Kasturi: ‘ಬೆಂಗಳೂರಿಗೆ ಕಾವೇರಿ ನೀರೇ ಬೇಕಾ? 75% ಕಾವೇರಿ ನೀರು ತಮಿಳುನಾಡಿಗೆ ಸೇರಿದ್ದು”: ಕಾವೇರಿ ವಿವಾದದ ಬಗ್ಗೆ ನಟಿ ಕಸ್ತೂರಿ ಮಾತು

Written by Pooja Siddaraj

Published on:

Kasturi: ಕಾವೇರಿ ವಿವಾದ ನಮ್ಮ ರಾಜ್ಯದಲ್ಲಿ ಈಗಿನಿಂದ ಅಲ್ಲ, ಸಾಕಷ್ಟು ವರ್ಷಗಳಿಂದ ಇದೆ. ಯಾವ ಪಕ್ಷದವರು ಏನೇ ಪ್ರಯತ್ನ ಮಾಡಿದರು ಕೂಡ ಕಾವೇರಿ ವಿವಾದ ಬಗೆ ಹರಿಯುವ ಹಾಗೆ ಕಾಣುತ್ತಿಲ್ಲ. ಚಿತ್ರರಂಗದವರು ಕೂಡ ಹೋರಾಟ ಮಾಡಿದ್ದಾರೆ, ಏನೇ ಪ್ರಯತ್ನ ಮಾಡಿದರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇರುವ ಬಿಕ್ಕಟ್ಟು ಮಾತ್ರ ಬಗೆಹರಿಯುತ್ತಿಲ್ಲ. ಕೆಲವರು ನಮ್ಮ ರಾಜ್ಯದ ಜನರ ವಿರುದ್ಧವೇ ನಿಂತಿದ್ದಾರೆ..

ಇಲ್ಲಿನ ಕಲಾವಿದರು ಕಾವೇರಿ ಹೋರಾಟಕ್ಕೆ ಬೆಂಬಲಿಸಿ, ಕಾವೇರಿ ನೀರು ಕರ್ನಾಟಕಕ್ಕೆ ಸೇರಿದ್ದು ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಇತ್ತ ನಟಿ ಕಸ್ತೂರಿ ಅವರು ಕಾವೇರಿ ವಿವಾದದ ಬಗ್ಗೆ ಮಾತನಾಡಿ, ಕರ್ನಾಟಕ ರಾಜ್ಯದ ಬಗ್ಗೆ ಕಠೋರವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ ನಟಿ ಕಸ್ತೂರಿ..

“200 ವರ್ಷಗಳಿಂದ ಕರ್ನಾಟಕ ರಾಜ್ಯ ಇದೇ ಥರ ಮೊಂಡಾಟ ಮಾಡುತ್ತಿರುವ ವಿಷಯ ನನಗೆ ಗೊತ್ತಿದೆ..ಈಗಿನ ವಿಷಯ ಅಲ್ಲ ಇದು, ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ನಡುವೆ ಇದೇ ವಿಚಾರಕ್ಕೆ ಬಹಳ ಹಿಂದೆಯೇ ಒಪ್ಪಂದವಾಗಿ ತೀರ್ಪು ಕೊಟ್ಟಿದ್ದಾರೆ. ಭೂಪಟದ ಮೇಲ್ಭಾಗದಲ್ಲಿ ಇರುವ ರಾಜ್ಯಕ್ಕೆ ನದಿಗಳ ಮೇಲೆ ಹಕ್ಕು ಕಡಿಮೆ. ನದಿ ಹುಟ್ಟುವ ಪ್ರದೇಶದವರಿಗೆ ಹಕ್ಕು ಕಡಿಮೆ ಇರುತ್ತದೆ. ಒಂದು ನದಿ ಮಳೆ, ನೀರು ಎಲ್ಲವನ್ನು ಸೇರಿಸಿಕೊಂಡು, ಬೇರೆ ನದಿಗಳ ಜೊತೆ ಸೇರಿ ಸಾಗರಕ್ಕೆ ತಲುಪುತ್ತದೆ, ಸಾಗರದ ಜೊತೆ ಸೇರಿದಾಗ ನದಿಯ ಜೀವ ಉಳಿಯುವುದು.

ಕಾವೇರಿ ನದಿಯ ನೀರು ಸಾಕಷ್ಟು ಕಡೆ ಈಗ ನಿಂತ ನೀರು ಆಗಿರೋದಕ್ಕೆ ಕಾರಣ ಅಣೆಕಟ್ಟಿನಿಂದ ಒಂದು ನದಿಯನ್ನು ತಡೆಯುತ್ತಿರುವುದು. ಕೃಷಿಗೆ ಅಣೆಕಟ್ಟಿನ ಅಗತ್ಯವಿದೆ ಆದರೆ ನಮ್ಮ ರಾಜ್ಯದಲ್ಲಿ ಮಳೆ ಇಲ್ಲ ಎಂದು ಮೇಲಿಂದ ಮೇಲೆ ಕ್ಯಾತೆ ತೆಗೆಯುತ್ತಿರುವವರು ಇದನ್ನ ತಿಳಿದುಕೊಂಡಿರಬೇಕು. ಅಲ್ಲಿನ ರಾಜಕಾರಣಿಗಳು ಜನರನ್ನು ಯಾಮಾರಿಸುತ್ತಿದ್ದಾರೆ, ಕಲಾವಿದರಿಗೂ ಈ ವಿಷಯ ಗೊತ್ತಿದ್ದ ಹಾಗೆ ಕಾಣುತ್ತಿಲ್ಲ, ಶಿವಣ್ಣ ಅನಂತ್ ನಾಗ್ ಉಪೇಂದ್ರ ಮಾತಾಡಿರೋದು ನೋಡಿದ್ದೇನೆ. ನಟ ನಟಿಯರು ಕಾವೇರಿ ಅವರದ್ದೇ ಎಂದುಕೊಂಡಿದ್ದಾರೆ.

ಕಾವೇರಿ ವಿಷಯದಲ್ಲಿ 75% ತಮಿಳುನಾಡಿಗೆ, 25% ಕರ್ನಾಟಕಕ್ಕೆ ಸೇರಬೇಕು ಎಂದು ಒಪ್ಪಂದ ಆಗಿತ್ತು, ಈ ಥರ ಒಪ್ಪಂದ ಆಗಿದ್ದು ಯಾಕೆ ಎಂದು ಅವರಿಗೆ ಗೊತ್ತಿಲ್ಲ. 36 ದೊಡ್ಡ ನದಿಗಳು ಆ ರಾಜ್ಯದಲ್ಲಿದೆ, ಆದರೆ ಬೆಂಗಳೂರಿಗೆ ಕುಡಿಯುವ ನೀರು ಕಾವೇರಿಯೇ ಎಂದು ಈ ಹಿಂದಿನ ಸರ್ಕಾರ ಹೇಳಿತ್ತು. ಆ ಥರ ಹೇಳೋದು ಚೆನ್ನಾಗಿರುತ್ತೆ ಅಂತ ಹೇಳ್ತಾರೆ. ಅಲ್ಲಿರೋ ಸಣ್ಣ ನದಿಗಳನ್ನ ಬಿಟ್ಟು, ಕಾವೇರಿ ಇಂದಾನೆ ಕುಡಿಯುವ ನೀರು ಸಿಗೋದು ಎಂದು ಹೇಳಿ ಬಿಲ್ಡಪ್ ಕೊಡ್ತಾರೆ. ಇದರಿಂದ ಬೆಂಗ್ಳೂರಿಗೆಕಾವೇರಿ ನೀರು ಆಧಾರ ಎನ್ನುವ ಹಾಗೆ ಆಗಿದೆ.

ಇದೆಲ್ಲಾ ಹುಚ್ಚುತನ, ಅಲ್ಲಿಯೇ ಕೆರೆಗಳಿವೆ. ಆದರೆ ಆ ಕೆರೆಗಳು ಚೆನ್ನಾಗಿಲ್ಲ, ಒಂದರಲ್ಲಿ ಕೆಮಿಕಲ್ ಇದ್ದರೆ, ಇನ್ನೊಂದು ಕೊಳಕಾಗಿದೆ, ಮತ್ತೊಂದರಲ್ಲಿ ನೊರೆ ಬರುತ್ತದೆ. ಕೆರೆಗಳ ಪರಿಸ್ಥಿತಿ ಹೀಗಿದ್ದಾಗ ಬೆಂಗಳೂರಿಗೆ ಅಲ್ಲಿನ ಕೆರೆಗಳಿಂದ ನೀರು ಸಿಗುತ್ತಿಲ್ಲ. ಕಾವೇರಿ ನೀರನ್ನ ಬೆಂಗಳೂರಿಗೆ ಕೊಟ್ಟರೆ, ಇಲ್ಲಿನ ಜನರು ನಾಲಿಗೆ ಚಾಚಿಕೊಂಡಿ ಇರಬೇಕಾ? ಕಾನೂನಿನ ಪ್ರಕಾರ, ನ್ಯಾಯದ ಪ್ರಕಾರ ಇದು ಮೋಸ. ರಾಜಕೀಯದ ಕಾರಣಕ್ಕೆ ಇದೆಲ್ಲಾ ನಡೆಯುತ್ತದೆ.

ಇಲ್ಲಿ ನಾನು ಕಲಾವಿದರ ಬಗ್ಗೆ ಮಾತಾಡಲ್ಲ, ಅವರು ಬಂದು ಜೈಲರ್ ಸಿನಿಮಾದಲ್ಲಿ ನಟಿಸುತ್ತಾರೆ, ನಮ್ಮವರು ಅಲ್ಲಿಗೆ ಹೋಗುತ್ತಾರೆ. ಕಲಾವಿದರಿಗೆ ಎಲ್ಲರು ಬೇಕು. ಇಲ್ಲಿ ಜನರು ಯಾಮಾರುತ್ತಿದ್ದಾರೆ, ರಾಜಕಾರಣಿಗಳು ಯಾಮಾರಿಸುತ್ತಿದ್ದಾರೆ..” ಎಂದು ಹೇಳಿದ್ದಾರೆ ನಟಿ ಕಸ್ತೂರಿ.

Leave a Comment