ಕನ್ನಡದ ಕಾಂತಾರ(Kantara) ಸಿನಿಮಾ ಮಾಡಿದ ಸದ್ದು, ಸುದ್ದಿ ಮತ್ತು ದಾಖಲೆಗಳ ವಿಷಯವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಕನ್ನಡದಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಂಡ ಕಾಂತಾರ(Kantara) ಸಿನಿಮಾ ಆನಂತರ ಅನ್ಯ ಭಾಷೆಯ ಪ್ರೇಕ್ಷಕರ ಬೇಡಿಕೆಯಿಂದಾಗಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಯಿತು. ಹೀಗೆ ಬಿಡುಗಡೆಯಾದ ಸಿನಿಮಾ ಅಲ್ಲಿ ಬೇರೆ ಭಾಷೆಗಳಲ್ಲಿ ಸಹಾ ದೊಡ್ಡ ಮಟ್ಟದ ಸಕ್ಸಸ್ ಪಡೆದುಕೊಂಡಿತು. ಇನ್ನು ಇತ್ತೀಚಿಗಷ್ಟೇ ಕಾಂತರಾ ಸಿನಿಮಾ ಕಿರುತೆರೆಗೆ ಕೂಡ ಎಂಟ್ರಿ ನೀಡಿದೆ. ಅದರಲ್ಲೂ ತೆಲುಗಿನ ಕಿರುತೆರೆಯಲ್ಲಿ ಟಿ ಆರ್ ಪಿ ವಿಷಯದಲ್ಲಿ ದಾಖಲೆ ಮಟ್ಟದ ಸಾಧನೆಯನ್ನು ಕಾಂತಾರ ಸಿನಿಮಾ ಮಾಡಿದ್ದು, ತೆಲುಗು ರಾಜ್ಯಗಳಲ್ಲಿ ಈ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ.

ಹೌದು, ಕಾಂತಾರ ತೆಲುಗು(Kantara Telugu) ವರ್ಷನ್ ಸಿನಿಮಾ ಅತ್ಯಧಿಕ ಟಿಆರ್‌ಪಿ ರೇಟಿಂಗ್ ಪಡೆದು ಟಾಪ್ 5(Top 5) ತೆಲುಗು ಡಬ್ಬಿಂಗ್ ಸಿನಿಮಾಗಳಲ್ಲಿ ಒಂದಾಗಿ ಸ್ಥಾನವನ್ನು ಪಡೆದುಕೊಂಡಿದೆ. ತೆಲುಗು ಡಬ್ಬಿಂಗ್ ಸಿನಿಮಾದಲ್ಲಿ ಕಾಂತಾರ ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ. ಕಳೆದ ವರ್ಷ ಬಿಡುಗಡೆಯಾದ ಈ ಕನ್ನಡ ಸಿನಿಮಾ ದೊಡ್ಡ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. 16 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಸಿನಿಮಾ 400 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿ ಅಚ್ಚರಿಯನ್ನು ಮೂಡಿಸಿತ್ತಿ. ತೆಲುಗಿನಲ್ಲಿ ಈ ಸಿನಿಮಾವನ್ನು ನಿರ್ಮಾಪಕ ಅಲ್ಲು ಅರವಿಂದ್(Allu Arvind) ಬಿಡುಗಡೆ ಮಾಡಿದ್ದರು.
ಇತ್ತೀಚಿಗಷ್ಟೇ ಸಿನಿಮಾ ಮಾ ಟಿವಿ ಎಲ್ಲಿ ಪ್ರಸಾರ ಕಂಡಿತ. ಕಿರುತೆರೆಯಲ್ಲಿ ಮೊದಲ ಪ್ರಸಾರ ಕಂಡ ಸಿನಿಮಾ ಪ್ರೀಮಿಯರಿಗೆ 12.35 ಟಿ ಆರ್ ಪಿ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಹೈಯೆಸ್ಟ್ ಟಿಆರ್‌ಪಿ(Highest TRP) ಪಡೆದ ತೆಲುಗು ಡಬ್ಬಿಂಗ್ ಸಿನಿಮಾದಲ್ಲಿ ರಜನಿಕಾಂತ್ ರೋಬೋ, ಬಿಚ್ಚಗಾಡು, ಕಬಾಲಿ, ಕಾಂಚನ ಸಿನಿಮಾಗಳ ನಂತರ ಸ್ಥಾನವನ್ನು ಕಾಂತರಾ ಪಡೆದುಕೊಂಡಿದೆ.
ತೆಲುಗು ವರ್ಷನ್ ನಲ್ಲಿ ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗಲೂ ಸಿನಿಮಾ ನಿರ್ಮಾಪಕರಿಗೆ ಉತ್ತಮ ಲಾಭವನ್ನು ತಂದು ಕೊಟ್ಟಿದ್ದು ಇದೀಗ ಟಿವಿಯಲ್ಲಿ ಪ್ರಸಾರವಾಗಿ ಮತ್ತೊಮ್ಮೆ ಹೊಸ ದಾಖಲೆಯೊಂದನ್ನು ಬರೆದಿದೆ.