತ್ತಿದ್ದಾರೆ. ಹೌದು, ಕಾಂತಾರ ಆಸ್ಕರ್ ಪ್ರಶಸ್ತಿ ಪಡೆಯುವ ಸ್ಪರ್ಧೆಯಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಹೀಗೆ ಎರಡು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ ಎನ್ನಲಾಗಿದೆ. ಆಸ್ಕರ್ ನ ಅರ್ಹತಾ ಸುತ್ತಿನಲ್ಲಿ ಒಟ್ಟು 301 ಸಿನಿಮಾಗಳು ಆಯ್ಕೆ ಆಗಿದೆ ಎನ್ನಲಾಗಿದೆ.

ಅರ್ಹತಾ ಸುತ್ತಿನಲ್ಲಿ ಓಟಿಂಗ್ ಸಹಾ ಆರಂಭವಾಗಿದೆ. ಕಾಂತಾರ ಆಸ್ಕರ್ ರೇಸ್ ನಲ್ಲಿ ಇರುವ ಸಿಹಿ ಸುದ್ದಿಯನ್ನು ಹೊಂಬಾಳೆ ಫಿಲ್ಮ್ಸ್(Hombale Films) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಟ್ವೀಟ್ ನಲ್ಲಿ, ಇದು ಭಾರತೀಯ ಸಿನಿಮಾ ಪ್ರೇಮಿಗಳು ಖುಷಿ ಪಡುವ ಸಮಯ ಇದು. ರಿಷಬ್ ಶೆಟ್ಟಿ ಯ ಕಾಂತಾರ ಎರಡು ಕ್ಯಾಟಗರಿಯಲ್ಲಿ, ಬೆಸ್ಟ್ ಸಿನಿಮಾ ಮತ್ತು ಬೆಸ್ಟ್ ಆ್ಯಕ್ಟರ್ ಅರ್ಹತೆಯನ್ನು ಪಡೆದಿದೆ ಎನ್ನುವ ಮಾಹಿತಿಯನ್ನು ನೀಡಿದೆ.

LEAVE A REPLY

Please enter your comment!
Please enter your name here