Leelavathi: ನಟಿ ಲೀಲಾವತಿ ಅವರ ನಿಜವಾದ ಪತಿ ಇವರೇ ನೋಡಿ..

Written by Pooja Siddaraj

Published on:

Leelavathi: ಲೀಲಾವತಿ ಅವರು ವಯೋಸಹಜ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಎಲ್ಲಾ ಕಲಾವಿದರು ಕೂಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಮೊನ್ನೆಯಷ್ಟೇ ನಟ ದರ್ಶನ್ ಅವರು, ಅದಕ್ಕಿಂತ ಮೊದಲು ಅರ್ಜುನ್ ಸರ್ಜಾ ಆ ಅವರು, ಅಭಿಷೇಕ್ ಅಂಬರೀಶ್, ಶಿವಣ್ಣ ಗೀತಕ್ಕ ಇವರೆಲ್ಲರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಅವ್ಕ್ರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಲೀಲಾವತಿ ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಇನ್ನು ಜನರು ಕೂಡ ಲೀಲಾವತಿ ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥನೆ ಮಾಡಿ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಎಲ್ಲರಲ್ಲಿ ಒಂದು ಕುತೂಹಲ ಮೂಡಿಸುವ ಪ್ರಶ್ನೆ, ಲೀಲಾವತಿ ಅವರ ಪತಿ ಯಾರು? ವಿನೋದ್ ರಾಜ್ ಅವರ ತಂದೆ ಯಾರು ಎನ್ನುವುದು..

ಮಾಹಿತಿಗಳ ಅನುಸಾರ ಲೀಲಾವತಿ ಅವರ ಪತಿಯ ಹೆಸರು ಮಹಾಲಿಂಗ ಭಾಗವತರ. ಇವರು ರಂಗಭೂಮಿ ಕಲಾವಿದರಾಗಿದ್ದವರು, ಲೀಲಾವತಿ ಅವರನ್ನು ಗುರುತಿಸಿ ರಂಗಭೂಮಿಗೆ ಕರೆದುಕೊಂಡು ಬಂದಿದ್ದು ಕೂಡ ಇವರೇ, ಇವರ ನಾಟಕ ಕಂಪನಿ ಇತ್ತು, ಅದರಲ್ಲಿ ಲೀಲಾವತಿ ಅವರು ಕೂಡ ನಟಿಸುತ್ತಿದ್ದರು. ಆದರೆ ನಷ್ಟವಾದ ಕಾರಣ ನಾಟಕ ಕಂಪನಿ ಮುಚ್ಚಿ ಹೋಯಿತು. ಬಳಿಕ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಲೀಲಾವತಿ ಅವರೊಡನೆ ಇವರು ಕೂಡ ಹೋದರಂತೆ.

ಹಾಗೆಯೇ ಲೀಲಾವತಿ ಅವರು ಚೆನ್ನೈಗೆ ಸಿನಿಮಾಗಾಗಿ ಹೋದಾಗ, ಮಹಾಲಿಂಗ ಭಾಗವತರ್ ಅವರು ಕೂಡ ಹೋಗಿ, ಲೀಲಾವತಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸಲು ಸಹಾಯ ಮಾಡಿದ್ದರಂತೆ. ಈ ಹಿಂದೆ ಒಂದು ಹಳೆಯ ಸಂದರ್ಶನದಲ್ಲಿ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದರು. ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತರ್ ಅವರು ಎಂದು ಹೇಳಿದ್ದರು.

Leave a Comment