Kiccha Sudeep: ಬಿಗ್ ಬಾಸ್ ಇದು ಕನ್ನಡದ ಅತಿದೊಡ್ಡ ಮತ್ತು ಅತಿಹೆಚ್ಚು ಬೇಡಿಕೆ ಇರುವ ರಿಯಾಲಿಟಿ ಶೋ ಎಂದರೆ ತಪ್ಪಲ್ಲ. ಈ ಶೋ ಶುರುವಾಗುತ್ತೆ ಎಂದರೆ ಕನ್ನಡ ಕಿರುತೆರೆ ವೀಕ್ಷಕರು ಕಾಯುತ್ತಾ ಇರುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಚಾಲನೆ ಸಿಕ್ಕಿ ಒಂದು ವಾರ ಕಳೆದಿದೆ., ಕಿಚ್ಚ ಸುದೀಪ್ ಅವರು ಬಹಳಷ್ಟು ಟ್ವಿಸ್ಟ್ ಗಳ ಜೊತೆಗೆ 18 ಜನ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದರು.
ಇದೀಗ ಮೊದಲ ವಾರದ ಕಿಚ್ಚನ ಪಂಚಾಯಿತಿ ಮುಗಿದು, ಸ್ನೇಕ್ ಶ್ಯಾಮ್ ಅವರು ಮನೆಯಿಂದ ಹೊರಬಂದಿದ್ದಾರೆ. ಎರಡನೇ ವಾರ ಕೂಡ ಬಿಗ್ ಬಾಸ್ ಮನೆಯ ವಾಸ ಜಗಳ, ಕದನ ಇವುಗಳಿಂದ ಮುಂದುವರೆಯುತ್ತಿದೆ. ಇನ್ನು ಬಿಗ್ ಬಾಸ್ ಶೋನ ಮುಖ್ಯ ಆಕರ್ಷಣೆ ಎಂದರೆ ಅದು ಕಿಚ್ಚ ಸುದೀಪ್ ಅವರು. ಸುದೀಪ್ ಅವರಿಗಾಗಿಯೇ ಈ ಶೋ ನೋಡುವ ಸಾಕಷ್ಟು ಜನರಿದ್ದಾರೆ. ಪ್ರತಿ ವೀಕೆಂಡ್ ಎಪಿಸೋಡ್ ಎಲ್ಲರ ಮೆಚ್ಚುಗೆ ಪಡೆಯುತ್ತದೆ.
ವೀಕೆಂಡ್ ಎಪಿಸೋಡ್ ಗಳಲ್ಲಿ ಕಿಚ್ಚ ಸುದೀಪ್ ಅವರು ಮಾಡುವ ತಮಾಷೆಗಳು, ಸ್ಪರ್ಧಿಗಳು ತಪ್ಪು ಮಾಡಿದಾಗ ಸುದೀಪ್ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುವುದನ್ನು ಕೂಡ ಜನರು ತುಂಬಾ ಇಷ್ಟಪಡುತ್ತಾರೆ. ಸುದೀಪ್ ಅವರ ಕಾಮಿಡಿ ಟೈಮಿಂಗ್, ಸ್ಪರ್ಧಿಗಳ ಜೊತೆಗೆ ಅವರು ನಡೆದುಕೊಳ್ಳುವ ರೀತಿ, ಇದೆಲ್ಲವೂ ಕೂಡ ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಈ ಎಲ್ಲಾ ಕಾರಣಕ್ಕೆ ಈ ಶೋಗೆ ಬೆಸ್ಟ್ ನಿರೂಪಕ ಸುದೀಪ್ ಅವರೇ ಎನ್ನುವುದು ಎಲ್ಲರ ಅಭಿಪ್ರಾಯ.
ಇನ್ನು ಕನ್ನಡದಲ್ಲಿ ಬಿಗ್ ಬಾಸ್ ಶೋ ಬಗ್ಗೆ ಹೇಳುವುದಾದರೆ, ಕನ್ನಡದಲ್ಲಿ ಬಿಗ್ ಬಾಸ್ ಶೋ ಶುರುವಾಗಿ 9 ಸೀಸನ್ ಕಳೆದಿದ್ದು, 10ನೇ ಸೀಸನ್ ಶುರುವಾಗಿದೆ. ಕನ್ನಡದಲ್ಲಿ ಬಿಗ್ ಬಾಸ್ ಶೋ ಶುರುವಾದಾಗಿನಿಂದಲೂ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಕನ್ನಡದ ಬೆಸ್ಟ್ ನಿರೂಪಕರಲ್ಲಿ ಒಬ್ಬರು ಎಂದು ಕೂಡ ಹೆಸರು ಮಾಡಿದ್ದಾರೆ. ಇದೀಗ ಈ ಶೋಗೆ ಸುದೀಪ್ ಅವರು ಪಡೆಯುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಶುರುವಾಗಿದೆ.
ಸುದೀಪ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್, ಸಿನಿಮಾಗಳಿಗೆ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಸಿನಿಮಾಗೆ ಕೋಟಿಗಟ್ಟಲೇ ಸಂಭಾವನೆ ಪಡೆಯುವ ಸುದೀಪ್ ಅವರು ಬಿಗ್ ಬಾಸ್ ಶೋಗು ದುಬಾರಿ ಸಂಭಾವನೆ ಪಡೆಯುತ್ತಾರೆ. ಈ ಹಿಂದಿನ ಸೀಸನ್ ಗಿಂತ ಈ ಬಾರಿ ಸುದೀಪ್ ಅವರಿಗೆ ಹೆಚ್ಚಿನ ಸಂಭಾವನೆಯನ್ನೇ ಕೊಡಲಾಗುತ್ತಿದ್ದು, ಒಂದು ವಾರಕ್ಕೆ 75 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ನಟ ಕಿಚ್ಚ ಸುದೀಪ್.