ಕುಂಕುಮ ದಿಂದ ಹೀಗೆ ಮಾಡಿ,ಮನೆಯ ವಾಸ್ತು ದೋಷವನ್ನ ನಿವಾರಿಸಿ!

0
1647

ಕುಂಕುಮ ದಿಂದ ಹೀಗೆ ಮಾಡಿ,ಮನೆಯ ವಾಸ್ತು ದೋಷವನ್ನ ನಿವಾರಿಸಿ!

ವಾಸ್ತುವಿನಲ್ಲಿ ಕುಂಕುಮದ ಪ್ರಾಮುಖ್ಯತೆ ಬಹಳ ವಿಶೇಷವಾಗಿದೆ,ಪೂಜೆಯನ್ನು ಕುಂಕುಮವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಪ್ರತಿ ಪೂಜೆಯಲ್ಲೂ ತಿಲಕ ಹಚ್ಚುವಾಗ ಅರಿಶಿನ ಮತ್ತು ಕುಂಕುಮವನ್ನ ಇಡುವುದು ವಾಡಿಕೆ.

ವಾಸ್ತು ದೋಷವನ್ನು ನಿವಾರಿಸಲು ಈ ವಿಧಾನವನ್ನು ಅನುಸರಿಸಿ

ಪ್ರತಿದಿನ ನೀರಿನಲ್ಲಿ ಸ್ವಲ್ಪ ಕುಂಕುಮವನ್ನ ಅರ್ಪಿಸಿ ಸೂರ್ಯದೇವನಿಗೆ ಅರ್ಗ್ಯವನ್ನು ಅರ್ಪಿಸಿ.ಕುಂಕುಮದಿಂದ ನಿಮ್ಮ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ ಗುರುತುಗಳನ್ನು ಮಾಡಿ. ಇದನ್ನು ಮಾಡುವುದರಿಂದ, ಮನೆಯಲ್ಲಿ ಶಾಂತಿ ಮತ್ತು ಸಂತೋಷವಿರಲಿದೆ. ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳವಾಗಿದ್ದರೆ, ಈ ಪರಿಹಾರವನ್ನು ಒಮ್ಮೆ ಪ್ರಯತ್ನಿಸಬೇಕು.

ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮನೆಯ ಮುಖ್ಯ ಬಾಗಿಲಿಗೆ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿವುದಿಲ್ಲ.ಇದನ್ನು 40 ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ, ಮನೆಯಲ್ಲಿನ ವಾಸ್ತು ದೋಷಗಳನ್ನು ತೆಗೆದುಹಾಕಲಾಗುತ್ತದೆ.

LEAVE A REPLY

Please enter your comment!
Please enter your name here