ಕೊರಿಯಾದ ಬ್ಯೂಟಿ ಟಿಪ್ಸ್ ಬಳಸಿ ಪಳ ಪಳ ಹೊಳೆಯಿರಿ.
ಮುಖದ ಕಾಂತಿ ಹೆಚ್ಚಿಸಲು ಕೊರಿಯಾದ ಸೌಂಧರ್ಯ ವಿಧಾನ ‘ಜಾಮ್ಸು’ನೀರು ಬಹುಮುಖ್ಯವಾದ ಸೌಂಧರ್ಯ ವರ್ಧಕ. ಯಥೇಚ್ಛವಾಗಿ ನೀರು ಸೇವನೆಯಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುಸು. ನೀರು ಸೇವನೆಯಿಂದ ಚರ್ಮದ ಸುಕ್ಕು, ಕಲೆ ಕಡಿಮೆಯಾಗುವುದು.ಪ್ರತಿದಿನ ಆಹಾರದಲ್ಲಿ ಕನಿಷ್ಠ ೫೦ ಗ್ರಾಮ್ಸ್ ಒಣ ಹಣ್ಣುಗಳನ್ನು (dryfruits) ತುಪ್ಪದ ಜೊತೆಯಲ್ಲಿ ಬಳಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮತ್ತು ಕೊಬ್ಬರಿ ಎಣ್ಣೆ, ಒಣ ಕೊಬ್ಬರಿ ಸೇವಿಸುವುದು. ಕೊಬ್ಬರಿ ಎಣ್ಣೆ, ಹಾಲಿನ ಕೆನೆಯನ್ನು ಬಳಸಿ ಮುಖಕ್ಕೆ ಮಸ್ಸಾಜ್ ಮಾಡಿ ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದು.
ಪ್ರತಿದಿನ ತಣ್ಣನೆಯ ನೀರಿನಲ್ಲಿ (ice water) ೨-೩ ಬಾರಿ ಮುಖ ತೊಳೆಯುವುದರಿಂದ ಮುಖದ ಹೊಳಪನ್ನು ಹೆಚ್ಚಿಸುವುದು. ತಣ್ಣನೆಯ ನೀರು ರಕ್ತಪರಿಚಲನೆಯನ್ನು ನಿಯಂತ್ರಿಸಿ ಮೊಡವೆ, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.ಮುಖದ ವ್ಯಾಯಾಮಗಳನ್ನು ಪ್ರತಿದಿನ ಮಾಡುವುದು. ಮ- ಕಾರದ ವ್ಯಾಯಾಮವು ಮುಖ್ಯವಾದ ವ್ಯಾಯಾಮ ಪ್ರಕಾರವಾಗಿದ್ದು ಮಾ, ಮೂ, ಮೌ ಉಚ್ಚಾರಣೆಯಿಂದ ಮುಖದ ಕೆಲವು ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಇದರಿಂದ ರಕ್ತಚಲನೆಯು ಹೆಚ್ಚಿ ಚರ್ಮದ ಕಾಂತಿ ಹೆಚ್ಚುತ್ತದೆ.
ಮುಲ್ತಾನಿ ಮಿಟ್ಟಿ (ಮಣ್ಣು) ಮತ್ತು ಹೆಸರು ಕಾಳಿನ ಹಿಟ್ಟನ್ನು ಬಳಸಿ ಮುಕ್ಕಕ್ಕೆ ಮಸಾಜ್ ಮಾಡುವುದರಿಂದ ಚರ್ಮದ ಆರೋಗ್ಯವನ್ನು ಹೆಚ್ಚಿಸಬಹುದು.ಈ ಎಲ್ಲಾ ವಿಧಾನಗಳು ಸಂಪೂರ್ಣ ನೈಸರ್ಗಿಕವಾಗಿರುವುದರಿಂದ ಮನೆಯಲ್ಲಿಯಿಯೇ ಕುಳಿತು ಯಾವದೇ ಅಡ್ಡ ಪರಿಣಾಮಗಳಿಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸಿ ಮುಖದ ಹೊಳಪನ್ನು ಪಡೆಯಬಹುದಾಗಿದೆ.