Mahalakshmi Ravinder: ಗಂಡ ಐಸಿಯುನಲ್ಲಿ, ಹೆಂಡತಿ ಪೊಂಗಲ್ ಸೆಲೆಬ್ರೇಷನ್ ನಲ್ಲಿ! ನಟಿ ಮಹಾಲಕ್ಷ್ಮಿ ಟ್ರೋಲ್!

Written by Pooja Siddaraj

Published on:

Mahalakshmi Ravinder: 2022ರಲ್ಲಿ ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಜೋಡಿ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಂದರ್ ಚಂದ್ರಶೇಖರ್. ಇವರಿಬ್ಬರ ಮದುವೆ ನಡೆದಿಂದ ಒಂದಲ್ಲ ಒಂದು ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು. ನೋಡಲು ಅಷ್ಟು ಚೆನ್ನಾಗಿರುವ ನಟಿ ಮಹಾಲಕ್ಷ್ಮಿ ಅವರು ಅಷ್ಟು ದಪ್ಪಗಿರುವ ನಿರ್ಮಾಪಕ ರವಿಂದರ್ ಅವರನ್ನು ಹಣಕ್ಕಾಗಿ ಮದುವೆ ಆಗಿದ್ದಾರೆ ಎಂದೇ ಟ್ರೋಲ್ ಆಗಿದ್ದರು.

ಯಾರು ಏನೇ ಅಂದರು ಕೂಡ ಈ ಜೋಡಿ ಯಾವುದೇ ಮಾತಿಗೆ ತಲೆಕೆಡಿಸಿಕೊಳ್ಳದೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಹಲವು ಸಾರಿ ಇವರು ಶೇರ್ ಮಾಡಿಕೊಳ್ಳುವ ಫೋಟೋಸ್ ಗಳಿಂದ ಕೂಡ ಟ್ರೋಲ್ ಆಗಿದ್ದಿದೆ. ಈ ನಟಿ ಇದೀಗ ಪೊಂಗಲ್ ಹಬ್ಬ ಆಚರಿಸಿ ಟ್ರೋಲ್ ಆಗಿದ್ದಾರೆ. ಹಬ್ಬ ಆಚರಿಸುತ್ತಿದ್ದರು ಟ್ರೋಲ್ ಆಗಿದ್ದೇಕೆ ಎಂದು ತಿಳಿಸುತ್ತೇವೆ ನೋಡಿ..

ನಟಿ ಮಹಾಲಕ್ಷ್ಮಿ ಅವರ ಗಂಡ ರವಿಂದರ್ ಅವರು ಶ್ವಾಸಕೋಶದ ಸಮಸ್ಯೆ ಇಂದಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿಂದರ್ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಗಂಡನ ಪರಿಸ್ಥಿತಿ ಹೀಗಿದ್ದಾಗಲು ಸಹ ಮಹಾಲಕ್ಷ್ಮಿ ಅವರು ಅದ್ಧೂರಿಯಾಗಿ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಅದರ ಫೋಟೋಸ್ ಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ಈಗ ವೈರಲ್ ಆಗಿದೆ.

ಆದರೆ ಈ ಫೋಟೋಸ್ ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಗಂಡ ಆಸ್ಪತ್ರೆಯಲ್ಲಿದ್ದರು ಸಹ ಈ ಥರ ಹಬ್ಬ ಆಚರಣೆ ಮಾಡಬೇಕಾ ಎಂದು ಹೇಳುತ್ತಿದ್ದಾರೆ.. ಆದರೆ ನಟಿ ಮಹಾಲಕ್ಷ್ಮಿ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

Leave a Comment