ದೊಡ್ಡ ಕಲಾವಿದರ ಸಿನಿಮಾ ಅಪ್ಡೇಟ್ ಗಳು ಬರುತ್ತವೆ ಎಂದರೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಜೊತೆಗೆ ಈಗ ಸ್ಟಾರ್ ಹೀರೋಗಳ ಸಿನಿಮಾ ಟೀಸರ್, ಟ್ರೈಲರ್ ಎಲ್ಲವನ್ನು ಥಿಯೇಟರ್ ಗಳಲ್ಲಿ ಸ್ಕ್ರೀನಿಂಗ್ ಮಾಡುವ ಒಂದು ಅಭ್ಯಾಸ ಕೂಡ ಶುರುವಾಗಿದೆ. ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ವಿಜಯ್ ಅವರ ಲಿಯೋ ಸಿನಿಮಾದ ಟ್ರೈಲರ್ ಬುಡುಗದೆ ಆಯಿತು. ಇದೇ ತಿಂಗಳು ಸಿನಿಮಾ ಕೂಡ ಬಿಡುಗಡೆ ಆಗಲಿದೆ.
ವಿಜಯ್ ಅವರು ಭಾರತದಲ್ಲಿ ಅತಿಹೆಚ್ಚು ಬೇಡಿಕೆ ಮತ್ತು ಜನಪ್ರಿಯತೆ ಹೊಂದಿರುವ ನಟರಲ್ಲಿ ಒಬ್ಬರು. ವಿಜಯ್ ಅವರಿಗೆ ಕ್ರೇಜಿ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೆ ಹೋಗುವ ಘಟನೆಗಳು ಸಹ ನಡೆಯುತ್ತದೆ. ಅಂಥದ್ದೇ ಒಂದು ಘಟನೆ ಲಿಯೋ ಸಿನಿಮಾ ಟ್ರೈಲರ್ ಬಿಡುಗಡೆ ದಿವಸ, ಟ್ರೈಲರ್ ಸ್ಕ್ರೀನ್ ಆದ ಬಳಿಕ ಥಿಯೇಟರ್ ನಲ್ಲಿ ನಡೆದಿದೆ.
ಚೆನ್ನೈನ ರೋಹಿಣಿ ಥಿಯೇಟರ್ ನಲ್ಲಿ ಲಿಯೋ ಸಿನಿಮಾ ಟ್ರೈಲರ್ ಸ್ಕ್ರೀನ್ ಆಯಿತು, ಲಿಯೋ ಟ್ರೈಲರ್ ರಿಲೀಸ್ ಅನ್ನು ಸೆಲೆಬ್ರೇಟ್ ಮಾಡಲು ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. ಟ್ರೈಲರ್ ಸ್ಕ್ರೀನಿಂಗ್ ಆಗುವ ಅಭಿಮಾನಿಗಳು ಅದನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿ, ಥಿಯೇಟರ್ ನಲ್ಲಿ ಕೂಗಾಡಿ ಕುಣಿದಿದ್ದಾರೆ. ಸಂಭ್ರಮ ಅಷ್ಟಕ್ಕೇ ಮುಗಿಯದೆ ಥಿಯೇಟರ್ ನಲ್ಲಿರುವ ಸೀಟ್ ಗಳನ್ನು ಕೂಡ ಮುರಿದು ಹಾಕಿ, ಧ್ವಂಸ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನ ಇರಬೇಕು ಆದರೆ ಈ ಮಟ್ಟಕ್ಕೆ ಹೋಗಬಾರದು, ಥಿಯೇಟರ್ ಮಾಲೀಕರಿಗೆ ಆಗಿರುವ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಜನರು ಮತ್ತು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಟ್ರೈಲರ್ ಅಷ್ಟು ಚೆನ್ನಾಗಿರುವ ಕಾರಣ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಲಿಯೋ ಸಿನಿಮಾವನ್ನು ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು, ವಿಜಯ್ ಅವರ ಅಭಿಮಾನಿಗಳಿಗೆ ಇಷ್ಟ ಅಗುವಂಥ ಎಲ್ಲಾ ಅಂಶಗಳು ಟ್ರೈಲರ್ ನಲ್ಲಿ ಇದ್ದು, ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಾಗಿದೆ. ಇನ್ನು ಈ ಸಿನಿಮಾದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ನಟಿ ತ್ರಿಷಾ ಅಭಿನಯಿಸಿದ್ದು, ಸುಮಾರು 10 ವರ್ಷಕ್ಕಿಂತ ಹೆಚ್ಚಿನ ಸಮಯದ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.