Khushbu: ನಟಿ ಖುಷ್ಬೂ ಅವರ ಕಾಲು ತೊಳೆದು ನಾರಿ ಪೂಜೆ ಮಾಡಿದ ಕೇರಳದ ದೇವಸ್ಥಾನ

Written by Pooja Siddaraj

Published on:

ನಟಿ ಖುಷ್ಬೂ ಅವರು 80ರ ದಶಕದಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿರುವವರು. ತಮಿಳು ಚಿತ್ರರಂಗದ ಮೂಲಕ ನಟನೆ ಶುರು ಮಾಡಿದ ಖುಷ್ಬೂ ಅವರು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಖುಷ್ಬೂ ಅವರು ಈಗ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ನಾರಿ ಪೂಜೆ ವಿಚಾರದಿಂದ ಸುದ್ದಿಯಾಗಿದ್ದಾರೆ.

80ರ ದಶಕದಲ್ಲಿ ಅತ್ಯಂತ ಯಶಸ್ಸು ಪಡೆದಿದ್ದ ನಟಿಯರಲ್ಲಿ ಖುಷ್ಬೂ ಅವರು ಕೂಡ ಒಬ್ಬರು. ಆಗಿನ ಲಕ್ಕಿ ಹೀರೋಯಿನ್ ಖುಷ್ಬೂ ಅವರು ಅಂದಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟನೆ ಮಾಡಿದ್ದರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಡನೆ ರಣಧೀರ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಬಳಿಕ ಯುಗಪುರುಷ, ಶಾಂತಿ ಕ್ರಾಂತಿ, ಜೀವನದಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

ಕನ್ನಡದಲ್ಲಿ ಕೂಡ ಖುಷ್ಬೂ ಅವರಿಗೆ ಹೆಚ್ಚಿನ ಅಭಿಮಾನಿ ಬಳಗ ಇತ್ತು. ದಕ್ಷಿಣದ ಎಲ್ಲಾ ಡೈರೆಕ್ಟರ್ ಗಳು ಕೂಡ ಇವರೊಡನೆ ಸಿನಿಮಾ ಮಾಡಬೇಕು ಎಂದು ಆಸೆಪಡುತ್ತಿದ್ದರು. ಕೆರಿಯರ್ ನಲ್ಲಿ ಪೀಕ್ ನಲ್ಲಿದ್ದಾಗ ನಟಿ ಖುಷ್ಬೂ ಅವರು ತಮಿಳಿನ ಖ್ಯಾತ ನಿರ್ದೇಶಕ ಸುಂದರ್ ಅವರನ್ನು ಪ್ರೀತಿಸಿ ಮದುವೆಯಾದರು. ಖುಷ್ಬೂ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಇತ್ತೀಚಿನ ವರ್ಷಗಳಲ್ಲಿ ಖುಷ್ಬೂ ಅವರು ಸಿನಿಮಾದಲ್ಲಿ ನಟಿಸುತ್ತಿರುವುದು ಕಡಿಮೆಯೇ.

ಆಗೊಮ್ಮೆ ಈಗೊಮ್ಮೆ ಮಾತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಖುಷ್ಬೂ. ಹೆಚ್ಚಾಗಿ ಇವರು ರಾಜಕೀಯದಲ್ಲೇ ಸಕ್ರಿಯವಾಗಿರುತ್ತಾರೆ. ಖುಷ್ಬೂ ಅವರು ಆಗಾಗ ತಾವು ನೀಡುವ ಹೇಳಿಕೆಗಳಿಂದ ಕೂಡ ಸುದ್ದಿಯಾಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಖುಷ್ಬೂ ಅವರು ಇದೀಗ ತಮಗೆ ನಾರಿ ಪೂಜೆ ಮಾಡಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

ಖುಷ್ಬೂ ಅವರಿಗೆ ನಾರಿ ಪೂಜೆ ನಡೆದಿರುವುದು ಕೇರಳದಲ್ಲಿ, ಕೇರಳದ ತ್ರಿಶೂರ್ ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ನಟಿ ಖುಷ್ಬೂ ಅವರ ಕಾಲು ತೊಳೆದು ನಾರಿಪೂಜೆ ಮಾಡಲಾಗಿದೆ..ಈ ಫೋಟೋಸ್ ಗಳನ್ನು ನಟಿ ಖುಷ್ಬೂ ಅವರೇ ಶೇರ್ ಮಾಡಿದ್ದು, ಪೂಜೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಹೆಣ್ಣುಮಕ್ಕಳನ್ನು ದೇವತೆಯ ಸ್ವರೂಪ ಎಂದು ಪೂಜೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಖುಷ್ಬೂ ಅವರಿಗೂ ಕೂಡ ನಾರಿ ಪೂಜೆ ಮಾಡಲಾಗಿದೆ.

ನಟಿ ಖುಷ್ಬೂ ಅವರ ಕಾಲು ತೊಳೆದು, ಪೂಜೆ ಮಾಡಲಾಗಿದೆ. ಕೇರಳದ ನಂಬಿಕೆಯ ರೀತಿಯಲ್ಲಿ, ಒಂದು ದೇವತೆಗೆ ಪೂಜೆ ಮಾಡುವ ಹಾಗೆ ನಟಿ ಖುಷ್ಬೂ ಅವರ ಕಾಲು ತೊಳೆದು ಅವರಿಗೆ ಪೂಜೆ ಮಾಡಲಾಗಿದೆ. ಈ ಪೂಜೆಗೆ ನಾರಿ ಪೂಜೆ ಎಂದು ಕರೆಯುತ್ತಾರೆ.. ನಾರಿ ಪೂಜೆ ಫೋಟೋಸ್ ಶೇರ್ ಮಾಡಿರುವ ಖುಷ್ಬೂ ಅವರು ಮನದಾಳದ ಮಾತುಗಳನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಎಲ್ಲರಿಗು ಧನ್ಯವಾದ ತಿಳಿಸಿದ್ದಾರೆ.

ಆದರೆ ನೆಟ್ಟಿಗರು ಖುಷ್ಬೂ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಿಂದೆ ಖುಷ್ಬೂ ಅವರು ನೀಡಿದ್ದ ಹೇಳಿಕೆಯನ್ನು ಮಧ್ಯಕ್ಕೆ ತಂದು, ಖುಷ್ಬೂ ಅವರು ಯಾವ ರೀತಿಯ ಆಸ್ತಿಕರು ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ನಾರಿ ಪೂಜೆ ವಿಚಾರ ಈಗ ಭಾರಿ ವೈರಲ್ ಆಗುತ್ತಿದೆ..

Leave a Comment