Karthik Mahesh: ಬಟ್ಟೆಗಳಿಗೂ ಸಾಲ ಮಾಡಿಕೊಂಡಿದ್ದಾರೆ ಬಿಬಿಕೆ10 ವಿನ್ನರ್ ಕಾರ್ತಿಕ್! ತೆರೆಹಿಂದಿನ ಕಹಾನಿ ಏನು ಗೊತ್ತಾ?

0 18

Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಆಗಿ ಹೊರಹೊಮ್ಮಿರುವವರು ಕಿರುತೆರೆ ನಟ ಕಾರ್ತಿಕ್ ಮಹೇಶ್. ಮೊದಲ ರನ್ನರ್ ಅಪ್ ಆಗಿ ಪ್ರತಾಪ್ ಅವರು ಹೆಸರು ಗಳಿಸಿದರೆ, ಎರಡನೇ ರನ್ನರ್ ಅಪ್ ಸಂಗೀತ, ಮೂರನೇ ರನ್ನರ್ ಅಪ್ ವಿನಯ್ ಹಾಗೂ ನಾಲ್ಕನೇ ರನ್ನರ್ ಅಪ್ ವರ್ತೂರ್ ಸಂತೋಷ್ ಆಗಿದ್ದಾರೆ. ವಿನ್ನರ್ ಆಗಿರುವ ಕಾರ್ತಿಕ್ ನಿಜ ಜೀವನಸಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ, ಪಡುತ್ತಿದ್ದಾರೆ ಗೊತ್ತಾ?

ಕಾರ್ತಿಕ್ ಅವರು ಬಿಗ್ ಬಾಸ್ ಫಿನಾಲೆ ತಲುಪಿದಾಗ ಬಡವರ ಮನೆ ಮಕ್ಕಳು ಬೆಳೀಬೇಕು ಎನ್ನುವ ಟ್ರೆಂಡ್ ಶುರುವಾಗಿತ್ತು. ಅದೇ ರೀತಿ ಅಭಿಮಾನಿಗಳ ಆಸೆಯ ಹಾಗೆ, ಅವರ ಪ್ರೋತ್ಸಾಹದಿಂದ ಕಾರ್ತಿಕ್ ಗೆದ್ದಿದ್ದಾರೆ. ಆದರೆ ತೆರೆ ಹಿಂದೆ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಗೊತ್ತಾ? ಈ ಬಗ್ಗೆ ಖುದ್ದು ಕಾರ್ತಿಕ್ ಅವರೇ ಇಂಟರ್ವ್ಯೂ ಗಳಲ್ಲಿ ಹೇಳಿಕೊಂಡಿದ್ದಾರೆ. ಕಲಾವಿದರು ಎಂದರೆ ಹೊರಗಡೆ ಕಾಣಿಸಿಕೊಂಡಾಗ, ತೆರೆಯಮೇಲೆ ಅವರು ಸುಂದರವಾಗಿ ಕಾಣಿಸಬೇಕು..

ಅದಕ್ಕಾಗಿ ಕಲರ್ ಫುಲ್ ಕಾಸ್ಟ್ಯೂಮ್ ಗಳನ್ನು ಧರಿಸಬೇಕು. ಆದರೆ ಕಾರ್ತಿಕ್ ಅವರ ಅವರಿಗಿದ್ದ ಕಷ್ಟದ ಕಾರಣ ಬಟ್ಟೆ ಖರೀದಿ ಮಾಡುವುದಕ್ಕೂ ಸಾಲ ಮಾಡಿದ್ದಾರಂತೆ. ಅವರ ಸಂಬಂಧಿಕರೇ ಸಾಲ ಕೊಟ್ಟಿದ್ದಾರಂತೆ. ಅದೆಲ್ಲವನ್ನು ತೀರಿಸಬೇಕು ಎಂದು ಕಾರ್ತಿಕ್ ಅವರು ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಾರ್ತಿಕ್ ಅವರು ಮನೆಯ ಬಾಡಿಗೆ ಕೊಡುವುದಕ್ಕೂ ಆಗಿಲ್ಲವಂತೆ. ಬೆಂಗಳೂರಿನಲ್ಲಿ ತಾಯಿ ಜೊತೆಗೆ ಬಾಡಿಗೆ ಮನೆ ಮಾಡಿ 7 ತಿಂಗಳು ಮಾತ್ರ ಕಳೆದಿದೆಯಂತೆ..

ಆದರೆ ಬಿಗ್ ಬಾಸ್ ಗೆ ಹೋದಾಗಿನಿಂದ, 3 ತಿಂಗಳ ಬಾಡಿಗೆ ಕಟ್ಟಲು ಸಾಧ್ಯ ಆಗಿಲ್ಲವಂತೆ. ಅದೆಲ್ಲವನ್ನು ಇನ್ನುಮುಂದೆ ಕ್ಲಿಯರ್ ಮಾಡಬೇಕಿದೆ, ಮನೆಗೆ ಅಡ್ವಾನ್ಸ್ ಅನ್ನು ಕೂಡ ಇನ್ಸ್ಟಾಲ್ಮೆಂಟ್ ಆಗಿ ಕೊಟ್ಟಿದ್ದಾರೆ, ಒಂದೇ ಸಾರಿ ಕೊಡಲಿಲ್ಲ ಎಂದು ಕಾರ್ತಿಕ್ ಅವರ ಮನೆಯ ಓನರ್ ತಿಳಿಸಿದ್ದಾರೆ. ಇದೆಲ್ಲಾ ಕೇಳಿದರೆ ಕಾರ್ತಿಕ್ ಅವರು ಎಷ್ಟು ಕಷ್ಟಪಟ್ಟು ಬಂದಿದ್ದಾರೆ ಎಂದು ಗೊತ್ತಾಗುತ್ತದೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಾಯಕ ಆಗಿದ್ದರು ಸಹ, ಕಾರ್ತಿಕ್ ಅವರ ಪರಿಸ್ಥಿತಿ ಹೀಗಿದೆ.

Leave A Reply

Your email address will not be published.