ಕಪ್ಪು ಮತ್ತು ಕೆಂಪು ಇರುವೆ ಮನೆಗೆ ಬಂದರೆ ಏನು ಸೂಚನೆ ಗೊತ್ತಾ?ಅಪ್ಪಿತಪ್ಪಿ ಕಾಗೆ ಬಂದರೆ ಪರಿಹಾರ ಇಲ್ಲಿದೆ ನೋಡಿ!

0
1731

ಸಾಮಾನ್ಯವಾಗಿ ಮನೆಗೆ ಕಪ್ಪು ಮತ್ತು ಕೆಂಪು ಇರುವೆಗಳು ಬರುತ್ತವೆ ಆದರೆ ಕೆಲವು ಬಾರಿ ಮನೆಯ ಒಳಗೆ ಕಪ್ಪು ಅಥವಾ ಕೆಂಪು ಇರುವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಇದರ ಅರ್ಥವೇನು ಹಾಗೆ
ಇನ್ನೂ ಕೆಲವು ಹಕ್ಕಿ ಪಕ್ಷಿಗಳು ಮನೆಯ ಒಳಗೆ ಬಂದರೆ ಏನರ್ಥ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರು ಕೂಡ ಕೆಂಪು ಇರುವೆಗಳು ಮತ್ತು ಕಪ್ಪು ಇರುವೆಗಳು ಕಾಣಿಸಿಕೊಳ್ಳುತ್ತವೆ.ಸಾಮಾನ್ಯವಾಗಿ ನಾವು ಮಾಡುವ ಹೀನ ಕೃತ್ಯವೆಂದರೆ ಕೆಂಪು ಇರುವೆಯನ್ನು ಸಾಯಿಸುವುದು ಹಾಗೂ ಕೆಲವೊಮ್ಮೆ ಕಾಲಿನಲ್ಲಿ ತುಳಿದು ಬಿಡುವುದು.ಆದರೆ ಹೀಗೆ ಯಾವುದೇ ಕಾರಣಕ್ಕೂ ಮಾಡಬಾರದು ಯಾಕೆಂದರೆ ಕೆಂಪು ಇರುವೆ ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮೀ ದೇವಿಯು ನಮ್ಮ ಮನೆಗೆ ಬಂದಿದ್ದಾಳೆಂದು ತಿಳಿದುಕೊಳ್ಳಬೇಕು.

ಕೆಂಪು ಇರುವೆಗಳನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು ಯಾಕೆಂದರೆ ಕೆಂಪು ಇರುವೆಗಳು ಮಹಾಲಕ್ಷ್ಮೀ ದೇವಿಯ ಸೂಚನೆಯಾಗಿರುತ್ತದೆ.ಸಾಮಾನ್ಯವಾಗಿ ಮನೆಯ ಅಟ್ಟದ ಮೇಲೆ ಇಟ್ಟ ಆಹಾರವನ್ನು ಕಾಗೆಗಳು ಬಂದು ತೆಗೆದುಕೊಂಡು ಹೋಗುತ್ತವೆ ಆದರೆ ಇಂತಹ ಕಾಗೆಗಳು ಮನೆಯ ಒಳಗೆ ನುಗ್ಗಿದರೆ ಅರ್ಥವೇನು ಎಂದು ನೋಡುವುದಾದರೆ ಅದು ಅಶುಭದ ಸೂಚನೆಯಾಗಿರುತ್ತದೆ ಮನೆಯ ಸದಸ್ಯರಲ್ಲಿ ಯಾರಿಗಾದರೂ ಒಬ್ಬರಿಗೆ ಏನಾದರೂ ತೊಂದರೆಯಾಗುವ ಸಾಧ್ಯತೆ ಇದೆ ಎಂಬುದರ ಸೂಚನೆಯನ್ನು ಕಾಗೆ ನೀಡುತ್ತದೆ.

ಹೀಗೆ ಮನೆಯೊಳಗೆ ಕಾಗೆ ಬಂದಾಗ ಮಾಡಬೇಕಾಗಿರುವ ಸರಳ ಪರಿಹಾರವೆಂದರೆ ಕಾಗೆ ಮನೆಯೊಳಗೆ ಬಂದು ಹೋದ ತಕ್ಷಣ ಅರಿಷಿಣ ಮಿಶ್ರಿತ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿ , ತಲೆಸ್ನಾನವನ್ನು ಮಾಡಿ ದೇವರ ಮುಂದೆ ದೀಪವನ್ನು ಹಚ್ಚಿಟ್ಟು ಸಂಕಲ್ಪ ಮಾಡಿ ಪ್ರಾರ್ಥಿಸಿಕೊಳ್ಳಬೇಕು.

ದೇವರ ಮನೆಯಲ್ಲಿ ಕಪ್ಪು ಬಣ್ಣದ ಇರುವೆಗಳು ಕಾಣಿಸಿಕೊಂಡರೆ ಅದರ ಅರ್ಥ ನಿಮಗೆ ಮತ್ತು ನಿಮ್ಮ ಮನೆಯ ಮೇಲೆ ಲಕ್ಷ್ಮೀ ದೇವಿಯ ಅನುಗ್ರಹ ಸದ್ಯದಲ್ಲೇ ಸಿಗಲಿದೆ ಎನ್ನುವುದರ ಸಂಕೇತವಾಗಿದೆ.ಮನೆಯಲ್ಲಿ ಹೆಚ್ಚು ಕಪ್ಪು ಇರುವೆಗಳು ಕಾಣಿಸಿಕೊಂಡರೆ ಮನೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ ಎಂಬುದರ ಸೂಚನೆ ಜೊತೆಗೆ ಸುಖ ಶಾಂತಿ ನೆಮ್ಮದಿ ಸಂತೃಪ್ತಿ ಎಲ್ಲವನ್ನೂ ಈ ಕಪ್ಪು ಇರುವೆಗಳು ಮನೆಗೆ ಬರುವುದುರ ಮೂಲಕ ಸೂಚನೆಯನ್ನು ನೀಡುತ್ತದೆ.

ಅಡುಗೆ ಕೋಣೆಯಲ್ಲಿ ಸಿಹಿ ಪದಾರ್ಥಗಳ ಮೇಲೆ ಇರುವೆಗಳು ಕಾಣಿಸಿಕೊಂಡರೆ ಅದು ಶುಭದ ಸೂಚನೆ ಅಂದರೆ ಮನೆಯಲ್ಲಿ ಸಕಾರಾತ್ಮಕ ಚಿಂತನೆಗಳು ಹೆಚ್ಚಲಿವೆ ಎಂಬುದರ ಸೂಚನೆಯಾಗಿದೆ.

ಕೆಂಪು ಇರುವೆಗಳು ಧನಲಾಭದ ಸಂಕೇತವಾಗಿದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here