ಬೆಳಿಗ್ಗೆ ಸರಿಯಾಗಿ ಹೋಗಲು ಆಗುತ್ತಿಲ್ಲವೇ?ಮಲಬದ್ದತೆ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ!

Featured-Article

ಒಂದು ಕಾಲದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಸಿಬೇಕಾಯಿ ಅಥವಾ ಪೇರಳೆ ಹಣ್ಣು ಇಂದು ಒಂದಕ್ಕೆ ಹತ್ತರಿಂದ ಇಪ್ಪತ್ತು ರೂಪಾಯಿಗಳಾಗಿವೆ ಕಾರಣ ಸೇಬು ಹಣ್ಣಿನಷ್ಟೇ ಇದು ಉತ್ತಮವಾಗಿರುತ್ತದೆ.ಈ ಸೀಬೆ ಕಾಯಿನಲ್ಲಿರುವ ಅಂಶವೂ ಹಲವು ರೋಗಗಳಿಗೆ ರಾಮಭಾಣ ವಾಗಿದೆ ಮತ್ತು ಈ ಸೀಬೆ ಹಣ್ಣಿನಿಂದ ಹೋಗಲಾಡಿಸುವಂತ ಕಾಯಿಲೆಗಳ ಬಗ್ಗೆ ತಿಳಿಯೋಣ ಬನ್ನಿ.

ಸಿಬೇಕಾಯಿ ಹಲವಾರು ಔಷಧೀಯ ಗುಣಗಳನ್ನ ಹೊಂದಿರುವ ಒಂದು ಸೂಪರ್ ಹಣ್ಣು,ದಿನಾಲು ಒಂದು ಹಣ್ಣನ್ನ ತಿನ್ನುವುದರಿಂದ ಹಲವಾರು ಕಾಯಿಲೆಗಳಿಗೆ ರಾಮಭಾಣವಾಗಿದೆ. ವಿಶೇಷವಾಗಿ ಸಕ್ಕರೆಕಾಯಿಲೆ ಇರುವವರಿಗೆ ಈ ಹಣ್ಣಿನಲ್ಲಿರುವ ಬೀಟಾ ಕ್ಯಾವಿಟಿನ್ ಪೊಟಾಶಿಯಂ ಹಾಗು ನಾರಿನಂಶ ಹೆಚ್ಚಾಆಗಿದ್ದು ಸಕ್ಕರೆ ಅಂಶವನ್ನ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಜಾಸ್ತಿ ವಿಟಮಿನ್ ಸಿ ಇರುವ ಕಾರಣ ಈ ಹಣ್ಣು ಸೇವನೆ ಮಾಡುವುದರಿಂದ ಮರೆವಿನ ಕಾಯಿಲೆ ಹಾಗು ಸಂಧಿವಾತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಉತ್ತಮ.ಮತ್ತು ಈ ಹಣ್ಣನ್ನ ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನ ಉತ್ತಮವಾಗಿರುಸುತ್ತದೆ.

ಈ ಹಣ್ಣಿನಲ್ಲಿರುವ ನಾರಿನಂಶದಿಂದ ಉತ್ತಮವಾದ ಪಚನಕ್ರಿಯೆ ಆಗುತ್ತದೆ ಅಲ್ಲದೆ ಈ ಹಣ್ಣನ್ನು ಸೇವಿಸುವುದರಿಂದ ವಾಂತಿ ಹಾಗು ಭೇದಿಗೆ ಇದು ಉತ್ತಮ.

ಸೀಬೆಹಣ್ಣು ಮತ್ತು ಎಲೆ ಸೂಕ್ಷ್ಮಾಣು ಜೀವಗಳ ವಿರುದ್ಧ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ಯಾರಿಗೆ ಮಲಭದ್ದತೆ ಸಮಸ್ಯೆ ಇರುತ್ತದೆ ಅವರಿಗೆ ಈ ಹಣ್ಣು ಉತ್ತಮ.

Leave a Reply

Your email address will not be published.