Leelavathi: ಅಣ್ಣಾವ್ರ ಜೊತೆಗೆ 36 ಸಿನಿಮಾಗಳಲ್ಲಿ ನಟಿಸಿದ್ರು ಲೀಲಾವತಿ, ಸೂಪರ್ ಹಿಟ್ ಜೋಡಿಯ ನಡುವೆ ಅಷ್ಟೇ ಆತ್ಮೀಯತೆ

0 1

Leelavathi: ನಟಿ ಲೀಲಾವತಿ ಅವರು ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇಂಥ ಮಹಾನ್ ಚೇತನವನ್ನ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಲ್ಲ. ಇವರೆಲ್ಲರೂ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಗಳು. ಆದರೆ ಇಂದು ಈ ಹಿರಿಯ ಜೀವಗಳು ಅಗಲುತ್ತಿರುವಾಗ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗುತ್ತಿದೆ. ಲೀಲಾವತಿ ಅವರ ವೃತ್ತಿ ಜೀವನದಲ್ಲಿ ಅತಿಹೆಚ್ಚು ಚಿತ್ರಗಳಲ್ಲಿ ಅಣ್ಣಾವ್ರ ಜೊತೆಗೆ ನಟಿಸಿದ್ದರು ಎನ್ನುವುದು ವಿಶೇಷ.

ಹೌದು, ಡಾ.ರಾಜ್ ಕುಮಾರ್ ಹಾಗು ಲೀಲಾವತಿ ಅವರದ್ದು ಸೂಪರ್ ಹಿಟ್ ಜೋಡಿ. ಇವರಿಬ್ಬರು ಬರೋಬ್ಬರಿ 36 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಂತ ತುಕಾರಾಮ್, ಗಂಗೆ ಗೌರಿ, ಭಕ್ತ ಕುಂಬಾರ, ವೀರ ಕೇಸರಿ, ಸಿಪಾಯಿ ರಾಮು ಸೇರಿದಂತೆ 36 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಅದ್ಭುತ ಕಲಾವಿದರ ಸೂಪರ್ ಹಿಟ್ ಹಾಡುಗಳನ್ನು ಇಂದಿಗೂ ಮರೆಯುವ ಹಾಗಿಲ್ಲ.

ರಾಜ್ ಕುಮಾರ್ ಅವರು ಹಾಗೂ ಲೀಲಾವತಿ ಅವರ ನಡುವೆ ಹೆಚ್ಚಿನ ಸ್ನೇಹ ಮತ್ತು ಆತ್ಮೀಯತೆ ಸಹ ಇತ್ತು. ಇದನ್ನು ಕೆಲವರು ಬೇರೆ ಬೇರೆ ರೀತಿಗಳಲ್ಲಿ ಕಲ್ಪಿಸಿ ಮಾತನಾಡಿದ್ದು ಇದೇ. ಆದರೆ ಯಾವುದು ನಿಜ, ಯಾವುದು ಸುಳ್ಳು ಎಂದು ಅವರವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ರಾಜ್ ಕುಟುಂಬದವರು ಲೀಲಾವತಿ ಹಾಗೂ ವಿನೋದ್ ರಾಜ್ ಅವರೊಡನೆ ಆತ್ಮೀಯವಾಗಿಯೇ ಇದ್ದರು. ಕಳೆದ ವಾರ ಶಿವಣ್ಣ ಅವರು ಲೀಲಾವತಿ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದರು.

ನಿನ್ನೆ ಕೂಡ ಲೀಲಾವತಿ ಅವರು ಇನ್ನಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದ್ದ ಹಾಗೆಯೇ ಆಸ್ಪತ್ರೆಗೆ ಬಂದು ಅವರ ಅಂತಿಮ ದರ್ಶನವನ್ನು ಪಡೆದರು ಶಿವಣ್ಣ. ಆದರೆ ಜನರು ಅವರವರ ಊಹೆಗೆ ತಕ್ಕ ಹಾಗೆ ಮಾತನಾಡಿದ್ದಾರೆ. ಲೀಲಾವತಿ ಅವರು ನಿನ್ನೆ ಇಹಲೋಕ ತ್ಯಜಿಸಿದ ಬಳಿಕ ಅವರನ್ನು ಸೋಲದೇವನಹಳ್ಳಿಯ ಮನೆಗೆ ಕರೆದುಕೊಂಡು ಬಂದಿದ್ದು, ಅದೇ ಹಳ್ಳಿಯಲ್ಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.