ಕಸದಿಂದ ರಸ!ಬಾಳೆಹಣ್ಣು ತಿಂದು ಸಿಪ್ಪೆ ಮಾತ್ರ ಇನ್ಮುಂದೆ ಎಸೆಯಬೇಡಿ ಅದರ ಲಾಭ ಗಳನ್ನು ಕೇಳಿದರೆ ಆಶ್ಚರ್ಯ ಪಡ್ತೀರಾ!

0
798

ಬಾಳೆ ಹಣ್ಣು ಆರೋಗ್ಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ.ಬಾಳೆ ಹಣ್ಣು ಆರೋಗ್ಯಕ್ಕೆ ಉತ್ತಮ ಎಂದು ಅದನ್ನು ಸೇವಿಸುವ ನಾವು ಬಾಳೆ ಹಣ್ಣಿನ ಸಿಪ್ಪೆಯನ್ನು ಎಸೆದುಬಿಡುತ್ತೇವೆ ಆದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ ಬನ್ನಿ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅನೇಕ ರೀತಿಯ ಆರೋಗ್ಯಕರ ಅಂಶಗಳು ಇವೆ.ಈ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ ಹಾಗೆಯೇ ನಾರಿನ ಅಂಶ , ಮೆಗ್ನಿಶಿಯಂ , ಪೊಟಾಶಿಯಂ ಕೂಡ ಇದೆ.ಇನ್ನು ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಈ ವಿಧಾನಗಳನ್ನು ಅನುಸರಿಸಿ ಮುಖದ ಮೇಲೆ ಅತಿ ಬೇಗ ಸುಕ್ಕು ಆಗದಿರಲು , ವಯಸ್ಸಾದಂತೆ ಕಾಣದಿರಲು ಬಾಳೆಹಣ್ಣಿನ ಸಿಪ್ಪೆಯನ್ನು ವೃತ್ತಾಕಾರವಾಗಿ ಮುಖದ ಮೇಲೆ ಉಜ್ಜಿ ಒಂದರಿಂದ 2 ಗಂಟೆ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.ಹೀಗೆ ಪ್ರತಿದಿನ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯಕಾರಿ

ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೆ ದೊಡ್ಡ ಸಮಸ್ಯೆಯಾಗಿರುತ್ತದೆ.ಅಂಥವರು 2 ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ ಇದರಿಂದ ನೀವು ಶೀಘ್ರದಲ್ಲೇ ಬೆಳ್ಳಗೆ ಹೊಳೆಯುವ ಹಲ್ಲನ್ನು ಪಡೆಯಬಹುದು.

ನರಹುಲಿ ಸಮಸ್ಯೆಗೆ ಪರಿಹಾರ

ನರಹುಲಿ ಎಂಬುದು ಹೆಚ್ಚಿನವರಲ್ಲಿ ಕಂಡು ಬರುವ ಸಾಮಾನ್ಯ ಚರ್ಮದ ಸಮಸ್ಯೆ ಆಗಿದೆ.ನೀವು ಚರ್ಮದ ನರಹುಲಿಗಳನ್ನು ಹೊಂದಿದ್ದರೆ ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.ನಿಧಾನವಾಗಿ ನರ ಹುಲಿಗಳ ಮೇಲೆ ಈ ಸಿಪ್ಪೆಯನ್ನು ಇಟ್ಟು ಉಜ್ಜಿರಿ ಇದರಿಂದ ನರಹುಲಿಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಮುಂದೆ ಮತ್ತೆ ನರಹುಲಿ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ .

ಮೊಡವೆಗಳಿಗೆ ಉತ್ತಮ ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಔಷಧೀಯ ಗುಣಗಳು ಮೊಡವೆಗಳನ್ನು ಹೋಗಲಾಡಿಸುತ್ತದೆ.

ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತೀ ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆಗಳ ಮೇಲೆ ನಿಧಾನಕ್ಕೆ ಮಸಾಜ್ ಮಾಡಿದ ನಂತರ ಇದನ್ನು ಹಾಗೇ 1 ಗಂಟೆಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಬೇಗನೆ ಮೊಡವೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

ಕಲೆಗಳ ನಿವಾರಣೆಗೆ ಉತ್ತಮ ಮುಖದಲ್ಲಿ ಮೊಡವೆ ಕಲೆ , ಪಿಗ್ಮೆಂಟೇಶನ್ ಕಲೆಗಳಿದ್ದರೆ ಇದನ್ನು ನಿವಾರಿಸಲು ಕೂಡ ಬಾಳೆಹಣ್ಣಿನ ಸಿಪ್ಪೆ ತುಂಬಾನೇ ಸಹಾಯಕಾರಿ.ಬಾಳೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಕಲೆಗಳ ಮೇಲೆ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತೊಳೆಯಿರಿ.ಹೀಗೆ ಕನಿಷ್ಠ 30 ದಿನ ಮಾಡಿದರೆ ಸಾಕು ನಿಮ್ಮ ಮುಖ ಕಲೆ ರಹಿತವಾಗುವುದು ಖಂಡಿತ.

ಚರ್ಮದ ಸೋರಿಯಾಸಿಸ್ ಅನ್ನು ಹೋಗಲಾಡಿಸಬಹುದು ಸೋರಿಯಾಸಿಸ್ ಇರುವ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.ಬಾಳೆಹಣ್ಣಿನ ಸಿಪ್ಪೆ ತೇವಾಂಶವುಳ್ಳ ಗುಣಲಕ್ಷಣಗಳನ್ನು ಹೊಂದಿದ್ದು ಇದು ತ್ವರಿತವಾಗಿ ಸೋರಿಯಾಸಿಸ್ ಸಮಸ್ಯೆಗಳನ್ನು ಗುಣಪಡಿಸುತ್ತದೆ ಮತ್ತು ನೀವು ಇದರ ಗಮನಾರ್ಹ ಫಲಿತಾಂಶಗಳನ್ನು ಪಡೆಯಬಹುದು.ಇನ್ನೂ ಬಾಳೆಹಣ್ಣಿನ ಸಿಪ್ಪೆಯಿಂದ ಮುಖದ ಕಾಂತಿ ಹೆಚ್ಚುತ್ತದೆ.

ಮುಖದ ಸುಕ್ಕು ನಿವಾರಣೆಯಾಗುತ್ತದೆ.

ಸೂರ್ಯನಿಂದ ಆಗುವ ಹಾನಿಯಿಂದ ನಮ್ಮ ತ್ವಚೆಯನ್ನು ಕಾಪಾಡುತ್ತದೆ. ಇನ್ನು ಮುಂದೆ ಯಾವತ್ತೂ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯಬೇಡಿ. ಬೇಡದ ಕ್ರೀಮ್ ಗಳನ್ನು ಬಳಸುವುದಕ್ಕಿಂತ ವಾರದಲ್ಲಿ 3 ದಿನವಾದರೂ ತಪ್ಪದೇ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದರೆ ಮುಖ ಕಲೆ ರಹಿತ ಹಾಗೂ ಸುಂದರವಾಗುವುದು ಖಂಡಿತ ಯಾಕೆಂದರೆ ಇದರಲ್ಲಿ ವಿಟಮಿನ್ ಸಿ ಇದೆ.
ನಾವೆಲ್ಲ ದುಬಾರಿ ವಿಟಮಿನ್ ಸಿ ಇರುವ ಸೆರಮ್ ಬಳಸುವ ಬದಲು ಸುಲಭವಾಗಿ ಸಿಗುವ ಬಾಳೆ ಹಣ್ಣನ್ನು ಸೇವಿಸಿ ಅದರ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here