ಮದುವೆಗೆ ಹುಡುಗ ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಮದುವೆ ಆಗುವ ದಂಪತಿಗಳ ನಡುವೆ ವಯಸ್ಸಿನ ಅಂತರ ತುಂಬಾ ಇರುತ್ತದೆ.ಈ ವಯಸ್ಸಿನ ಅಂತರವೂ ಅವರ ಜೀವನದ ವೈವಾಹಿಕ ಸಂಬಂಧದ ಸಮಾನತೆಯನ್ನು ಹೇಳುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ.ಹಾಗಾದರೆ ಮದುವೆಗೆ ಹುಡುಗ-ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ತಿಳಿಯೋಣ ಬನ್ನಿ..
ಅಟ್ಲಾಂಟ ಯುನಿವರ್ಸಿಟಿ ನಡೆಸಿದ ಸಂಶೋಧನೆಯ ಪ್ರಕಾರ ಹುಡುಗ ಹುಡುಗಿಯ ನಡುವೆ ವಯಸ್ಸಿನ ಅಂತರ ಹೆಚ್ಚಿದಷ್ಟು ಡೈವೋರ್ಸ್ ಸಾಧ್ಯತೆ ಹೆಚ್ಚಾಗಿರುತ್ತದೆ.ವಿವಿಧ ವಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನಡೆಸಿದೆ.ಅದರ ಪ್ರಕಾರ ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಮದುವೆ ಆಗಿರುವ ಹುಡುಗ ಹುಡುಗಿಯ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
ಆದರೆ ವಯಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಅನ್ಯೋನ್ಯತೆ ಇರುವುದಿಲ್ಲ.ಇನ್ನು 5 ರಿಂದ 10 ವರ್ಷದ ಅಂತರದಲ್ಲಂತೂ ಸಾಮರಸ್ಯ ಬಹಳ ಕಡಿಮೆ.ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಗಳಲ್ಲಿ ವಿರಸ ಹೆಚ್ಚು ,ಸಾಮರಸ್ಯ ಕಡಿಮೆ ಅಂತ ಈ ಸಂಶೋಧನೆ ಹೇಳುತ್ತಿದೆ
ಆದರೆ ಇದಕ್ಕೆ ಅಪವಾದದಂತಿರುವ ಎಷ್ಟೋ ಜೋಡಿ ಭಾರತದಲ್ಲಿ ಸಿಗಬಹುದು
ಆದರೆ ಇದು ಈ ಕಾಲದ ಜೋಡಿಗಳ ಕಥೆಯಾಗಿದೆ.ಅದೇ ರೀತಿ ಮಗುವಿಲ್ಲದ ಜೋಡಿಗಳು ಬೇಗ ಸೆಪರೇಟ್ ಆಗ್ತಾರೆ.
ಮಗು ಇರುವವರು ಬೇರ್ಪಡುವ ಬಗ್ಗೆ ಕೊಂಚ ಯೋಚಿಸುತ್ತಾರೆ ಎನ್ನುವ ವಿವರಗಳು ಈ ಸಂಶೋಧನೆಯಿಂದ ಲಭ್ಯವಾಗಿದೆ.
ಧನ್ಯವಾದಗಳು.