Meghana Raj: ಮಗನ ಜೊತೆಗೆ ಕ್ರಿಸ್ಮಸ್ ಹಬ್ಬ ಆಚರಿಸಿದ ಮೇಘನಾ ರಾಜ್, ಫೋಟೋಸ್ ವೈರಲ್!

Written by Pooja Siddaraj

Published on:

Meghana Raj: ಮೇಘನಾ ರಾಜ್ ಕನ್ನಡ ಚಿತ್ರರಂಗದ ಮನೆಮಗಳು. ಇವರ ಜೀವನದಲ್ಲಿ ಎಷ್ಟು ಸಂತೋಷವನ್ನು ನೋಡಿದರೊ, ಚಿಕ್ಕ ವಯಸ್ಸಿಗೆ ಅಷ್ಟೇ ದುಃಖವನ್ನು ಸಹ ನೋಡಿದರು. 2020ರಲ್ಲಿ ನಡೆದ ಅನಿರೀಕ್ಷಿತ ಘಟನೆ, ಮೇಘನಾ ರಾಜ್ ಅವರ ಜೀವನವನ್ನೇ ಬದಲಾಯಿಸಿತು ಎಂದರೆ ತಪ್ಪಾಗುವುದಿಲ್ಲ. ವಿಧಿ ಎಷ್ಟೇ ನೋವು ಕೊಟ್ಟರೂ ಮೇಘನಾ ರಾಜ್ ಅವರು ಮರಳಿ ಬಂದಿದ್ದಾರೆ . ಜೀವನವನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ.

ಇತ್ತೀಚೆಗೆ ತತ್ಸಮ ತದ್ಭವ ಸಿನಿಮಾ ಮೂಲಕ ನಟನೆಗೆ ಕಂಬ್ಯಾಕ್ ಮಾಡಿದರು ಮೇಘನಾ ರಾಜ್. ಸಿನಿಮಾದಲ್ಲಿ ಬ್ಯುಸಿ ಇರುವುದರ ಜೊತೆಗೆ ಮಗನ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ರಾಯನ್ ಇನ್ನು ಚಿಕ್ಕ ಮಗು, ಹಾಗಾಗಿ ಮಗನನ್ನು ಕೂಡ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಮೇಘನಾ ರಾಜ್. ಹಬ್ಬಗಳನ್ನು ಮಗನ ಜೊತೆಗೆ ಸೆಲೆಬ್ರೇಟ್ ಮಾಡುತ್ತಾರೆ..

ಮೇಘನಾ ರಾಜ್ ಅವರು ಎಲ್ಲಾ ಹಬ್ಬವನ್ನು ತಮ್ಮ ಫ್ಯಾಮಿಲಿ ಜೊತೆಗೆ ಆಚರಿಸುತ್ತಾರೆ. ಅದರಲ್ಲೂ ಕ್ರಿಸ್ಮಸ್ ಹಬ್ಬ ಇವರಿಗೆ ತುಂಬಾ ಸ್ಪೆಷಲ್. ಇಡೀ ಮನೆಯನ್ನು ಅಲಂಕಾರ ಮಾಡಿ, ಹಬ್ಬದ ಆಚರಣೆ ಮಾಡುತ್ತಾರೆ. ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಕೇಕ್ ಎಲ್ಲವೂ ಇರುತ್ತದೆ. ಹಾಗೆಯೇ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ದಿನ ಚರ್ಚ್ ಗೆ ಹೋಗಿ ಬರುತ್ತಾರೆ.

ಈ ವರ್ಷವೂ ಅದೇ ರೀತಿ ತುಂಬಾ ಸ್ಪೆಶಲ್. ಮನೆಯಲ್ಲಿ ಅಪ್ಪ, ಅಮ್ಮ ಹಾಗೂ ಮಗನ ಜೊತೆಗೆ ಹಬ್ಬದ ಆಚರಣೆ ಮಾಡಿದ್ದಾರೆ. ಇದೀಗ ಮೇಘನಾ ರಾಜ್ ಅವರ ಮನೆಯ ಕ್ರಿಸ್ಮಸ್ ಹಬ್ಬದ ಫೋಟೋಸ್ ವೈರಲ್ ಆಗಿದೆ.

Leave a Comment