Karthik Mahesh: ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ಜೊತೆಯಲ್ಲೇ ವಿನ್ನರ್ ಕಾರ್ತಿಕ್ ಮದುವೆ? ಗುಟ್ಟು ರಟ್ಟು ಮಾಡಿದ ತಾಯಿ!

Written by Pooja Siddaraj

Published on:

Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಆಗಿ ಹೊರಹೊಮ್ಮಿರುವವರು ಕಿರುತೆರೆ ನಟ ಕಾರ್ತಿಕ್ ಮಹೇಶ್. ಮೊದಲ ರನ್ನರ್ ಅಪ್ ಆಗಿ ಪ್ರತಾಪ್ ಅವರು ಹೆಸರು ಗಳಿಸಿದರೆ, ಎರಡನೇ ರನ್ನರ್ ಅಪ್ ಸಂಗೀತ, ಮೂರನೇ ರನ್ನರ್ ಅಪ್ ವಿನಯ್ ಹಾಗೂ ನಾಲ್ಕನೇ ರನ್ನರ್ ಅಪ್ ವರ್ತೂರ್ ಸಂತೋಷ್ ಆಗಿದ್ದಾರೆ. ವಿನ್ನರ್ ಆಗಿರುವ ಕಾರ್ತಿಕ್ ಮದುವೆ ಬಗ್ಗೆ ಈಗ ಸುದ್ದಿಯಾಗಿದೆ.

ಕಾರ್ತಿಕ್ ಅವರು ಬಿಗ್ ಬಾಸ್ ಫಿನಾಲೆ ತಲುಪಿದಾಗ ಬಡವರ ಮನೆ ಮಕ್ಕಳು ಬೆಳೀಬೇಕು ಎನ್ನುವ ಟ್ರೆಂಡ್ ಶುರುವಾಗಿತ್ತು. ಅದೇ ರೀತಿ ಅಭಿಮಾನಿಗಳ ಆಸೆಯ ಹಾಗೆ, ಅವರ ಪ್ರೋತ್ಸಾಹದಿಂದ ಕಾರ್ತಿಕ್ ಗೆದ್ದಿದ್ದಾರೆ. ಗೆದ್ದ ಬಳಿಕ ಕಾರ್ತಿಕ್ ಅವರು ಇಂಟರ್ವ್ಯೂ, ಫ್ಯಾನ್ಸ್ ಮೀಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಅಮ್ಮನ ಜೊತೆ ಬಂದಿದ್ದಾರೆ..

ಈ ಶೋಗೆ ನಟಿ ಸುಶ್ಮಾ ರಾವ್ ಅವರು ನಿರೂಪಕಿ ಆಗಿದ್ದು, ಜಡ್ಜ್ ಗಳಾಗಿ ನಟ ಸೃಜನ್ ಲೋಕೇಶ್, ಮತ್ತು ನಟಿಯರಾದ ತಾರಾ ಹಾಗೂ ಅನು ಪ್ರಭಾಕರ್ ಇದ್ದಾರೆ. ಈ ಶೋ ನ 3ನೇ ಸೀಸನ್ ಕಳೆದ ವಾರ ಶುರುವಾಗಿದ್ದು, ಈ ವಾರ ಗೆಸ್ಟ್ ಆಗಿ ಬಂದಿದ್ದಾರೆ ಕಾರ್ತಿಕ್ ಹಾಗೂ ಅವರ ತಾಯಿ. ಕಾರ್ತಿಕ್ ಅವರ ತಾಯಿಗೆ ಮಗನ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಮೀನಾಕ್ಷಿ ಅವರು ಉತ್ತರ ಕೊಟ್ಟಿದ್ದಾರೆ.

ನಿಮ್ಮ ಮಗ ಹುಡುಗಿಯರ ಜೊತೆ ಚೆನ್ನಾಗಿ ಮಾತಾಡ್ತಾರೆ ಅಂತ ಬಿಗ್ ಬಾಸ್ ಗೆ ಹೋದ್ಮೇಲೆ ಗೊತ್ತಾಯ್ತಾ ಎಂದು ಕೇಳಿದ್ದು, ಇಲ್ಲ ಹೊರಗಡೆನು ಮಾತಾಡ್ತಾನೆ ಅವನು ತುಂಬಾ ಫ್ರೆಂಡ್ಲಿ ಎಂದಿದ್ದಾರೆ. ಇನ್ನು ಕಾರ್ತಿಕ್ ಮದುವೆ ಬಗ್ಗೆ ಮಾತನಾಡಿ, ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ಜೊತೆಗೆ ಕಾರ್ತಿಕ್ ಮದುವೆ ಆಗುತ್ತಾ ಎಂದು ಕೇಳಿದ್ದಕ್ಕೆ ಹೌದು ಎಂದಿದ್ದಾರೆ ಕಾರ್ತಿಕ್ ತಾಯಿ. ಇದೀಗ ಕಾರ್ತಿಕ್ ತಾಯಿ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಿಗ್ ಬಾಸ್ ಜರ್ನಿ ಶುರುವಾದಾಗ ಸಂಗೀತ ಅವರೊಡನೆ ಕಾರ್ತಿಕ್ ತುಂಬಾ ಕ್ಲೋಸ್ ಆಗಿದ್ದರು, ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಬಳಿಕ ನಮ್ರತಾ ಅವರ ಜೊತೆಗೆ ಕ್ಲೋಸ್ ಆಗಿದ್ದರು ಕಾರ್ತಿಕ್. ಆದರೆ ಕೊನೆಯ ವೇಳೆಗೆ ನಮ್ರತಾ ಅವರೊಡನೆ ಕೂಡ ಜಗಳ ಶುರುವಾಗಿ, ಫಿನಾಲೆ ಸಮಯಕ್ಕೆ ಕಾರ್ತಿಕ್ ಒಂಟಿಯಾಗಿಯೇ ಇದ್ದರು. ಹಾಗಾಗಿ ಕಾರ್ತಿಕ್ ಅವರು ಯಾರನ್ನು ಮನಸ್ಸಲ್ಲಿ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ ಎಂದು ಪ್ರಶ್ನೆ ಶುರುವಾಗಿದೆ..

Leave a Comment