ಮೊಡವೆಗೆ 100% ಪಕ್ಕಾ ಮನೆಮದ್ದುಗಳು!

Health & Fitness

ಈಗಿನ ಕಾಲದಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಮೊಡವೆ ಮೂಡುವುದು ಸಾಮಾನ್ಯವಾಗಿದೆ.
ಮೊಡವೆ ಮೂಡಲು ಮುಖ್ಯವಾದ ಕಾರಣವೆಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದು.
ಈ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ.ಪಿಸಿಒಡಿ ಮತ್ತು ಮುಟ್ಟಿನ ಸಮಸ್ಯೆ ಇದ್ದಾಗಲೂ ಸಹ ಮೊಡವೆಗಳು ಜಾಸ್ತಿಯಾಗುತ್ತವೆ ಜೊತೆಗೆ ಕೂದಲು ಉದುರುವುದು ಸಹ ಆಗುತ್ತಿರುತ್ತದೆ.

ಇನ್ನು ಇಂತಹ ಮೊಡವೆಗಳನ್ನು ಹೊಗಲಾಡಿಸಲು ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆ ಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.

1 ) ಸೊಪ್ಪು ತರಕಾರಿಯ ಲೇಪನ

ಈರುಳ್ಳಿ , ಪುದೀನಾ , ಜೇನುತುಪ್ಪ. ಈರುಳ್ಳಿ ಹಾಗೂ ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಬೇರೆ ಬೇರೆಯಾಗಿ ನೀರನ್ನು ಸೇರಿಸದೆ ರುಬ್ಬಿಕೊಳ್ಳಿರಿ.ನಂತರ ಎರಡನ್ನೂ ಅರ್ಧ ಚಮಚಗಳಷ್ಟು ತೆಗೆದುಕೊಂಡು 1 ಬಟ್ಟಲಲ್ಲಿ ಮಿಶ್ರಣ ಮಾಡಿ ಇದಕ್ಕೆ
2 ಹನಿಯಷ್ಟು ಜೇನುತುಪ್ಪವನ್ನು ಸೇರಿಸಿ ಕಲಸಿರಿ.ಈ ಮಿಶ್ರಣವನ್ನು ಮೊಡವೆಗಳಿರುವ ಜಾಗಕ್ಕೆ ಮಾತ್ರ ಹಚ್ಚಿರಿ.ಇದನ್ನು ಸ್ನಾನ ಮಾಡುವ ಮುನ್ನ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ಸ್ನಾನ ಮಾಡಿ.ಸ್ನಾನಕ್ಕೆ ಕಡಲೆ ಹಿಟ್ಟನ್ನು ಉಪಯೋಗಿಸಿ ,ಸಾಬೂನನ್ನು ಈ ಲೇಪನ ಹಚ್ಚಿದ ಜಾಗಕ್ಕೆ ಹಾಕಬೇಡಿ.

2 ) ಉಪವಾಸ ಚಿಕಿತ್ಸೆ

ಮೊದಲ 3 ದಿನಗಳು ಊಟದ ಬದಲಾಗಿ ಕೇವಲ ಎಳನೀರನ್ನು ಸೇವಿಸುತ್ತಾ ಬನ್ನಿ
ನಂತರ 3 ದಿನ ಹಸಿಯಾದ ಬೇಯಿಸಿದ ತರಕಾರಿ ಯನ್ನು ಮತ್ತು ಹಣ್ಣುಗಳನ್ನು ಸೇವಿಸುತ್ತಾ ಬನ್ನಿ
ಇದರಿಂದ ದೇಹ ಶುದ್ಧವಾಗಿ ಮೊಡವೆಗಳು ಕಡಿಮೆಯಾಗುತ್ತವೆ.ಹಾಗೂ ಆದಷ್ಟು ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಕಡಿಮೆ ತಿನ್ನಿ.

3 ) ಹುತ್ತದ ಮಣ್ಣು

ಹುತ್ತದ ಮಣ್ಣನ್ನು ನೀರಿನಲ್ಲಿ ಕಲಸಿಕೊಂಡು ಬೆಳಗ್ಗೆ ಮತ್ತು ಸಂಜೆ ಮುಖಕ್ಕೆ ಹಚ್ಚಿಕೊಂಡು 5 ನಿಮಿಷದ ಬಳಿಕ ತೊಳೆದುಕೊಳ್ಳುವುದರಿಂದ ಸಹ ಮೊಡವೆಗಳು ಕಡಿಮೆಯಾಗುತ್ತವೆ.

4 ) ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ತೊಳೆದುಕೊಳ್ಳುವುದರಿಂದ ಸಹ ಮೊಡವೆಗಳು ಕಡಿಮೆಯಾಗುತ್ತದೆ.

5 ) ಜಾಯಿಕಾಯಿ

ಜಾಯಿಕಾಯಿಯ ಲೇಪವನ್ನು ಮೊಡವೆಗಳ ಮೇಲೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳುವುದರಿಂದ ಸಹ ಮೊಡವೆಗಳು ಕಡಿಮೆಯಾಗುತ್ತವೆ.

6 ) ಸೌತೆಕಾಯಿ

ಪ್ರತಿನಿತ್ಯ 20 ನಿಮಿಷ ಸೌತೆಕಾಯಿಯ ಪ್ಯಾಕನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಸಹ ಮೊಡವೆಗಳು ಕಡಿಮೆಯಾಗುವಲ್ಲಿ ಸಹಾಯ ಮಾಡುತ್ತದೆ.

7 ) ಲೋಳೆ ಸರ

ಲೋಳೆಸರದ ಜೆಲ್ ಅನ್ನು ಮುಖಕ್ಕೆ ಪ್ಯಾಕ್ ರೀತಿ ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಟ್ಟು ತೊಳೆದುಕೊಳ್ಳುವುದರಿಂದ ಸಹ ಮುಖದಲ್ಲಿ ಮೊಡವೆ ಕಡಿಮೆಯಾಗುತ್ತದೆ.

8 ) ಆಹಾರದ ಬದಲಾವಣೆ

ಮೆಂತ್ಯೆಯನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದ ನಂತರ ಒಂದು ಬಟ್ಟೆಯಲ್ಲಿ ಆ ಮೆಂತ್ಯೆಕಾಳುಗಳನ್ನು ಕಟ್ಟಿಟ್ಟರೆ ಮೊಳಕೆ ಬರುತ್ತದೆ.ಆ ಮೊಳಕೆ ಬಂದ ಮೆಂತ್ಯೆಕಾಳುಗಳನ್ನು ತಿನ್ನುವುದರಿಂದ ದೇಹ ಶುದ್ಧಿಯಾಗಿ ಮೊಡವೆಗಳು ಕಡಿಮೆಯಾಗುತ್ತದೆ.ಕನಿಷ್ಠ ಪಕ್ಷ ಅರ್ಧ ಹಿಡಿಯಷ್ಟು ಮೆಂತ್ಯೆಕಾಳುಗಳನ್ನು ಸೇವಿಸಿ.

9 ) ಹಾರ್ಮೋನ್ ಇಂಬ್ಯಾಲೆನ್ಸ್ , ಪಿಸಿಒಡಿ , ಮುಟ್ಟಿನ ಸಮಸ್ಯೆ ಇದ್ದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ.

10 ) ಜ್ಯೇಷ್ಠ ಮಧುವಿನ ಪುಡಿ , ಪಪಾಯಿ , ಕಡಲೆ ಹಿಟ್ಟು , ಹೆಸರು ಕಾಳಿನ ಹಿಟ್ಟು
ಇವೆಲ್ಲವನ್ನೂ ಮಿಕ್ಸ್ ಮಾಡಿ ಪ್ಯಾಕ್ ರೀತಿಯಾಗಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದುಕೊಂಡರೆ ಮುಖದಲ್ಲಿ ಮೊಡವೆ ಕಡಿಮೆಯಾಗುತ್ತದೆ.

ಈ ಮೇಲೆ ತಿಳಿಸಿರುವ ಯಾವುದಾದರೂ ಒಂದನ್ನು ಬಳಸಿ ಹಾಗೂ ನಿಮ್ಮ ಚರ್ಮಕ್ಕೆ ಹೊಂದುವ ಮನೆಮದ್ದನ್ನು 15 ದಿನಗಳವರೆಗೆ ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಧನ್ಯವಾದಗಳು.

Leave a Reply

Your email address will not be published.