Madhavi: ಅವಕಾಶವಿಲ್ಲದೆ ಕಷ್ಟಪಡುತ್ತಿದ್ದ ನಟಿ ಮಾಧವಿ ಸಾವಿರ ಕೋಟಿಗೆ ಒಡತಿ ಆಗಿದ್ದು ಹೇಗೆ ಗೊತ್ತಾ?

Written by Pooja Siddaraj

Published on:

Madhavi: 80 ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಟಾಪ್ ನಟಿಯರಲ್ಲಿ ಮಾಧವಿ ಅವರು ಕೂಡ ಪ್ರಮುಖವಾದ ನಟಿ.. ಇಂದು ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ,, ಆದರೆ ಮಾಧವಿ ಅವರನ್ನು ಜನರು ಇಂದಿಗೂ ಮರೆತಿಲ್ಲ. ದಶಕಗಳಿಂದ ಇವರು ಹೊರದೇಶದಲ್ಲಿದ್ದರು, ಇವರ ಸಿನಿಮಾಗಳು ಹಾಡುಗಳು ಇಂದಿಗು ಜನರನ್ನು ಆಕರ್ಷಿಸುತ್ತಿದೆ. ಒಂದು ಕಾಲದಲ್ಲಿ ಅವಕಾಶಗಳ ಕೊರತೆ ಇಂದ ಕಷ್ಟಪಟ್ಟ ನಟಿ ಮಾಧವಿ ಇಂದು ಸಾವಿರ ಕೋಟಿ ಒಡತಿ.

ನಟಿ ಮಾಧವಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಚಿರಂಜೀವಿ, ಅನಂತ್ ನಾಗ್, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಎಲ್ಲಾ ಕಲಾವಿದರ ಜೊತೆಗೆ ತೆರೆಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಮತ್ತು ಮಾಧವಿ ಅವರ ಜೋಡಿ ಕನ್ನಡ ಸಿನಿಪ್ರಿಯರಿಗೆ ಮೆಚ್ಚಿನ ಜೋಡಿ ಎಂದರೆ ತಪ್ಪಲ್ಲ.

ಇವರಿಬ್ಬರು ಜೊತೆಯಾಗಿ ನಟಿಸಿದ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜೀವನ ಚೈತ್ರ, ಒಡಹುಟ್ಟಿದವರು ಈ ಎಲ್ಲಾ ಸಿನಿಮಾಗಳು ಅಭಿಮಾನಿಗಳ ಫೇವರೆಟ್ . ಚಿತ್ರರಂಗದಲ್ಲಿ ಸ್ಟಾರ್ ಆಗಿ ಹೆಸರು ಮಾಡಿದ್ದ ಮಾಧವಿ ಅವರು ಒಂದು ರಾಲ್ಫ್ ಶರ್ಮ ಅವರೊಡನೆ 1996ರಲ್ಲಿ ಮದುವೆಯಾದರು. ರಾಲ್ಫ್ ಅವರು ಅಎಧ ಭಾರತೀಯರು ಅರ್ಧ ಜರ್ಮನ್ ಎಂದು ಮಾಹಿತಿ ಸಿಕ್ಕಿದ್ದು, ಮದುವೆ ನಂತರ ಮಾಧವಿ ಅವರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

ಈ ಕಾರಣಕ್ಕೆ ಮಾಧವಿ ಅವರು ಮದುವೆ ಬಳಿಕ ರಾಲ್ಫ್ ಅವರೊಡನೆ ಅಮೆರಿಕಾದ ನ್ಯೂಜೆರ್ಸಿಗೆ ಹೋಗಿ ನೆಲೆಸಿದರು. ಈಗಲೂ ಅಲ್ಲಿಯೇ ಇದ್ದಾರೆ. ಈ ದಂಪತಿಗೆ 3 ಹೆಣ್ಣುಮಕ್ಕಳಿದ್ದು, ಅವರನ್ನು ನಮ್ಮ ಭಾರತೀಯ ಸಂಸ್ಕೃತಿಯ ಅನುಸಾರ ಬೆಳೆಸುತ್ತಿದ್ದಾರೆ. ಇಂದು ಮಾಧವಿ ಅವರ ಮಕ್ಕಳು ದೊಡ್ಡವರಾಗಿ, ಅಮ್ಮನ ಹಾಗೆಯೇ ಸುಂದರವಾಗಿದ್ದಾರೆ. ಮಾಧವಿ ಅವರ ಪತಿ ರಾಲ್ಫ್ ಶರ್ಮ ಅವರದ್ದು ಮೆಡಿಸಿನ್ ಮತ್ತು ರೆಸ್ಟೋರೆಂಟ್ ಬ್ಯುಸಿನೆಸ್ ಆಗಿದೆ.

ಮಾಧವಿ ಅವರು ಗಂಡನ ಬ್ಯುಸಿನೆಸ್ ನಲ್ಲಿ ಕೈಜೋಡಿಸಿ, ಮುನ್ನಡೆಸುತ್ತಿದ್ದಾರೆ. ಇಂದು ಇವರ ಆಸ್ತಿಯ ಮೌಲ್ಯ ಸಾವಿರ ಕೋಟಿಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ. ತಮ್ಮದೇ ಸ್ವಂತ ಚಾಪರ್ ಕೂಡ ಹೊಂದಿದೆ ಈ ಜೋಡಿ. ಒಟ್ಟಿನಲ್ಲಿ ಇಂದು ಮಾಧವಿ ಅವರು ಬಹಳ ಎತ್ತರಕ್ಕೆ ಬೆಳೆದು, ಹೆಸರು ಮಾಡಿದ್ದಾರೆ, ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರೆ ತಪ್ಪಲ್ಲ..

Leave a Comment