Malavika Avinash: ಕನ್ನಡದ ಖ್ಯಾತ ನಟಿ ಮಾಳವಿಕಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕೆಜಿಎಫ್ ಸಿನಿಮಾ ನಂತರ ದೇಶದಲ್ಲಿ ಎಲ್ಲರಿಗೂ ಪರಿಚಯ ಆಗಿರುವ ನಟಿ ಎಂದರು ತಪ್ಪಲ್ಲ. ಇದೀಗ ಈ ನಟಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡಿದ ಕೆಲವು ವಂಚಕರು ಇವರ ಆಧಾರ್ ಕಾರ್ಡ್ ಬಳಸಿ ಸಿಮ್ ಖರೀದಿ ಮಾಡಿದ್ದಾರಂತೆ. ನಂತರ ಏನಾಗಿದೆ ಗೊತ್ತಾ?
ತಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಬಗ್ಗೆ ಖುದ್ದು ನಟಿ ಮಾಳವಿಕಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಿರುವುದು ಏನು ಎಂದರೆ, ಮಾಳವಿಕಾ ಅವರಿಗೆ TRAI ಇಂದ ಅವರ ಫೋನ್ ನಂಬರ್ ಸ್ಥಗಿತಗೊಳಿಸುವುದಾಗಿ ಒಂದು ಮೆಸೇಜ್ ಬರುತ್ತದೆ. ಈ ರೀತಿ ಆಗದ ಹಾಗೆ ಮಾಡಲು 9 ನಂಬರ್ ಗೆ ಕರೆ ಮಾಡಿ ಎಂದು ಮೆಸೇಜ್ ಬಂದಿರುತ್ತದೆ..
ಆ ನಂಬರ್ ಗೆ ಕರೆ ಮಾಡಿದಾಗ ಅಸಲಿ ವಿಚಾರ ಗೊತ್ತಾಗುತ್ತದೆ. ಮಾಳವಿಕಾ ಅವರ ಆಧಾರ್ ಕಾರ್ಡ್ ಬಳಸಿ ಅವರ ಹೆಸರಿನಲ್ಲಿ ವೆಸ್ಟ್ ಮುಂಬೈಗೆ ಸೇರಿದ ಸೈಬರ್ ವಂಚಕರು ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿದ್ದಾರೆ. ಬಳಿಕ ಆ ನಂಬರ್ ಇಂದ ಒಂದಷ್ಟು ಜನರಿಗೆ ಕಿರುಕುಳ ಕೊಡುವ ಹಾಗೆ, ಕೆಟ್ಟ ಪದಗಳನ್ನು ಬಳಸಿ ಮೆಸೇಜ್ ಮಾಡಿದ್ದಾರೆ. ಪೊಲೀಸರು ಮಾಳವಿಕಾ ಅವರಿಗೆ ಮುಂಬೈ ಗೆ ಬಂದು ಕಂಪ್ಲೇಂಟ್ ಕೊಡಬೇಕು ಎಂದು ಮೊದಲು ತಿಳಿಸಿದ್ದಾರೆ..
ನಂತರ ವಿಡಿಯೋ ಕಾಲ್ ನಲ್ಲಿ ಮಾಳವಿಕಾ ಅವರನ್ನು ನೋಡಿ, ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಗುರುತು ಹಿಡಿದಿದ್ದಾರೆ. ಮುಂಬೈನ ಆ ಪೊಲೀಸ್ ಅಧಿಕಾರಿ ಕೆಜಿಎಫ್ ಸಿನಿಮಾ ಫ್ಯಾನ್ ಆಗಿರುವ ಕಾರಣ ಮಾಳವಿಕಾ ಅವರನ್ನು ಗುರುತು ಹಿಡಿದಿದ್ದಾರೆ. ಬಳಿಕ ಮಾಳವಿಕಾ ಅವರಿಗೆ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಬಗ್ಗೆ ಕೂಡಲೇ ಪೊಲೀಸರಲ್ಲಿ ದೂರು ನೀಡಿ ಎಂದು ಸಲಹೆ ನೀಡಿದ್ದಾರಂತೆ.
ಖ್ಯಾತ ನಟಿಯ ಹೆಸರಿನಲ್ಲಿ ಈ ರೀತಿ ನಡೆದಿರುವುದು ನಿಜಕ್ಕೂ ಶಾಕ್ ನೀಡುವಂಥ ವಿಚಾರವೇ. ಕೆಜಿಎಫ್ ಸಿನಿಮಾ ಇಂದ ಮಾಳವಿಕಾ ಅವರನ್ನು ಗುರುತಿಸಿರುವುದನ್ನು ಕೂಡ ಮೆಚ್ಚಲೇಬೇಕು. ಸೈಬರ್ ವಂಚಕರು ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ ಆಗಿದ್ದು, ಎಲ್ಲರೂ ಕೂಡ ಬಹಳ ಹುಷಾರಾಗಿ ಇರಬೇಕು.