Kokila Mohan: ಕನ್ನಡಿಗ ನಟ ಕೋಕಿಲಾ ಮೋಹನ್ ಅವರಿಗೆ ಏಡ್ಸ್ ಇದ್ದಿದ್ದು ನಿಜವೇ? ಇವರ ವೃತ್ತಿ ಬದುಕಿಗೆ ಕೊಳ್ಳಿ ಇಟ್ಟವರು ಯಾರು?

Written by Pooja Siddaraj

Published on:

Kokila Mohan: 70ರ ದಶಕ ಮುಗಿಯುವ ವೇಳೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟ ಮೋಹನ್. ತಮಿಳಿನ ನಿರ್ದೇಶಕ ಮಹೇಂದರ್ ಅವರು ನಿರ್ದೇಶನ ಮಾಡಿದ ಕೋಕಿಲಾ ಸಿನಿಮಾದಲ್ಲಿ ನಟ ಕಮಲ್ ಹಾಸನ್ ಅವರು ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾದಲ್ಲಿ ನಟ ಮೋಹನ್ ಅವರು ನಟಿಸಿದ್ದರು. ಇವರ ಮೊದಲ ಸಿನಿಮಾ ಇದಾಗಿದ್ದು, ಅಭಿನಯದಿಂದ ಸ್ಟಾರ್ ಆಗುವ ಎಲ್ಲಾ ಸೂಚನೆ ನೀಡಿದ್ದರು. ಕನ್ನಡಿಗರಿಗೆ ಕೋಕಿಲಾ ಮೋಹನ್ ಎಂದೇ ಪರಿಚಿತವಾಗಿದ್ದರು.

ಕೋಕಿಲಾ ಮೋಹನ್ ಅವರು ಕನ್ನಡದ ಗಾಳಿ ಮಾತು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಹೆಚ್ಚಿನ ಯಶಸ್ಸು ಸಿಕ್ಕಿದ್ದು ತಮಿಳು ಚಿತ್ರರಂಗದಲ್ಲಿ ಎಂದರೆ ತಪ್ಪಲ್ಲ. ತಮಿಳಿಗೆ 80ರ ದಶಕದಲ್ಲಿ ಎಂಟ್ರಿ ಕೊಟ್ಟು, ಅಲ್ಲಿ ಮೈಕ್ ಮೋಹನ್ ಎಂದು ಹೆಸರುವಾಸಿ ಆಗಿದ್ದರು. ಮೋಹನ್ ಅವರು ತಮಿಳಿನಲ್ಲಿ ಎಷ್ಟು ಯಶಸ್ಸು ಪಡೆದು ಬ್ಯುಸಿ ಆಗಿದ್ದರು ಎಂದರೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ಹೆಸರು ಬಿಟ್ಟರೆ, ಮೂರನೆಯ ಸ್ಟಾರ್ ಹೀರೋ ಆಗಿದ್ದವರು ಮೋಹನ್.

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ, ಮುಂದೆ ದೊಡ್ಡ ಹೀರೋ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು. 1984ರಲ್ಲಿ ಒಂದೇ ವರ್ಷಕ್ಕೆ ಇವರ 20 ಸಿನಿಮಾಗಳು ಬಿಡುಗಡೆ ಆಗಿದ್ದವು, ಬಹುತೇಕ ಸಿನಿಮಾ ಹಿಟ್ ಆಗಿದ್ದವು. ಇಷ್ಟೆಲ್ಲಾ ಯಶಸ್ಸು ಕಂಡಿದ್ದ ಮೋಹನ್ ಅವರು ಹೆಚ್ಚು ದಿನಗಳ ಕಾಲ ಸ್ಟಾರ್ ಆಗಿ ಮೆರೆಯಲು ಸಾಧ್ಯ ಆಗಲಿಲ್ಲ. ಅದಕ್ಕೆ ಕಾರಣ ಅವರ ಬಗ್ಗೆ ಕೇಳಿಬಂದ ಒಂದು ಗಾಸಿಪ್. 1991ರಲ್ಲಿ ಮೋಹನ್ ಅವರು ತಮ್ಮ 99ನೇ ಸಿನಿಮಾದಲ್ಲಿ ನಟಿಸಿದರು.

ಇನ್ನೊಂದು ಸಿನಿಮಾ ಆಗಿದ್ದರೆ 100 ಸಿನಿಮಾ ಆಗುತ್ತಿತ್ತು, ಆದರೆ ಅಷ್ಟರಲ್ಲಿ ಮೋಹನ್ ಅವರಿಗೆ ಏಡ್ಸ್ ಇದೆ ಎನ್ನುವ ವಿಚಾರ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಸುಳ್ಳು ಎಂದು ಅರಿಯದ ಚಿತ್ರರಂಗ ಮೋಹನ್ ಅವರಿಗೆ ಅವಕಾಶ ಕೊಡಲಿಲ್ಲ. ನಿರ್ದೇಶಕರು, ನಿರ್ಮಾಪಕರು ಅವರಿಂದ ದೂರ ಉಳಿದರು, ನಟಿಯರು ಕೂಡ ಮೋಹನ್ ಅವರ ಸಿನಿಮಾ ಎಂದರೆ ಒಪ್ಪಿಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕೆ ಮೋಹನ್ ಅವರಿಗೆ ಸಿನಿಮಾ ಅವಕಾಶಗಳು ಸಿಗುವುದೇ ಕಡಿಮೆ ಆಗಿ, ಕೊನೆಗೆ ಚಿತ್ರರಂಗದಿಂದ ದೂರವಾದರು.

1999ರಲ್ಲಿ 9 ವರ್ಷಗಳ ನಂತರ ತಮಗೆ ಏಡ್ಸ್ ಎಂದು ಪ್ರೂವ್ ಮಾಡಿ ಚಿತ್ರರಂಗಕ್ಕೆ ಮತ್ತೆ ಬರುವ ಪ್ರಯತ್ನ ಮಾಡಿದರು, 1999ರಲ್ಲಿ 100ನೇ ಸಿನಿಮಾದಲ್ಲಿ ನಟಿಸಿದರು, ಆದರೆ ಆ ಸಿನಿಮಾ ಯಶಸ್ಸು ನೀಡಲಿಲ್ಲ. ನಂತರ ಮೋಹನ್ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದರು. ಸಪೋರ್ಟಿನ್ಗ್ ರೋಲ್ ಗಳಲ್ಲಿ ಕೂಡ ಇವರು ನಟಿಸಲಿಲ್ಲ. ಈ ಸುಳ್ಳು ಸುದ್ದಿಯಿಂದ ದೊಡ್ಡ ಸೂಪರ್ ಸ್ಟಾರ್ ಆಗಿ ಹೆಸರು ಮಾಡಬೇಕಿದ್ದ ನಟನ ವೃತ್ತಿ ಜೀವನ ಅರ್ಧಕ್ಕೆ ನೆಲಸಮವಾಯಿತು.

ಅಷ್ಟಕ್ಕೂ ಮೋಹನ್ ಅವರ ಬಗ್ಗೆ ಇಂಥದ್ದೊಂದು ರೂಮರ್ ಹಬ್ಬಿಸಿದವರು ಯಾರು ಎಂದರೆ, ಒಬ್ಬ ತಮಿಳು ನಟಿ. ಈ ನಟಿ ಮೋಹನ್ ಅವರನ್ನು ಮದುವೆ ಆಗುವಂತೆ ಕೇಳಿಕೊಂಡಿದ್ದರು, ಆದರೆ ಮೋಹನ್ ಅವರು ಒಪ್ಪಿರಲಿಲ್ಲ. ಹಾಗಾಗಿ ಅವರ ಬಗ್ಗೆ ಈ ರೀತಿಯ ಸುಳ್ಳು ಹಬ್ಬಿಸಿದ್ದರು, ಆ ಸುದ್ದಿ ಮೋಹನ್ ಅವರ ವೃತ್ತಿ ಜೀವನಕ್ಕೆ ತೊಂದರೆ ತಂದಿತು ಎಂದು ಹೇಳಲಾಗುತ್ತದೆ.

Leave a Comment