Meena: ಹೊಸ ವರ್ಷಕ್ಕೆ ನಟಿ ಮೀನಾ ಅವರ ಹೊಸ ಫೋಟೋಶೂಟ್! ನೆಟ್ಟಿಗರು ಫಿದಾ!

Written by Pooja Siddaraj

Published on:

Meena: 90ರ ದಶಕದಲ್ಲಿ ತಮ್ಮ ಕ್ಯೂಟ್ನೆಸ್ ಇಂದ ಇಡೀ ದಕ್ಷಿಣ ಭಾರತದಲ್ಲಿ ಎಲ್ಲರ ಫೇವರೆಟ್ ಆಗಿದ್ದವರು ನಟಿ ಮೀನಾ. ಈ ನಟಿ ನೋಡಲು ಎಷ್ಟು ಸುಂದರವಾಗಿದ್ದರೋ ಇವರ ಅಭಿನಯ ಸಹ ಅಷ್ಟೇ ಚೆನ್ನಾಗಿರುತ್ತಿತ್ತು. ಹೋಮ್ಲಿ. ರೋಲ್ ಗಳಿಗೆ ಹೇಳಿ ಮಾಡಿಸಿದ ಹಾಗಿದ್ದರು ನಟಿ ಮೀನಾ. ಅಂತಹ ಪಾತ್ರಗಳಿಗೆ ಮಾತ್ರ ಸೀಮಿತವಾಗಿರದೆ ಮಾಡರ್ನ್ ಪಾತ್ರಗಳಲ್ಲಿ ಸಹ ನಟಿಸಿ ಎಲ್ಲಾ ಪಾತ್ರಗಳಿಗೂ ಸೈ ಎನ್ನಿಸಿಕೊಂಡವರು.

ಇವರು ಚೈಲ್ಡ್ ಆರ್ಟಿಸ್ಟ್ ಆಗಿ ನಟನೆ ಶುರು ಮಾಡಿ ಬಳಿಕ ಹೀರೋಯಿನ್ ಆಗಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಎಲ್ಲಾ ಭಾಷೆಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಮೀನಾ ಅವರು ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್, ಸುದೀಪ್ ಎಲ್ಲರೊಡನೆ ನಟಿಸಿ, ಇಲ್ಲಿನ ಜನರಿಗೂ ಮೆಚ್ಚಿನ ನಟಿ ಆಗಿದ್ದಾರೆ ಎಂದರೆ ತಪ್ಪಲ್ಲ. ಬೆಂಗಳೂರಿನ ಮೂಲದವರಾದ ವಿದ್ಯಾಸಾಗರ್ ಅವರೊಡನೆ ಮದುವೆಯಾಗಿದ್ದರು ಮೀನಾ. ಇವರರಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ.

ಕೋವಿಡ್ ಸಮಯದಲ್ಲಿ ಇವರ ಪತಿ ವಿಧಿವಶರಾದರು. ಆಗಿನಿಂದ ಬಹಳ ಸಮಯ ಬಣ್ಣದ ಲೋಕದಿಂದ ದೂರವೇ ಇದ್ದ ಮೀನಾ ಅವರು ಈಗ ಮತ್ತೊಮ್ಮೆ ತಮಿಳಿನ ಡ್ಯಾನ್ಸ್ ಶೋ ಗೆ ಜಡ್ಜ್ ಆಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಹಾಗೆಯೇ ಮೀನ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ದು, ಹೊಸ ವರ್ಷಕ್ಕೆ ಫೋಟೋಶೂಟ್ ಮಾಡಿಸಿದ್ದಾರೆ, ಬಿಳಿ ಬಣ್ಣದ ಡ್ರೆಸ್ ನಲ್ಲಿ ಮಾಡಿಸಿರುವ ಈ ಫೋಟೋಶೂಟ್ ಎಲ್ಲರ ಗಮನ ಸೆಳೆದಿದೆ.

Leave a Comment