Meghana Raj: ಚಿರು ನೆನಪಲ್ಲಿ ಭಾವುಕರಾದ ಮೇಘನಾ ಸರ್ಜಾ, ಕಾರಣ ಏನು?

Written by Pooja Siddaraj

Published on:

Meghana Raj: ಚಂದನವನದ ಎಲ್ಲರಿಗೂ ಶಾಕ್ ನೀಡಿದ ಮರಣಗಳಲ್ಲಿ ಒಂದು ಚಿರಂಜೀವಿ ಸರ್ಜಾ ಅವರು ವಿಧಿವಶರಾಗಿದ್ದು ಎಂದು ಹೇಳಿದರೆ ತಪ್ಪಲ್ಲ. ಅಷ್ಟು ಚಿಕ್ಕ ವಯಸ್ಸಿಗೆ ಚಿರಂಜೀವಿ ಸರ್ಜಾ ಅವರು ವಿಧಿವಶರಾಗುತ್ತಾರೆ ಎಂದು ಯಾರು ಕೂಡ ಊಹಿಸಿರಲಿಲ್ಲ. 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ವಿಧಿವಶರಾದರು. ಆದರೆ ಅಭಿಮಾನಿಗಳು ಇನ್ನು ಕೂಡ ಚಿರಂಜೀವಿ ಸರ್ಜಾ ಅವರನ್ನು ಮರೆತಿಲ್ಲ.

ಚಿರಂಜೀವಿ ಸರ್ಜಾ ಅವರು ವಿಧಿವಶರಾದಾಗ ಪತ್ನಿ ಮೇಘನಾ ರಾಜ್ ಅವರೊಡನೆ ಮದುವೆಯಾಗಿ 2 ವರ್ಷ ಕಳೆದಿತ್ತು. ಚಿರು ಮೇಘನಾ ಇಬ್ಬರಿಗೂ ತುಂಬಾ ಚಿಕ್ಕ ವಯಸ್ಸು. ಆರೇಳು ವರ್ಷಗಳ ಕಾಲ ಪ್ರೀತಿಸಿ, ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆ ಆಗಿದ್ದರು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ. ಇವರಿಬ್ಬರು ಎಲ್ಲರ ಫೇವರೆಟ್ ಜೋಡಿ ಎಂದರೆ ತಪ್ಪಲ್ಲ. ಇವರಿಬ್ಬರ ಪ್ರೀತಿ ಎಲ್ಲರಿಗೂ ಒಂದು ರೀತಿ ಸ್ಪೂರ್ತಿಯಾಗಿತ್ತು ಎಂದರೆ ತಪ್ಪಲ್ಲ.

ಇಂದು ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ಈ ಪ್ರಪಂಚದಲ್ಲಿ ಇಲ್ಲದೆ ಹೋದರು ಕೂಡ ಮೇಘನಾ ರಾಜ್ ಅವರು ಚಿರು ಅವರ ನೆನಪಲ್ಲೆ ಇದ್ದಾರೆ. ಆಗಾಗ ಚಿರು ಅವರ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಚಿರು ಅವರ ನೆನಪು ಹೆಚ್ಚಿನ ನೋವು ನೀಡದ ಹಾಗೆ ನೋಡಿಕೊಳ್ಳಲು ರಾಯನ್ ರಾಜ್ ಸರ್ಜಾ ಮೇಘನಾ ಅವರ ಜೊತೆಗಿದ್ದಾರೆ. ಮಗನ ಜೊತೆಗೆ ತುಂಬಾ ಸಮಯ ಕಳೆಯುವ ಮೇಘನಾ ರಾಜ್ ಅವರು ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ, ಈ ದಿನ ಮೇಘನಾ ರಾಜ್ ಅವರಿಗೆ ಮತ್ತು ಚಿರು ಅವರ ಕುಟುಂಬಕ್ಕೆ ಬಹಳ ವಿಶೇಷ. ಈ ದಿನ ಮೇಘನಾ ರಾಜ್ ಅವರು ಚಿರು ಅವರ ನೆನಪಿನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಚಿರು ಅವರೊಡನೆ ಇರುವ ಹಳೆಯ ಫೋಟೋ ಒಂದನ್ನು ಶೇರ್ ಮಾಡಿ, “ನಿನ್ನನ್ನು ನಾವು ಯಾವಾಗಲೂ ಸೆಲೆಬ್ರೇಟ್ ಮಾಡುತ್ತೇವೆ.. Happy Birthday Husband..” ಎಂದು ಬರೆದು ಹಳೆಯ ಫೋಟೋ ಶೇರ್ ಮಾಡಿದ್ದಾರೆ ಮೇಘನಾ ರಾಜ್. ಈ ಫೋಟೋ ನೋಡಿ ಅಭಿಮಾನಿಗಳು ಚಿರು ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ.

ಚಿರು ಅವರು ವಿಧಿವಶರಾಗಿ 3 ವರ್ಷ ಕಳೆದು ಹೋಯಿತು. ಮೇಘನಾ ರಾಜ್ ಅವರು ಈಗಷ್ಟೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಮೇಘನಾ ಅಭಿನಯದ ತತ್ಸಮ ತದ್ಭವ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿತು. ಇದೀಗ ಅದೇ ಸಿನಿಮಾ ಮಲಯಾಳಂ ನಲ್ಲಿ ಬಿಡುಗಡೆ ಆಗುತ್ತಿದೆ. ಅಷ್ಟೇ ಅಲ್ಲದೆ, ಮೇಘನಾ ರಾಜ್ ಅವರು ಶ್ರೀನಗರ ಕಿಟ್ಟಿ ಅವರೊಡನೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Leave a Comment