Madhuri Dixit: ಇಂದಿಗೂ 20ರ ಹರೆಯದ ಹುಡುಗಿಯ ಹಾಗೆ ಕಾಣುವ ಮಾಧುರಿ ದೀಕ್ಷಿತ್ ಅವರ ವಯಸ್ಸು ಎಷ್ಟು ಗೊತ್ತಾ?

Written by Pooja Siddaraj

Published on:

Madhuri Dixit: ನಟಿ ಮಾಧುರಿ ದೀಕ್ಷಿತ್ ಬಾಲಿವುಡ್ ನಟಿ ಆಗಿದ್ದರು ಕೂಡ ಇಡೀ ಭಾರತಾದ್ಯಂತ ಅವರಿಗೆ ಅಭಿಮಾನಿ ಬಲಗವಿದೆ. 90ರ ದಶಕದಲ್ಲಿ ಎಲ್ಲಾ ಹುಡುಗರ ಕನಸಿನ ಕನ್ಯೆ ಆಗಿದ್ದರು. ಆಗಿನ ಸ್ಟಾರ್ ನಟಿಯಾಗಿ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗೆ ಹೀರೋಯಿನ್ ಆಗಿ ಇವರೇ ಬೇಕು ಎನ್ನುವ ಮಟ್ಟಕ್ಕೆ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿರುವ ನಟಿ ಮಾಧುರಿ ದೀಕ್ಷಿತ್ ಅವರ ವಯಸ್ಸು ಎಷ್ಟು ಗೊತ್ತಾ?

ನಟಿ ಮಾಧುರಿ ದೀಕ್ಷಿತ್ ಅವರು ತಮ್ಮ ಅದ್ಭುತವಾದ ಡ್ಯಾನ್ಸ್ ಇಂದಲೇ ಅತಿದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಇವರ ಸಿನಿಮಾಗಳನ್ನು, ಇವರ ಡ್ಯಾನ್ಸ್ ನೋಡಿ ಫಿದಾ ಆಗದವರೇ ಇಲ್ಲ ಎಂದರೆ ತಪ್ಪಲ್ಲ. ಇಂದಿಗೂ ಕೂಡ ಅಭಿಮಾನಿಗಳಿಗೆ ಇವರ ಮೇಲೆ ಅಷ್ಟೇ ಅಭಿಮಾನಿ, ಮತ್ತು ಕ್ರೇಜ್ ಇದೆ ಎಂದರೆ ತಪ್ಪಲ್ಲ. ಅದಕ್ಕೆ ಸಾಕ್ಷಿ ಮಾಧುರಿ ದೀಕ್ಷಿತ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು..

ಇನ್ಸ್ಟಾಗ್ರಾಮ್ ಮತ್ತು ಇನ್ನಿತರ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಆಕ್ಟಿವ್ ಆಗಿರುವ ಮಾಧುರಿ ದೀಕ್ಷಿತ್ ಅವರು ಆಗಾಗ ಹೊಸದಾಗಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಲೈಟ್ ಪರ್ಪಲ್ ಬಣ್ಣದ ಸೀರೆ ಧರಿಸಿ ಸುಂದರವಾಗೋ ಫೋಟೋಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪರ್ಪಲ್ ಸೀರೆಯಲ್ಲಿ ಲೈಟ್ ಪಿಂಕ್ ಬಣ್ಣದ ಶೇಡ್ ಕೂಡ ಕಾಣಿಸುತ್ತಿದೆ.

ಈ ಸುಂದರವಾದ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ಪರ್ಪಲ್ ಸೀರೆಯನ್ನು ಬೀಸಿ ಒಂದು ಸುಂದರವಾದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಮಾಧುರಿ ದೀಕ್ಷಿತ್ ಅವರ ವಯಸ್ಸೆಷ್ಟು ಗುರು, ಇನ್ನು ಇಷ್ಟು ಚೆನ್ನಾಗಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ಅವರ ವಯಸ್ಸು ಎಷ್ಟು ಎಂದು ನೋಡುವುದಾದರೆ, ಇವರಿಗೆ ಈಗ 56 ವರ್ಷವಾಗಿದೆ. ಇನ್ನೇನು 60 ವರ್ಷಕ್ಕೆ ಹತ್ತಿರವಿದ್ದಾರೆ ಮಾಧುರಿ ದೀಕ್ಷಿತ್.

ಆದರೆ ಈ ನಟಿಯನ್ನು ನೋಡಿದರೆ ಖಂಡಿತವಾಗಿಯೂ ಅಷ್ಟು ವಯಸ್ಸಾಗಿದೆ ಎಂದು. ಅನ್ನಿಸುವುದಿಲ್ಲ. ಅಷ್ಟು ಯಂಗ್ ಆಗಿ ಕಾಣುತ್ತಾರೆ ಮಾಧುರಿ. ಈಗ ಇವರು ಸಿನಿಮಾದಲ್ಲಿ ನಟಿಸುವುದು ಕಡಿಮೆ ಆಗಿದೆ, ಓಟಿಟಿ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಮಾಧುರಿ ದೀಕ್ಷಿತ್ ಅವರು ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿದ್ದಾರೆ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ ಮಾಧುರಿ ದೀಕ್ಷಿತ್.

Leave a Comment