Lakshmi Baramma: ವೈಷ್ಣವ್ ತಂಗಿ ವಿಧಿ ನಿಜ ಜೀವನದಲ್ಲಿ ವೈದ್ಯೆ, ಚಿಕ್ಕ ವಯಸ್ಸಿಗೆ ನಟನೆ ಜೊತೆಗೆ ವೈದ್ಯೆಯು ಆಗಿದ್ದಾರೆ ಡಾ.ಲಾವಣ್ಯ

Written by Pooja Siddaraj

Published on:

Lakshmi Baramma: ಕಲರ್ಸ್ ಕನ್ನಡ ವಾಹಿನಿಯ ಪಾಪ್ಯುಲರ್ ಧಾರವಾಹಿಗಳಲ್ಲಿ ಒಂದು ಲಕ್ಷ್ಮಿ ಬಾರಮ್ಮ. ಭಾಗ್ಯಲಕ್ಷ್ಮಿ ನಂತರ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರವಾಹಿ ಇದೆ ಎಂದು ಹೇಳಿದರೆ ತಪ್ಪಲ್ಲ. ಈ ಧಾರವಾಹಿ ಈಗ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಲಕ್ಷ್ಮಿ ವೈಷ್ಣವ್ ನಡುವೆ ಮಧುರ ಬಾಂಧವ್ಯ ಶುರುವಾಗುತ್ತಿದೆ. ಈ ಧಾರವಾಹಿಯಲ್ಲಿ ವೈಷ್ಣವ್ ತಂಗಿ ವಿಧಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಈಗ ಲಕ್ಷ್ಮಿಗೆ ಪೂರಕವಾಗಿ ಎಲ್ಲವೂ ನಡೆಯುತ್ತಿದೆ. ವೈಷ್ಣವ್ ತಾಯಿ ಕಾವೇರಿಗೆ ಮಗ ಹೆಂಡತಿ ಜೊತೆಗೆ ಜಾಸ್ತಿ ಇದ್ದು, ಕೈತಪ್ಪಿ ಹೋಗ್ತಾನೆ ಅನ್ನೋ ಭಯ. ಅದಕ್ಕಾಗಿ ಮಗ ಬರೆದ ಹಾಡನ್ನೇ ಸುಟ್ಟು ಹಾಕಿ, ಸೊಸೆ ಕೈಯಲ್ಲಿ ಹಾಡು ಬರೆಸಿ, ಅದನ್ನೇ ಆಡಿಯೋ ಕಂಪನಿಗೆ ಕಳಿಸಿದ್ದಳು. ಆದರೆ ಕಾವೇರಿ ದುರದೃಷ್ಟ ಲಕ್ಷ್ಮಿ ಬರೆದ ಹಾಡು ಸುಕನ್ಯಾಗೆ ಇಷ್ಟವಾಗಿದೆ. ತಾಯಿ ಇಂಥ ಕೆಲಸ ಮಾಡಿದ್ದು ಎಂದು ವೈಷ್ಣವ್ ಗೆ ಗೊತ್ತಾಗಿ, ಅಮ್ಮನ ಮೇಲೆ ಕೋಪ ಮಾಡಿಕೊಂಡಿದ್ದಾನೆ.

ನಂತರ ಕಾವೇರಿ ಆತ್ಮಹತ್ಯೆ ನಾಟಕ ಕೂಡ ಆಡಿ, ಆ ವಿಷಯ ಕೂಡ ವೈಷ್ಣವ್ ಗೆ ಗೊತ್ತಾಯಿತು. ಧಾರವಾಹಿಯಲ್ಲಿ ಈ ಥರದ ಡ್ರಾಮಾ ನಡೆಯುತ್ತಿದೆ. ಲಕ್ಷ್ಮಿ ಬಾರಮ್ಮ ಧಾರವಾಹಿಯ ಎಲ್ಲಾ ಪಾತ್ರಗಳು ಕೂಡ ಜನರಿಗೆ ಫೇವರೆಟ್., ಇದರಲ್ಲಿ ವೈಷ್ಣವ್ ತಂಗಿ ವಿಧಿ ಪಾತ್ರ ಒಂದು ರೀತಿ ದುರಹಂಕಾರಿ, ನೆಗಟಿವ್ ಶೇಡ್ ಹೊಂದಿರುವ ಪಾತ್ರ ಆಗಿದೆ, ಈ ಪಾತ್ರದಲ್ಲಿ ನಟಿಸುತ್ತಿರುವವರು ಡಾ. ಲಾವಣ್ಯ. ಹೌದು, ಲಾವಣ್ಯ ಈಗಷ್ಟೇ ದಂತವೈದ್ಯ ಕೋರ್ಸ್ ಮುಗಿಸಿದ್ದಾರೆ.

ಡೆಂಟಿಸ್ಟ್ ಆಗಿರುವ ಲಾವಣ್ಯ, ಅದರ ಜೊತೆಗೆ ಆಕ್ಟಿಂಗ್ ಕೂಡ ಇಷ್ಟಪಟ್ಟು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್ ನಲ್ಲಿ ಇವರಿಗೆ ಮನೆ ಮೆಚ್ಚಿದ ಸಹೋದರಿ ಅವಾರ್ಡ್ ಬಂದಿದ್ದು, ಬಹಳ ಖುಷಿಯಾಗಿದ್ದಾರೆ ಲಾವಣ್ಯ. ಇವರದ್ದು ನೆಗಟಿವ್ ಶೇಡ್ ಇರುವ ಪಾತ್ರ ಆಗಿರುವ ಕಾರಣ ಲಾವಣ್ಯ ಅವರು ಅವಾರ್ಡ್ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲವಂತೆ. ಆದರೆ ಅವಾರ್ಡ್ ಬಂದಿದ್ದು ಅವರಿಗೆ ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಲಾವಣ್ಯ ಅವರು ಹುಟ್ಟಿ ಬೆಳೆದ ಊರಿನಲ್ಲಿ ಉತ್ತಮ ವಿದ್ಯಾಭ್ಯಾಸ ಇರಲಿಲ್ಲ ಎಂದು, ಚಿಕ್ಕ ವಯಸ್ಸಿನಲ್ಲೇ ಲಾವಣ್ಯ ಅವರನ್ನು ಹಾಸ್ಟೆಲ್ ಕಳಿಸಿ ಓದಿಸಿದರಂತೆ. ಇಂದು ತಂದೆ ತಾಯಿ ಇಷ್ಟಪಟ್ಟ ಹಾಗೆ, ಜೊತೆಗೆ ತಮ್ಮ ಇಷ್ಟದ ಹಾಗೆ ದಂತ ವೈದ್ಯೆ ಆಗಿರುವ ಲಾವಣ್ಯ ನಟನೆಯಲ್ಲಿ ಕೂಡ ಹೆಸರು ಮಾಡಿದ್ದಾರೆ. ಲಕ್ಷ್ಮಿಬಾರಮ್ಮ ಧಾರಾವಾಹಿಯ ವಿಧಿ ಪಾತ್ರ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ, ಜನರು ಕೂಡ ಇವರ ಪಾತ್ರವನ್ನು ಗುರುತಿಸಲು ಶುರು ಮಾಡಿದ್ದಾರೆ.

ಆದರೆ ನಟನೆಯ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಎಂದು ನಿರ್ಧಾರ ಮಾಡಿದಾಗ ಬಹಳಷ್ಟು ಜನ ಇವರಿಗೆ ಎರಡು ದೋಣಿ ಮೇಲೆ ಕಾಲಿಡಬೇಡ ಎಂದು ಸಲಹೆ ಕೊಟ್ಟಿದ್ದರಂತೆ, ಆದರೆ ಆ ಮಾತುಗಳಿಗೆ ಕುಗ್ಗದೆ ಸವಾಲಾಗಿ ತೆಗೆದುಕೊಂಡ ಲಾವಣ್ಯ ಇಂದು ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಇವರ ಜರ್ನಿ ನಿಜಕ್ಕೂ ಒಂದು ರೀತಿಯಲ್ಲಿ ಸ್ಪೂರ್ತಿದಾಯಕ ಎಂದರೆ ತಪ್ಪಲ್ಲ.

Leave a Comment