Latest Breaking News

ಖಾಲಿ ಹೊಟ್ಟೆಲಿ ಕಾಫಿ ಕುಡೀತೀರಾ ಹಾಗಾದ್ರೆ ಇದನ್ನು ನೋಡಿ

0 2,638

Get real time updates directly on you device, subscribe now.

ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಕೈಯಲ್ಲಿ ಕಾಫಿ ಇಲ್ಲ ಎಂದರೆ ಎಷ್ಟೋ ಜನರಿಗೆ ಆ ದಿನವೇ ವ್ಯರ್ಥ ಎನಿಸುತ್ತದೆ ಕಾಫಿ ಕುಡಿದರೆ ಆ ದಿನ ಚೆನ್ನಾಗಿರುತ್ತದೆ ಎನ್ನುವವರು ಬಹಳಷ್ಟು ಮಂದಿ ಇದ್ದಾರೆ ಬೆಳಗಿನ ಜಾವ ಕಾಫಿ ಸಿಗದೇ ಹೋದರೆ ಎಷ್ಟೋ ಮನೆಗಳಲ್ಲಿ ಮಹಾಯುದ್ಧವೇ ನಡೆದ ಹೋಗುತ್ತದೆ ಬಹುತೇಕ ಜನರ ಜೀವನವೇ ಆಗೋಗಿದೆ ಈ ಕಾಫಿ ಎಷ್ಟೋ ಜನರಿಗೆ ಕಾಫಿ ತುಂಬಾ ಪ್ರಿಯವಾಗಿದೆ ಆದರೆ ಅದನ್ನು ಬೆಳ್ಳಂಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿದರೆ ಅಷ್ಟೇ ಪರಿಣಾಮಕಾರಿಯಾಗುತ್ತದೆ. ಕಾಫಿಯನ್ನು ಕುಡಿಯುವುದು ತಪ್ಪಲ್ಲ ಅದನ್ನು ಯಾವ ಸಮಯದಲ್ಲಿ ಕುಡಿಯುತ್ತೇವೆ ಅನ್ನೋದು ಮುಖ್ಯ ಹಾಗಾದರೆ ಕಾಲಿ ಹೊಟ್ಟೆಯಲ್ಲಿ ಕಾಫಿಯನ್ನು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎಂದು ಹಿಂದಿನ ಸಂಚಿಕೆಯಲ್ಲಿ ತಿಳಿಯೋಣ

ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ನೀವು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಇದು ನಿಮ್ಮ ಜೀರ್ಣಾಂಗದಲ್ಲಿ ತುಂಬಾ ಪರಿಣಾಮವನ್ನು ಬೀರುತ್ತದೆ ಇದರಲ್ಲಿ ಇರುವ ಕೆಫಿನ್ ಅಂಶ ಹೊಟ್ಟೆಯಲ್ಲಿ ಆಸಿಡ್ ಉತ್ಪಾದನೆಗೆ ಸಹಾಯ ಆಗುತ್ತದೆ ಇದು ನಿಮ್ಮ ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟು ಮಾಡುತ್ತದೆ ಇದು ಅಜೀರ್ಣ ಮತ್ತು ಎದೆ ಉರಿ ಅಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ

ಇನ್ನು ಕಾಲಿ ಹೊಟ್ಟೆಯಲ್ಲಿ ಕಾಫಿಯನ್ನು ಸೇವನೆ ಮಾಡುವವರು ಹೆಚ್ಚು ಬೇಗ ಇರಿಟೇಶನ್ ಗೆ ಒಳಗಾಗುತ್ತಾರೆ ಒಂದು ದಿನ ಇವರು ಬೆಳಗಿನ ಜಾವ ಕಾಫಿ ಕುಡಿಯದಿದ್ದರೆ ಆ ದಿನಪೂರ್ತಿ ಸಿಡುಕರಾ ರೀತಿಯಲ್ಲಿ ವರ್ತಿಸುತ್ತಾರೆ ಇದು ನಮ್ಮ ವರ್ತನೆಯ ಮೇಲು ಸಹ ಭಾರಿ ದೊಡ್ಡ ಪರಿಣಾಮ ಬೀರುತ್ತದೆ

ಹಾರ್ಮೋನ್ ಗಳ ಅಸಮತೋಲನಕ್ಕೆ ಇದೇ ಕಾಫಿ ಕಾರಣ ಆಗುತ್ತದೆ ಬೆಳ್ಳಂ ಬೆಳಗೆ ನೀವು ಏನನ್ನು ಸೇವನೆ ಮಾಡದೆ ನೇರವಾಗಿ ಕಾಫಿಯನ್ನು ಸೇವನೆ ಮಾಡಿದರೆ ಇದು ನಿಮ್ಮ ದೇಹದಲ್ಲಿರುವ ಹಾರ್ಮೋನ್ ಗಳಿಗೆ ಏರುಪೇರು ಮಾಡುತ್ತದೆ ಇದು ದೇಹದ ಬದಲಾವಣೆಗೆ ತನ್ನನ್ನು ತಾನೇ ಎಡೆ ಮಾಡಿಕೊಡುತ್ತದೆ

ಕೆಲವರು ನಾವು ದಿನವಿಡಿ ಆಕ್ಟಿವ್ ಆಗಿ ಇರಬೇಕು ಎಂದರೆ ಬೆಳಗಿನ ಜಾವ ಕಾಫಿ ಕುಡಿಯಬೇಕು ಎಂದುಕೊಂಡಿರುತ್ತಾರೆ ಬೆಳ್ಳಂಬೆಳಗ್ಗೆ ನೀವು ಕುಡಿಯುವ ಕಾಫಿ ನಿಮ್ಮನ್ನು ಯಾವುದೇ ಕಾರಣಕ್ಕೂ ಆಕ್ಟಿವ್ ಮಾಡುವುದಿಲ್ಲ ಇದು ನಿಮ್ಮನ್ನು ನಿದ್ರೆಗೆ ತಳ್ಳುತ್ತದೆ ಇದರಿಂದ ತಲೆನೋವು ಸಂಕಟ ಇನ್ನು ಮುಂತಾದ ತೊಂದರೆಗಳು ಕಂಡು ಬರುತ್ತದೆ

ಕಾಫಿ ಕುಡಿಯುವುದು ತಪ್ಪಲ್ಲ ಆದರೆ ಅದನ್ನು ಸೇವಿಸುವುದಕ್ಕೆ ಕೆಲವು ಕ್ರಮಗಳು ಇದೆ ಕಾಫಿಯನ್ನು ಯಾವುದೇ ಕಾರಣಕ್ಕೂ ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬಾರದು ತಿಂಡಿ ಮಾಡಿಕೊಂಡು ನಂತರ ಕುಡಿಯಬೇಕು ಮತ್ತು ಹೆಚ್ಚಾಗಿ ಕಾಫಿಯನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು, ಇದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ

Get real time updates directly on you device, subscribe now.

Leave a comment