Lakshman: ಸೀರಿಯಲ್ ನಟಿ ಜೊತೆ ಮದುವೆ ಆಗ್ತಾರಾ ತಂದಾನಿ ತಾನೇ ರಿವ್ಯೂ ಹುಡುಗ? ಇಂಟರೆಸ್ಟಿಂಗ್ ಸ್ಟೋರಿ!

Written by Pooja Siddaraj

Published on:

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಷ್ಟು ಪಾಪ್ಯುಲರ್ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಸೋಷಿಯಲ್ ಮೀಡಿಯಾ ಮೂಲಕವೇ ಸಾಕಷ್ಟು ಜನರು ಸುದ್ದಿಯಾಗಿ ಹೆಸರು ಮಾಡಿರುತ್ತಾರೆ. ಅದೇ ಸಾಲಿಗೆ ಸೇರುವವರು ಯೂಟ್ಯೂಬರ್ ಲಕ್ಷ್ಮಣ್ ಟೇಕುಮುಡಿ. ಕೆಜಿಎಫ್2 ಸಿನಿಮಾ ಬಿಡುಗಡೆಯಾದಾಗ ಇವರು ಯೂಟ್ಯೂಬ್ ನಲ್ಲಿ ಕೊಟ್ಟ ರಿವ್ಯೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ತಂದಾನಿ ತಾನೇ ಎಂದು ಹಾಡು ಹೇಳಿ ಕಣ್ಣೀರು ಹಾಕಿದ್ದರು ಲಕ್ಷ್ಮಣ್. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಜಿಎಫ್2 ನಂತರ ಇನ್ನಷ್ಟು ಸಿನಿಮಾಗಳ ರಿವ್ಯೂ ಕೂಡ ನೀಡಿದ್ದರು. ಅವು ಕೂಡ ವೈರಲ್ ಆಗಿದ್ದವು, ಅಶೋಕ ವನಂಲೋ ಆರ್ಕುಜ ಕಲ್ಯಾಣಂ ಸಿನಿಮಾ ಪ್ರೊಮೋಷನ್ ಗಾಗಿ ರೋಡ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ನಟನೆ ಮಾಡಿದ್ದರು, ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿ ವಿವಾದ ಕೂಡ ಸೃಷ್ಟಿಯಾಗಿತ್ತು.

ಈ ರೀತಿ ವೈರಲ್ ಆಗಿದ್ದ ಹುಡುಗ ಇದೀಗ ಮದುವೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಲಕ್ಷ್ಮಣ್ ಅವರು ಈಗ ಮಧುಮಗನ ಹಾಗೆ ರೆಡಿ ಆಗಿರುವ ಫೋಟೋಸ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಲಕ್ಷ್ಮಣ್ ಅವರಿಗೆ ಎಂಗೇಜ್ಮೆಂಟ್ ಆಗಿರಬಹುದು ಎಂದು ಊಹೆ ಮಾಡುತ್ತಿದ್ದಾರೆ. ಹಾಗೆಯೇ ಶೀಘ್ರದಲ್ಲೇ ಮದುವೆ ಕೂಡ ಆಗಬಹುದು ಎನ್ನುತ್ತಿದ್ದಾರೆ.

ಫೋಟೋದಲ್ಲಿ ಲಕ್ಷ್ಮಣ್ ಅವರ ಜೊತೆಗಿರುವ ಹುಡುಗಿಯ ಹೆಸರು ದುರ್ಗಶ್ರೀ. ಇವರು ನಟಿ ಎಂದು ಹೇಳಲಾಗುತ್ತಿದೆ. ಆದರೆ ಇದು ನಿಜ ಜೀವನದಲ್ಲಿ ಮದುವೆ ಆಗುತ್ತಿರುವ ಫೋಟೋ ಅಲ್ಲ, ಬದಲಾಗಿ ಇದು ಲಕ್ಷ್ಮಣ್ ಅವರು ನಟಿಸುತ್ತಿರುವ ಸೀರಿಯಲ್ ಫೋಟೋಸ್ ಎಂದು ಹೇಳಲಾಗುತ್ತಿದೆ. ತೆಲುಗಿನ ಅರ್ಧಾಂಗಿ ಎನ್ನುವ ಸೀರಿಯಲ್ ನಲ್ಲಿ ಲಕ್ಷ್ಮಣ್ ನಟಿಸುತ್ತಿದ್ದು ಈ ಸೀರಿಯಲ್ ಫೋಟೋಗಳು ಎಂದು ಹೇಳಲಾಗುತ್ತಿದೆ.

ಆದರೆ ಅರ್ಧಾಂಗಿ ಧಾರವಾಹಿ ನಟಿ ದುರ್ಗಶ್ರೀ ಮತ್ತು ಲಕ್ಷಣ್ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಸ್ ನೋಡಿದರೆ ಇವರಿಬ್ಬರ ನಡುವೆ ಪ್ರೀತಿ ಇರಬಹುದು ಎನ್ನುವ ಅನುಮಾನ ಬರುವುದಂತೂ ಸಹಜ. ದುರ್ಗಶ್ರೀ ಮತ್ಯಾರು ಅಲ್ಲ, ಕನ್ನಡದ ಹುಡುಗಿಯೇ ಆಗಿದ್ದು ಈ ಹಿಂದೆ ಕನ್ನಡದಲ್ಲಿ ನೇತ್ರಾವತಿ ಎನ್ನುವ ಧಾರವಾಹಿಯಲ್ಲಿ ನಟಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಗಾಸಿಪ್ ಒಂದು ಶುರುವಾಗಿದ್ದು, ಇದರ ಬಗ್ಗೆ ಇನ್ನು ಇವರಿಬ್ಬರು ಪ್ರತಿಕ್ರಿಯೆ ನೀಡಿಲ್ಲ..

ಇವರಿಬ್ಬರು ಶೇರ್ ಮಾಡುತ್ತಿರುವ ರೀಲ್ಸ್ ವಿಡಿಯೋ ನೋಡಿದರೆ ಬೇರೆಯದೇ ರೀತಿ ಅನ್ನಿಸುತ್ತದೆ. ಇವರಿಬ್ಬರು ನಿಜಕ್ಕೂ ಪ್ರೀತಿ ಮಾಡುತ್ತಿದ್ದಾರಾ ಅಥವಾ ಇದು ಸೀರಿಯಲ್ ಗೆ ಸೇರಿದ ವಿಚಾರ ಆಗಿರಬಹುದಾ ಎನ್ನುವುದನ್ನು ಕಾದು ನೋಡಬೇಕಿದೆ.

Leave a Comment