Keerthy Suresh: ನೀಲಿ ಸೀರೆಯಲ್ಲಿ ಮಿಂಚಿದ ಕೀರ್ತಿ ಸುರೇಶ್! ವಾವ್ ಎಂದ ಅಭಿಮಾನಿಗಳು!

0 1

Keerthy Suresh: ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಿನ ಮಹಾನಟಿ ಎಂದು ಹೆಸರು ಮಾಡಿರುವವರು ನಟಿ ಕೀರ್ತಿ ಸುರೇಶ್. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಕೀರ್ತಿ ಸುರೇಶ್ ಅವರು ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕೀರ್ತಿ ಸುರೇಶ್ ಅವರು ಇದೀಗ ಫೋಟೋಶೂಟ್ ಮೂಲಕ ಕಂಗೊಳಿಸಿದ್ದಾರೆ.

ನಟಿ ಕೀರ್ತಿ ಸುರೇಶ್ ಅವರದ್ದು ಸಿನಿಮಾ ಕುಟುಂಬ, ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಇವರು ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು, ಕನ್ನಡದಲ್ಲಿ ಅಣ್ಣಾವ್ರ ಜೊತೆಗೆ ತಂಗಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಅವರು ಮಲಯಾಳಂ ಚಿತ್ರರಂಗದ ಹೆಸರಾಂತ ಪ್ರೊಡ್ಯುಸರ್ ಆಗಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ಒಬ್ಬರು ಅಕ್ಕ ಕೂಡ ಇದ್ದಾರೆ.

ಕೀರ್ತಿ ಸುರೇಶ್ ಅವರು ಚಿತ್ರರಂಗಕ್ಕೆ ಬಾಲ ಕಲಾಗಿದೆಯಾಗಿ ನಟಿಸಿದರು, ಬಳಿಕ ಹೀರೋಯಿನ್ ಆಗಿಯೂ ಎಂಟ್ರಿ ಕೊಟ್ಟರು. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ತೆಲುಗಿನ ಮಹಾನಟಿ ಸಿನಿಮಾ, ಇದು 50 ಮತ್ತು 60ರ ದಶಕದ ಖ್ಯಾತ ನಟಿ ಮಹಾನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ ಆಗಿತ್ತು.

ಈ ಸಿನಿಮಾಗೆ ಕೀರ್ತಿ ಸುರೇಶ್ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದರು. ಅದಾದ ಬಳಿಕ ಕೀರ್ತಿ ಸುರೇಶ್ ಅವರು ಮಹಿಳಾ ಪ್ರಧಾನ ಸಿನಿಮಾಗಳು ಜೊತೆಗೆ ಕಮರ್ಷಿಯಲ್ ಸಿನಿಮಾಗಳು ಎರಡು ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ನಟ ನಾನಿ ಅವರೊಡನೆ ದಸರಾ ಸಿನಿಮಾದಲ್ಲಿ ನಟಿಸಿದರು, ಆ ಸಿನಿಮಾದ ಪಾತ್ರ ಒಳ್ಳೆಯ ಹೆಸರನ್ನು ತಂದುಕೊಟ್ಟಿತು, ಜೊತೆಗೆ ಸೂಪರ್ ಹಿಟ್ ಕೂಡ ಆಯಿತು.

ಹೀಗೆ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಕೀರ್ತಿ ಸುರೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಸ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಇವರು ನೀಲಿ ಸೀರೆ ಧರಿಸಿ ಹೊಸ ಫೋಟೋಶೂಟ್ ಮಾಡಿಸಿದ್ದು, ಅವುಗಳು ಈಗ ವೈರಲ್ ಆಗಿದೆ. ಜೊತೆಗೆ ಅಭಿಮಾನಿಗಳು ಕೀರ್ತಿ ಸುರೇಶ್ ಅವರ ಸೌಂದರ್ಯ ನೋಡಿ ಫಿದಾ ಆಗಿದ್ದಾರೆ.

Leave A Reply

Your email address will not be published.