Megha Shetty: ಕಪ್ಪು ಲೆಹೆಂಗಾದಲ್ಲಿ ಮಿಂಚುತ್ತಿರುವ ಮೇಘಾ ಶೆಟ್ಟಿ! ಫೋಟೋಸ್ ವೈರಲ್!

Written by Pooja Siddaraj

Published on:

Megha Shetty: ಜೊತೆ ಜೊತೆಯಲಿ ಧಾರವಾಹಿ ಆರಂಭವಾದ ಸಮಯದಿಂದಲೂ ಕಿರುತೆರೆಯ ಸೆನ್ಸೇಷನ್ ಆಗಿತ್ತು, ಈ ಧಾರವಾಹಿ ಟಿ.ಆರ್.ಪಿ ಮತ್ತು ಜನಪ್ರಿಯತೆ ಎರಡರಲ್ಲೂ ಸಹ ಟಾಪ್ ಸ್ಥಾನದಲ್ಲಿತ್ತು. ಜೊತೆ ಜೊತೆಯಲಿ ಮೂಲಕ ಬ್ರೇಕ್ ಗಾಗಿ ಕಾಯುತ್ತಿದ್ದ ಅನಿರುದ್ಧ್ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಅವರ ಲುಕ್ಸ್, ಮ್ಯಾನರಿಸಂ, ಅಭಿನಯ ಎಲ್ಲವನ್ನು ಕಿರುತೆರೆ ವೀಕ್ಷಕರು ಇಷ್ಟಪಟ್ಟರು. ಆರ್ಯವರ್ಧನ್ ಎಲ್ಲರ ಮೆಚ್ಚಿನ ಪಾತ್ರವಾಗಿತ್ತು. ಜೊತೆ ಜೊತೆಯಲಿ ಧಾರವಾಹಿ ಮೂಲಕ ಹೊಸ ಪ್ರತಿಭೆ ಮೇಘಾ ಶೆಟ್ಟಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.

ಚಿಕ್ಕ ವಯಸ್ಸಿನ ಮೇಘಾ ಶೆಟ್ಟಿ ಅವರಿಗೆ ಇದು ಮೊದಲ ಧಾರಾವಾಹಿ ಆದರೂ ಪಕ್ವವಾಗಿ ಅಚ್ಚುಕಟ್ಟಾಗಿ ನಟನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಮೇಘಾ ಶೆಟ್ಟಿ ಅವರ ಮುಗ್ಧ ಅಭಿನಯ, ಅವರ ಸರಳ ನಡವಳಿಕೆ ಕರ್ನಾಟಕದ ಜನರಿಗೆ ಅವರು ಬಹಳ ಹತ್ತಿರ ಆಗುವ ಹಾಗೆ ಮಾಡಿತು. ಅನು ಸಿರಿಮನೆ ನಮ್ಮ ಮನೆಯ ಹುಡುಗಿ ಎಂದೇ ಹೇಳುತ್ತಿದ್ದರು ಕರ್ನಾಟಕದ ಜನ. ಜೊತೆ ಜೊತೆಯಲಿ ಧಾರವಾಹಿಯ ಯಶಸ್ಸಿನಿಂದ ಮೇಘಾ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಮೊದಲ ಸಿನಿಮಾದಲ್ಲಿಯೇ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದರು, ಈ ಸಿನಿಮಾ ಬಿಡುಗಡೆಯಾಗಿ ಯಶಸ್ಸು ತಂದುಕೊಟ್ಟಿತು. ಬಳಿಕ ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿ ಆ ಸಿನಿಮಾ ಕೂಡ ಹಿಟ್ ಆಗಿದೆ. ಇದೀಗ ಇವರು ಧನವೀರ್ ಅವರೊಡನೆ ಕೈವಾ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದು 80ರ ದಶಕದ ನೈಜ ಘಟನೆ ಆಧಾರಿತ ಸಿನಿಮಾ ಆಗಿದೆ.

ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರು ಯಶಸ್ಸು ಗಳಿಸುತ್ತಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಕಪ್ಪು ಬಣ್ಣದ ಲೆಹೆಂಗಾ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಮೇಘಾ. ಈ ಫೋಟೋಶೂಟ್ ನೆಟ್ಟಿಗರ ಗಮನ ಸೆಳೆದಿದ್ದು, ಸುಂದರವಾಗಿ ಕಾಣುತ್ತಿದ್ದೀರಾ ಎಂದು ಮೇಘಾ ಶೆಟ್ಟಿ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Leave a Comment