Kavya Shaiva: ಸೆಂಟ್ರಲ್ ಗವರ್ನಮೆಂಟ್ ಕೆಲಸ ಬಿಟ್ಟು ನಟನೆಗೆ ಬಂದವರು ಕೆಂಡಸಂಪಿಗೆ ಹೀರೋಯಿನ್!

Written by Pooja Siddaraj

Published on:

Kavya Shaiva: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕೆಂಡಸಂಪಿಗೆ ಧಾರವಾಹಿ ಜನರ ಮೆಚ್ಚುಗೆ ಗಳಿಸಿದೆ. ಈ ಧಾರವಾಹಿಯಲ್ಲಿ ಚಂದನವನದ ಹಿರಿಯನಟರಾದ ದೊಡ್ಡಣ್ಣ ಅವರು, ನಟಿ ಜ್ಯೋತಿ ರೈ ಸೇರಿದಂತೆ ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ. ಕೆಂಡಸಂಪಿಗೆ ಧಾರವಾಹಿ ನಟಿ ಕಾವ್ಯ ಶೈವಾ ಅವರು ನಟನಿಗಾಗಿ ಸೆಂಟ್ರಲ್ ಗವರ್ನಮೆಂಟ್ ಕೆಲಸವನ್ನೇ ಬಿಟ್ಟು ಬಂದಿದ್ರು ಗೊತ್ತಾ?

ನಟಿ ಕಾವ್ಯ ಶೈವಾ ಅವರು ಇಂದು ಕೆಂಡಸಂಪಿಗೆ ಧಾರವಾಹಿ ಮೂಲಕ ಸುಮನಾ ಪಾತ್ರದಲ್ಲಿ ಯಶಸ್ಸು ಗಳಿಸಿದ್ದಾರೆ. ಇಂದು ಇವರನ್ನು ಜನರು ಸುಮನಾ ಎಂದೇ ಗುರುತಿಸುತ್ತಾರೆ. ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಹುಡುಗಿ ಸುಮನಾ, ಕುಟುಂಬಕ್ಕೆ ಆದ್ಯತೆ ಕೊಡುತ್ತಿದ್ದವಳ ಬದುಕಿನಲ್ಲಿ ಆಗುವ ಬದಲಾವಣೆಗಳು, MLA ಜೊತೆಗೆ ಮದುವೆಯಾಗಿ ಏನೆಲ್ಲ ಆಗುತ್ತದೆ, ಅವಳ ಸಂಸಾರ ಹೇಗಿರುತ್ತದೆ ಎನ್ನುವ ದಾರಿಯಲ್ಲಿ ಈ ಕಥೆ ಸಾಗುತ್ತಿದೆ.

ಕಾವ್ಯ ಶೈವಾ ಅವರು ಮೂಲತಃ ಕೆ.ಆರ್.ಪೇಟೆಗೆ ಮೂಲದವರು, ಇವರಿಗಿಂತ 2 ವರ್ಷ ಚಿಕ್ಕವರಾದ ತಮ್ಮ ಇದ್ದು, ಅವರ ಹೆಸರು ಕಾರ್ತಿಕ್. ಈಗ ಕಾವ್ಯ ಬೆಂಗಳೂರಿನಲ್ಲೇ ಇದ್ದಾರೆ. ಹಬ್ಬ ಇದ್ದಾಗ ಮಾತ್ರ ಊರಿಗೆ ಹೋಗಿ ಬರುತ್ತಾರಂತೆ. ಇವರ ಹೆಸರು ಕಾವ್ಯ ಮಾತ್ರ, ಆದರೆ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡುವಾಗ, ತಮ್ಮ ಹೆಸರಿನ ಜೊತೆಗೆ ಇನ್ನೇನಾದರೂ ಇಡಬೇಕು ಎಂದು..

ವೀರಶೈವ ಸಮುದಾಯಕ್ಕೆ ಸೇರಿದವರಾದ ಕಾರಣ ಶೈವಾ ಎಂದು ಹೆಸರು ಸೇರಿಸಿದ್ದಾರೆ. ಡಿಪ್ಲೊಮಾ ಓದಿದ್ದ ಕಾವ್ಯ ಅವರಿಗೆ ಸೆಂಟ್ರಲ್ ಗವರ್ನಮೆಂಟ್ ಕೆಲಸ ಕೂಡ ಸಿಕ್ಕಿತ್ತಂತೆ. ಮನೆಯಲ್ಲಿ ಕೂಡ ಆ ಕೆಲಸಕ್ಕೆ ಹೋಗು ಎಂದು ಹೇಳಿದ್ದರಂತೆ. ಆದರೆ ಕಾವ್ಯ ಅವರಿಗೆ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ, ಸೆಂಟ್ರಲ್ ಗವರ್ನಮೆಂಟ್ ಕೆಲಸವನ್ನು ಬಿಟ್ಟು ನಟನೆ ಶುರು ಮಾಡಿದರು. ಮೊದಲಿಗೆ ಇವರಿಗೆ ನಾಯಕಿಯ ಪಾತ್ರ ಸಿಗಲಿಲ್ಲ..

ಕಮಲಿ ಧಾರವಾಹಿಯಲ್ಲಿ ಹಾಗೂ ಇನ್ನು ಕೆಲವು ಧಾರಾವಾಹಿಗಳಲ್ಲಿ ಸಣ್ಣ ಪಾತ್ರದಲ್ಲಿ, ಎರಡನೇ ನಾಯಕಿ ಪಾತ್ರದಲ್ಲಿ ನಟಿಸಿದರು. ಬಳಿಕ ಅವರಿಗೆ ತೆಲುಗಿನಲ್ಲಿ ನಾಯಕಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ತೆಲುಗಿನಲ್ಲಿ ನಟಿಸುತ್ತಿದ್ದ ಕಾವ್ಯ ಅವರು ಕೆಂಡಸಂಪಿಗೆ ಧಾರವಾಹಿ ಮೂಲಕ ಮತ್ತೆ ಕನ್ನಡಕ್ಕೆ ನಾಯಕಿಯ ಪಾತ್ರದ ಮೂಲಕ ಬಂದಿದ್ದಾರೆ.

Leave a Comment