ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಿದ್ದ ಖುಷ್ಬೂನ ಟೀಕಿಸಿದವರಿಗೆ ನಟಿ ಕೊಟ್ರು ಖಡಕ್ ತಿರುಗೇಟು

0
42

Kushboo Sundar about her father :ದಕ್ಷಿಣ ಸಿನಿಮಾಗಳ ಖ್ಯಾತ ನಟಿ, ಕನ್ನಡದಲ್ಲಿ ಸಹಾ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಹೆಸರು ಮಾಡಿರುವ ನಟಿ, ಸಕ್ರಿಯ ರಾಜಕಾರಣಿ ಖುಷ್ಬೂ(Kushboo Sundar) ಅವರು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ತಾನು ಎಂಟನೇ ವಯಸ್ಸಿನಲ್ಲೇ ಹೇಗೆ ಸ್ವಂತ ತಂದೆಯಿಂದಲೇ ದೌ ರ್ಜ ನ್ಯಕ್ಕೆ ಒಳಗಾಗಿದ್ದೆ, ಹೇಗೆ ಅದನ್ನೆಲ್ಲಾ ತನ್ನ ತಾಯಿಗೂ ಸಹಾ ಹೇಳಲಾಗದ ಪರಿಸ್ಥಿತಿ ಇತ್ತು ಎಂದೆಲ್ಲಾ ಮಾತನಾಡಿದ್ದರು. ನಟಿಯ ಮಾತುಗಳು ದೊಡ್ಡ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಮಟ್ಟದಲ್ಲಿ ಅದು ಚರ್ಚೆಗಳನ್ನು ಸಹಾ ಹುಟ್ಟು ಹಾಕಿತ್ತು.

Kannada news :ವಿಷಯ ಸುದ್ದಿಯಾದ ಮೇಲೆ ನಟಿಯ ಹೇಳಿಕೆಗಳ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವಿ ರೋ ಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ನಟಿಯು ಈ ವಿಚಾರವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಟಿ ಖುಷ್ಬೂ ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ನಾನೇನು ಆಶ್ಚರ್ಯಕರ ಹೇಳಿಕೆಯನ್ನು ನೀಡಿಲ್ಲ. ನಾನು ಪ್ರಾಮಾಣಿಕತೆಯಿಂದ ಈ ಮಾತು ಹೇಳಿದ್ದೇನೆ. ನನ್ನ ಜೊತೆ ಈ ರೀತಿ ಆಯ್ತು, ಅ ಪ ರಾ ಧ ಮಾಡಿದವರು ನಾಚಿಕೆ ಪಡಬೇಕು ಎಂದು ಎಂದು ತಮ್ಮ ನೇರವಾದ ಮಾತುಗಳನ್ನು ಹೇಳಿದ್ದಾರೆ.

ಇದೇ ವೇಳೆ ನಟಿಯು ಗಟ್ಟಿಯಾಗಿ ನಿಲ್ಲಿ, ಇದೇ ರಸ್ತೆಯ ಅಂತ್ಯ ಎಂದು ಭಾವಿಸಬೇಡಿರೆಂದು ನಾನು ಎಲ್ಲರಿಗೂ ಸಂದೇಶ ನೀಡಬೇಕಾಗಿದೆ. ನಾನು ಈ ಮಾತು ಹೇಳುವುದಕ್ಕೆ ಇಷ್ಟು ವರ್ಷ ತೆಗೆದುಕೊಂಡೆ ಅಂದರೆ ಮಹಿಳೆಯರು ಈ ಬಗ್ಗೆ ಮಾತನಾಡ ಬೇಕಾದ ಅಗತ್ಯ ಇದೆ. ನನ್ನ ಜೊತೆ ಈ ರೀತಿ ಆಯ್ತು, ಏನೇ ಆಗಲೀ, ನಾನು ನನ್ನ ಜರ್ನಿಯನ್ನು ಮುಂದುವರೆಸುತ್ತೇನೆಂದು ಖುಷ್ಬೂ ಹೇಳಿದ್ದಾರೆ. ಅಲ್ಲದೇ ಈ ವಿಚಾರ ನನ್ನ ಪತಿ, ನನ್ನ ಹೆಣ್ಣು ಮಕ್ಕಳಿಗೂ ಗೊತ್ತು ಎಂದೂ ಅವರು ಹೇಳಿದ್ದಾರೆ.

ನಮ್ಮ ಸಮಾಜದಲ್ಲಿ ಪ್ರತಿ ಬಾರಿಯೂ ಕೂಡಾ ಹೆಣ್ಣು ಮಕ್ಕಳ ಮೇಲೆ ದೌ ರ್ಜ ನ್ಯ ನಡೆದಾಗಲೂ ಪ್ರತಿ ಸಲ ನೀನು ಎಂತಹ ಬಟ್ಟೆ ಹಾಕಿದ್ದೆ? ಏನು ಮಾಡುತ್ತಿದ್ದೆ ? ಎನ್ನುವ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ನನ್ನ ಮೇಲೆ ದೌ ರ್ಜ ನ್ಯ ನಡೆದಾಗ ನನಗೆ 8 ವರ್ಷ. ಆ ವಯಸ್ಸಿನಲ್ಲಿ ಏನು ಗೊತ್ತಾಗುತ್ತದೆ? ನಾನು ಈಗ ಈ ದೌ ರ್ಜ ನ್ಯದ ಬಗ್ಗೆ ಮಾತನಾಡಿದ ಮೇಲೆ ನನ್ನ ಪತಿ, ಈಗ ಅದರಿಂದ ಹೊರಗಡೆ ಬಂದಿರುವೆ ತಾನೆ, ಈಗ ಎಲ್ಲವೂ ಓಕೆ ತಾನೇ ಎಂದು ಕೇಳಿದ್ದರು ಎಂದಿರುವ ಖುಷ್ಬೂ, ತನಗಿರುವ ಕುಟುಂಬದ ಬೆಂಬಲವನ್ನು ತಿಳಿಸಿ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here