Kirik Keerthi :ತಮ್ಮ ಬದುಕಿನ ಬಗ್ಗೆ ಮಾತನಾಡುವರ ಮೆಲೆ ಆಕ್ರೋಶಗೊಂಡ ಕಿರಿಕ್

0
36

Kirik Keerthi :ಮಾಜಿ ಬಿಗ್‌ಬಾಸ್ ಸ್ಪರ್ಧಿ, ನ್ಯೂಸ್ ವಾಹಿನಿ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯೊವೊಂದು ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಈಗ ಇದು ಸೊಶೀಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಕೀರ್ತಿ ಅವರ ಜೀವನದ ಕುರಿತಾಗಿ ಸಾಕಷ್ಟು ಊಹಾಪೋಹಗಳು ಕೂಡಾ‌ ಹರಿದಾಡಿದೆ. ಅದರ ಭಾಗವಾಗಿಯೇ ಕೀರ್ತಿ ಅವರ ದಾಂಪತ್ಯ ಜೀವನದಲ್ಲಿ ಸಹಾ ಸಮಸ್ಯೆ ಎದುರಾಗಿದ್ದು, ಅವರ ಪತ್ನಿಯೊಂದಿಗಿನ ಬಾಂಧವ್ಯದಲ್ಲಿ ಬಿರುಕು ಮೂಡಿದೆ ಎಂದೇ ಒಂದಷ್ಟು ವಿಚಾರಗಳು ಹರಿದಾಡಿದೆ.

ಅದು ಮುಂದುವರೆದು ಕೀರ್ತಿಯವರನ್ನು ಅವರ ಪತ್ನಿ ದೂರ ಮಾಡಿದ್ದಾರೆಂದು ಸಹಾ ಸುದ್ದಿಗಳು ಹರಡಿದೆ.ಇಷ್ಟೆಲ್ಲಾ ಸುದ್ದಿಗಳಾದ ಮೇಲೆ ಇದೀಗ ಸ್ವತಃ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂ ಲೈವ್ ಬಂದು ಮಾತನಾಡಿದ್ದಾರೆ. ಕಿರಿಕ್ ಕೀರ್ತಿ ಅವರು ತಮ್ಮ ಜೀವನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಮೇಲೆ ಸಿಟ್ಟಾಗಿದ್ದಾರೆ. ಕಿರಿಕ್ ಕೀರ್ತಿ ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರನ್ನು, ಅಪ್ಪಾ ಸೋಶಿಯಲ್ ಮೀಡಿಯಾ ಹೀರೋಗಳಾ, ದಯವಿಟ್ಟು ನಮ್ಮನ್ನು ಬದುಕಲು ಬಿಡಿ, ಕೈ ಮುಗಿದು ಬೇಡಿಕೊಳ್ಳುತ್ತೇಮೆನೆ ಎಂದಿದ್ದಾರೆ.

ನಮ್ಮ ಜೀವನದಲ್ಲಿ ಏನಾಗಿದೆ, ಏನಾಗಿಲ್ಲ ಅನ್ನೋದು ನಿಮಗೆ ಗೊತ್ತಿಲ್ಲ, ನಮಗೆ ಕ್ಲಾರಿಟಿ ಇಲ್ಲ ಅಂದಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗ್ತಿದೆ ಅನ್ನೋದು ನಮ್ಮ ಕುಟುಂಬಕ್ಕೆ ಇಲ್ಲ. ಏನೋ ಇರುತ್ತೆ, ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇದೆ. ನಿಮಗೆ ಬೇಕಾದಂತೆ ಕಲ್ಪಿಸಿಕೊಂಡು, ಅವನು ಹಾಗಂತೆ ಇವಳು ಈ ರೀತಿ ಮಾಡಿದ್ದಾರೆ ಅಂತೀರಾ ಅಲ್ವಾ, ಯಾರು ಬಂದು ನಿಮ್ಮ ಬಳಿ ಕಥೆ ಹೇಳಿದ್ದಾರೆ. ನಮ್ಮ ಮನೆಯ ಮತ್ತೊಂದು ರೂಮಿನಲ್ಲಿ ನೀವು ವಾಸವಿದ್ರಾ? ನಿಮಗೆ ಬೇಕಾದ ಮೆಸೇಜ್‌ಗಳು, ಕಾಮೆಂಟ್‌ಗಳು.

ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಿದ್ದ ಖುಷ್ಬೂನ ಟೀಕಿಸಿದವರಿಗೆ ನಟಿ ಕೊಟ್ರು ಖಡಕ್ ತಿರುಗೇಟು

ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಯಾರೋ ಒಂದಿಷ್ಟು ಊಹಾ ಪೋಹಗಳನ್ನು ಹರಿಡಿದಾಗ ಕ್ಲಾರಿಟಿ ಕೊಡಬೇಕು ಅದಕ್ಕೆ ಕ್ಲಾರಿಟಿ ಕೊಟ್ಟಿರುವೆ. ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೇವೆ. ನಾನು ಚೆನ್ನಾಗಿರುವೆ, ನಮ್ಮ ಬದುಕು ನಾವು ನೋಡಿಕೊಳ್ತಾ ಇದ್ದೀವಿ. ನಾನೇನಾದರೂ ಅಥವಾ ಅವಳೇನಾದರೂ ಬಂದು ನಿಮ್ಮ ಬಳಿ ಹೇಳಿದ್ದೀವಾ?  ಹತ್ತು ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಎನ್ನುವ ಅರಿವು ಇದೆ. ನಿಮ್ಮ‌ ಕಾಮೆಂಟ್ ಪೋಸ್ಟ್ ನೋಡಿ ನಮ್ಮ ಮನೆಯವರು, ಅವಳ ಮನೆಯವರು ನೋಡಿ ಕಣ್ಣೀರು ಹಾಕಿದರೆ ನಿಮಗೇನು ಸಿಗುತ್ತದೆ.

ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ನಾವು ಹಾಗೆ ಅಂದುಕೊಂಡು ಬದುಕಲು ಬಿಡಿ ಎಂದಿದ್ದಾರೆ ಕಿರಿಕ್ ಕೀರ್ತಿ. ನಮ್ಮ ಪೋಸ್ಟ್ ಗಳ ಆಧಾರದ ಮೇಲೆ ನೀವೇ ಕಥೆಗಳನ್ನು ಸೃಷ್ಟಿ ಮಾಡಬೇಡಿ. ಹಾಗೇನಾದರೂ ಇದ್ದರೆ ನಾವೇ ಬಂದು ಕ್ಲಾರಿಟಿ ಕೊಡುತ್ತೇವೆ. ನಮ್ಮ‌ ಮನೆಯಲ್ಲಿ ಕೂಡಾ 7 ವರ್ಷದ ಮಗ, 60-70 ವರ್ಷದ ಹಿರಿಯರು ಇದ್ದಾರೆ. ನಿಮ್ಮನ್ನು ಮನೆಯಿಂದ ಹೊರಗೆ ದಬ್ಬಿದಾಗ ಸುಮ್ಮನೆ ಕುಳಿತುಕೊಳ್ಳಲು ಆಗದೇ ನನ್ನ ವಿಚಾರಗಳನ್ನು ಹಾಕ್ತೀರಾ ನೀವು ಮನುಷ್ಯರಾ?ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Kirik Keerthi ನಮ್ಮ ಸಂಕಟ ನಮಗೆ ಗೊತ್ತು, ಅದನ್ನು ಹೇಗೆ ಸರಿ ಮಾಡಬೇಕು ಅನ್ನೋದು ಗೊತ್ತು. ಸೋಶಿಯಲ್ ಮೀಡಿಯಾ ವನ್ನು ಬೇರೆಯವರ ಬದುಕನ್ನು ನಾಶ ಮಾಡಲು ಬಳಸಿಕೊಳ್ಳುತ್ತೀರಾ? ಒಳ್ಳೆಯದಕ್ಕೆ ಬಳಸಿ ಎಂದಿರುವ ಅವರು ಮನೆಯಲ್ಲಿ ಅನಾರೋಗ್ಯಕ್ಕೆ ಗುರಿಯಾದವರು ಇರುತ್ತಾರೆ. ಅರ್ಥ ಮಾಡಿಕೊಳ್ಳಿ, ಮನಸ್ಸಿಗೆ ಬಂದಂತೆ ಬರೆದು ಕೂರಬೇಡಿ ಎಂದಿರುವ ಕೀರ್ತಿ ಅವರು ಕೊನೆಯಲ್ಲಿ ಆ ಭಗವಂತ ಒಂದು ದಿನ ನಿಮ್ಮ ಜೀವನದಲ್ಲೂ ಆಟ ಆಡುತ್ತಾನೆ. ಆಗ ನೀವು ಅನುಭವಿಸುತ್ತೀರಿ. ಅವತ್ತು ನನ್ನ ಶಾಪ ನಿಮಗೆ ತಟ್ಟುತ್ತದೆ. ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.


LEAVE A REPLY

Please enter your comment!
Please enter your name here