Mahalakshmi: ಗಂಡ ಜೈಲಿನಲ್ಲಿದ್ದರು ಶೋಕಿ ಮಾಡುತ್ತಿರುವ ನಟಿ ಮಹಾಲಕ್ಷ್ಮಿ! ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು

Written by Pooja Siddaraj

Published on:

ಕಳೆದ ವರ್ಷ ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಜೋಡಿ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಂದರ್ ಚಂದ್ರಶೇಖರ್. ಇವರಿಬ್ಬರ ಮದುವೆ ನಡೆದಿಂದ ಒಂದಲ್ಲ ಒಂದು ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು. ನೋಡಲು ಅಷ್ಟು ಚೆನ್ನಾಗಿರುವ ನಟಿ ಮಹಾಲಕ್ಷ್ಮಿ ಅವರು ಅಷ್ಟು ದಪ್ಪಗಿರುವ ನಿರ್ಮಾಪಕ ರವಿಂದರ್ ಅವರನ್ನು ಹಣಕ್ಕಾಗಿ ಮದುವೆ ಆಗಿದ್ದಾರೆ ಎಂದೇ ಟ್ರೋಲ್ ಆಗಿದ್ದರು.

ಯಾರು ಏನೇ ಅಂದರು ಕೂಡ ಈ ಜೋಡಿ ಯಾವುದೇ ಮಾತಿಗೆ ತಲೆಕೆಡಿಸಿಕೊಳ್ಳದೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಹಲವು ಸಾರಿ ಇವರು ಶೇರ್ ಮಾಡಿಕೊಳ್ಳುವ ಫೋಟೋಸ್ ಗಳಿಂದ ಕೂಡ ಟ್ರೋಲ್ ಆಗಿದ್ದಿದೆ. ಇತ್ತೀಚೆಗೆ ರವಿಂದರ್ ಅವರು ಜೈಲು ಸೇರಿದ್ದಾರೆ ಎನ್ನುವ ವಿಚಾರ ಗೊತ್ತೇ ಇದೆ, ಈ ವೇಳೆ ಮಹಾಲಕ್ಷ್ಮಿ ಅವರು ಕೆಲವು ಫೋಟೋಸ್ ಶೇರ್ ಮಾಡಿದ್ದು, ಟ್ರೋಲ್ ಆಗಿದ್ದಾರೆ.

ಅತ್ತ ರವಿಂದರ್ ಅವರು ವಂಚನೆಯ ಪ್ರಕರಣದಿಂದ ಜೈಲು ಪಾಲಾಗಿದ್ದಾರೆ. ಉದ್ಯಮಿ ಒಬ್ಬರಿಂದ 15ಕೋಟಿ ರೂಪಾಯಿ ಪಡೆದು, ಮೋಸ ಮಾಡಿದ್ದು, ಇದರಿಂದ ಜೈಲು ಸೇರಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಗಂಡ ಜೈಲಿನಲ್ಲಿರುವ ವೇಳೆ ನಟಿ ಮಹಾಲಕ್ಷ್ಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕಪ್ಪು ಬಣ್ಣದ ಸೀರೆ ಧರಿಸಿರುವ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಹಾಲಕ್ಷ್ಮಿ ಅವರು ಹಲವು ಬ್ರ್ಯಾಂಡ್ ಗಳ ಜೊತೆಗೆ Collaboration ಮಾಡಿಕೊಳ್ಳುತ್ತಾರೆ. ಅದೇ ರೀತಿ ಈಗ ಹೊಸ ಬ್ರ್ಯಾಂಡ್ ಒಂದರ ಜೊತೆಗೆ collab ಮಾಡಿದ್ದು, ಕಪ್ಪು ಬಣ್ಣದ ಸೀರೆ, ಕಪ್ಪು ಬಣ್ಣದ ಬಳೆ, ಬಿಂದಿ ಧರಿಸಿ ಸುಂದರವಾದ ಫೋಟೋಶೂಟ್ ಮಾಡಿಸಿದ್ದು, ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಈ ಫೋಟೋಸ್ ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಅವರನ್ನು ಟ್ರೋಲ್ ಮಾಡಿದ್ದಾರೆ.

ಮಹಾಲಕ್ಷ್ಮಿ ಅವರಿಗೆ ಗಂಡ ಜೈಲಿನಲ್ಲಿರುವಾಗ ಶೋಕಿ ಮಾಡುವುದು ಬೇಕಿತ್ತಾ ಎಂದು ಟ್ರೋಲ್ ಮಾಡುತ್ತಿದ್ದಾರೆ, ಅದರೆ ಮಹಾಲಕ್ಷ್ಮಿ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಅಷ್ಟಕ್ಕೂ ಇತ್ತೀಚೆಗೆ ಮಹಾಲಕ್ಷ್ಮಿ ಅವರು ಈ ಮದುವೆಯ ಬಗ್ಗೆ ತಮ್ಮ ಸ್ನೇಹಿತರ ಜೊತೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ರವಿಂದರ್ ಒತ್ತಾಯದಿಂದ ಈ ಮದುವೆ ನಡೆಯಿತು ಎಂದು ಫ್ರೆಂಡ್ ಒಬ್ಬರ ಜೊತೆಗೆ ನಟಿ ಮಹಾಲಕ್ಷ್ಮಿ ಹೇಳಿಕೊಂಡಿದ್ದಾರಂತೆ.

ಇದು ನಿಜವೋ ಸುಳ್ಳೋ ಎನ್ನುವುದು ಗೊತ್ತಿಲ್ಲ, ಆದರೆ ಈ ಒಂದು ವಿಷಯ ವೈರಲ್ ಆಗಿರುವುದಂತೂ ನಿಜ. ಈ ಮದುವೆ ಮಹಾಲಕ್ಷ್ಮಿ ಅವರಿಗೆ ಎರಡನೇ ಮದುವೆ ಆಗಿದ್ದು, ಮೊದಲ ಗಂಡನಿಂದ ಅವರಿಗೆ ಒಂದು ಮಗು ಕೂಡ ಇದೆ. ರವಿಂದರ್ ಅವರೊಡನೆ ಮದುವೆಯಾಗಿ ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಷ್ಟರಲ್ಲೇ ಮಹಾಲಕ್ಷ್ಮಿ ಅವರ ಬಗ್ಗೆ ಈ ಥರದ ಮಾತುಗಳು ಕೇಳಿಬರುತ್ತಿದೆ.

Leave a Comment