Malashree: ಮಗಳ ಜೊತೆಗೆ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ಮಾಲಾಶ್ರೀ

Written by Pooja Siddaraj

Published on:

Malashree: ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್, ಮೋಹಕ ನಟಿ ಮಾಲಾಶ್ರೀ. 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀ ಅವರಿಗೂ ಇತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ. ಈ ಹಿರಿಯ ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಸಕ್ರಿಯವಾಗಿ ಇಲ್ಲದೆ ಇದ್ದರು, ಆಗಾಗ ತಮ್ಮ ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ನಟಿ ಮಾಲಾಶ್ರೀ ಆಗಿನ ಕಾಲದ ಎಲ್ಲಾ ಹುಡುಗರ ಮೋಸ್ಟ್ ಫೇವರೆಟ್ ನಟಿ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ನಟಿಯಾಗಿ ಮೆರೆದರು ಮಾಲಾಶ್ರೀ. ಹೀರೋಗಳಿಗೆ ಇರುತ್ತಿದ್ದಷ್ಟೇ ಬೇಡಿಕೆ ಮಾಲಾಶ್ರೀ ಅವರಿಗು ಇತ್ತು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದು. ಒಂದು ಕಾಲದಲ್ಲಿ ಇವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿತ್ತು.

ಹೋಮ್ಲಿ ಹುಡುಗಿ, ಮುಗ್ಧ ಹುಡುಗಿ, ಹಳ್ಳಿ ಹುಡುಗಿ, ಸಿಟಿಯ ಬೋಲ್ಡ್ ಹುಡುಗಿ, ಖಡಕ್ ಪೊಲೀಸ್ ಪಾತ್ರಗಳು ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವಂತಹ ಕಲಾವಿದೆ ಮಾಲಾಶ್ರೀ ಅವರು. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇತ್ತು. ಮಾಲಾಶ್ರೀ ಅವರು ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ರಾಮು ಅವರೊಡನೆ ವಿವಾಹವಾದರು. ಮದುವೆ ನಂತರ ಇವರು ನಟಿಸುವುದು ಸ್ವಲ್ಪ ಕಡಿಮೆ ಆಯಿತು. ಇತ್ತೀಚೆಗಂತೂ ಮಾಲಾಶ್ರೀ ಅವರು ಅಭಿನಯಿಸುವುದು ಬಹಳ ಕಡಿಮೆ ಆಗಿದೆ.

ಮದುವೆ ನಂತರ ತಮ್ಮ ಸಂಪೂರ್ಣ ಸಮಯವನ್ನು ಹೆಚ್ಚಾಗಿ ಕುಟುಂಬಕ್ಕೆ ಮೀಸಲಾಗಿ ಇಟ್ಟರು ಮಾಲಾಶ್ರೀ ಅವರು. ಸಿನಿರಂಗದಿಂದ ದೂರಾಗಿ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ ನಟಿ ಮಾಲಾಶ್ರೀ. ಮಾಲಾಶ್ರೀ ಮತ್ತು ರಾಮು ದಂಪತಿಗೆ ಇಬ್ಬರು ಮಕ್ಕಳು, ಮಗಳು ಆರಾಧನಾ ಮತ್ತು ಮಗ ಆರ್ಯ. ಮಕ್ಕಳ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ ನಟಿ ಮಾಲಾಶ್ರೀ. ಫ್ಯಾಮಿಲಿ ಜೊತೆಗಿನ ಸ್ಪೆಷಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

ಮಾಲಾಶ್ರೀ ಅವರ ಮಗಳು ಆರಾಧನಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಗೊತ್ತೇ ಇದೆ. ಆರಾಧನಾ ಅವರು ಡಿಬಾಸ್ ದರ್ಶನ್ ಅವರೊಡನೆ ಕಾಟೇರಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿನ್ನೆಯಷ್ಟೇ ದೀಪಾವಳಿ ಹಬ್ಬ ನಡೆದಿದ್ದು, ನಟಿ ಮಾಲಾಶ್ರೀ ಅವರು ತಮ್ಮ ಮಗಳು ಆರಾಧನಾ ಅವರೊಡನೆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಇದೀಗ ಅಮ್ಮ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೀವು ಕೂಡ ನೋಡಿ..

Leave a Comment