Karthika Nair: ಗುಟ್ಟಾಗಿ ಎಂಗೇಜ್ ಆದ ಡಿಬಾಸ್ ಸಿನಿಮಾ ನಟಿ, ಫೋಟೋ ವೈರಲ್!

Written by Pooja Siddaraj

Published on:

Karthika Nair: ನಟಿ ಕಾರ್ತಿಕಾ ನಾಯರ್ ಅವರು ಕನ್ನಡದ ಬೃಂದಾವನ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೂ ಪರಿಚಿತರು. ಕಾರ್ತಿಕಾ ಅವರು ಬೃಂದಾವನ ಸಿನಿಮಾದಲ್ಲಿ ಡಿಬಾಸ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಕಾರ್ತಿಕಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕಾರ್ತಿಕಾ ಅವರು ಎಂಗೇಜ್ ಆಗಿರುವ ಹಾಗೆ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಆ ಫೋಟೋ ವೈರಲ್ ಆಗಿದೆ.

ಕಾರ್ತಿಕಾ ಅವರು ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ರಾಧಾ ಅವರ ಮಗಳು, ರಾಧಾ ಅವರು ನಟಿ ಅಂಬಿಕಾ ಅವರ ತಂಗಿ. ರಾಧಾ ಅವರು ಕೂಡ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ, ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಾರ್ತಿಕಾ ಅವರು ನಟನೆ ಶುರು ಮಾಡಿದ್ದು ತೆಲುಗಿನ ಜೋಶ್ ಸಿನಿಮಾ ಮೂಲಕ. ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಕಾರ್ತಿಕಾ ನಾಯರ್.

ಆದರೆ ಇವರಿಗೇ ನಾಯಕಿಯಾಗಿ ಅಷ್ಟೇನು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಹಾಗಾಗಿ ಕಾರ್ತಿಕಾ ಅವರು ನಟನೆ ಇಂದ ದೂರವಾಗಿ, ಉದ್ಯಮಿಯಾದರು. ಇಂದು ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಇದೀಗ ಕಾರ್ತಿಕಾ ಅವರು ಮದುವೆಗೆ ತಯಾರಾಗಿದ್ದು ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎನ್ನುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ತಿಳಿದುಬಂದಿದೆ. ಈ ಫೋಟೋ ಒಂದನ್ನು ಕಾರ್ತಿಕಾ ನಾಯರ್ ಅವರೇ ಶೇರ್ ಮಾಡಿಕೊಂಡಿದ್ದಾರೆ..

ಒಬ್ಬ ಹುಡುಗನನ್ನು ಅಪ್ಪಿಕೊಂಡಿರುವ ಫೋಟೋವನ್ನು ಕಾರ್ತಿಕ ಅವರು ಶೇರ್ ಮಾಡಿದ್ದು, ಎಂಗೇಜ್ ಆಗಿರುವ ಹಾಗೆ ಕೈಯಲ್ಲಿ ರಿಂಗ್ ಸಹ ಇದೆ. ಆದರೆ ಫೋಟೋದಲ್ಲಿ ಹುಡುಗನ ಮುಖ ಕ್ಲಿಯರ್ ಆಗಿ ಕಂಡುಬಂದಿಲ್ಲ. ಹಾಗೆಯೇ ಎಂಗೇಜ್ಮೆಂಟ್ ಆಗಿದೆ ಎಂದು ಕಾರ್ತಿಕ ಅವರು ಕೂಡ ಅಧಿಕೃತವಾಗಿ ಹೇಳಿಲ್ಲ. ಆದರೆ ಫೋಟೋ ನೋಡಿದರೆ ಎಂಗೇಜ್ ಆಗಿದ್ದಾರೆ ಅನ್ನಿಸುತ್ತಿದ್ದು, ಅಭಿಮಾನಿಗಳು ಕಾರ್ತಿಕಾ ಅವರಿಗೆ ವಿಶ್ ಮಾಡುತ್ತಿದ್ದಾರೆ.

Leave a Comment