ಮೂಲವ್ಯಾಧಿ ನೋವಿಗೆ ಏನು ಕಾರಣ!ಆಪರೇಷನ್ ಮಾಡಿಸದೆ ಶಾಶ್ವತ ಪರಿಹಾರ!

Health & Fitness

ಮೂಲವ್ಯಾಧಿ

ನಮ್ಮ ಗುದದ್ವಾರದಲ್ಲಿರುವ ರಕ್ತದ ನಾಳಗಳು ಊದಿಕೊಂಡು ಹೊರಗಡೆ ಜೋತು ಬಿದ್ದರೆ ಅದನ್ನು ಮೂಲವ್ಯಾಧಿ ಅಥವಾ ಪೈಲ್ಸ್ ಎನ್ನುತ್ತಾರೆ.ಮೂಲವ್ಯಾದಿಯಲ್ಲಿ ಎರಡು ವಿಧಗಳು ಇವೆ.ಇಂಟರ್ನಲ್ ಪೈಲ್ಸ್ ಮತ್ತು ಎಕ್ಸ್ಟರ್ನಲ್ ಪೈಲ್ಸ್ಇಂಟರ್ನಲ್ ಪೈಲ್ಸ್ ಎಂದರೆ ನಮ್ಮ ಗುದದ್ವಾರದ ಒಳಗಡೆ ಇರುವ ರಕ್ತ ನಾಳಗಳು ಊದಿಕೊಳ್ಳುವುದು.ಗುದದ್ವಾರದ ಹೊರಗಡೆ ಇರುವ ರಕ್ತನಾಳಗಳು ಊದಿಕೊಂಡರೆ ಅದನ್ನು ಎಕ್ಸ್ಟರ್ನಲ್ ಪೈಲ್ಸ್ ಎನ್ನುತ್ತಾರೆ.

ಇಂಟರ್ನಲ್ ಪೈಲ್ಸ್ ಗಳಲ್ಲಿ 4 ಗ್ರೇಡ್ ಗಳು ಇವೆ

1 ) ಇಂಟರ್ನಲ್ ಪೈಲ್ಸ್ ಫಸ್ಟ್ ಗ್ರೇಡ್

ರಕ್ತನಾಳವು ಸ್ವಲ್ಪ ಊದಿಕೊಂಡಿರುತ್ತದೆ ಹಾಗೂ ಇದು ಹೊರಗಡೆಯಿಂದ ಕಾಣಿಸುವುದಿಲ್ಲ.

2 ) ಇಂಟರ್ನಲ್ ಪೈಲ್ಸ್ ಸೆಕೆಂಡ್ ಗ್ರೇಡ್

ರಕ್ತ ನಾಳಗಳು ಸ್ವಲ್ಪ ಊದಿಕೊಂಡು ಮಲವಿಸರ್ಜನೆಯ ಸಮಯದಲ್ಲಿ ಆಚೆ ಬರುತ್ತದೆ ಮತ್ತು ಹೋಗುತ್ತದೆ

3 ) ಇಂಟರ್ನಲ್ ಪೈಲ್ಸ್ ತರ್ಡ್ ಗ್ರೇಡ್

ಊದಿಕೊಂಡಿರುವ ರಕ್ತನಾಳಗಳು ಮಲವಿಸರ್ಜನೆಯ ಜೊತೆ ಹೊರಗಡೆ ಬರುತ್ತದೆ ಹಾಗೂ ಇದನ್ನು ಕೈಯ ಸಹಾಯದಿಂದ ಒಳಗಡೆ ನೂಕಿಕೊಳ್ಳಬೇಕು.

4 ) ಇಂಟರ್ನಲ್ ಪೈಲ್ಸ್ ಪೋರ್ತ್ ಗ್ರೇಡ್

ಊದಿಕೊಂಡಿರುವ ರಕ್ತ ನಾಳಗಳು ಹೊರಗಡೆ ಬಂದು ಒಳಗಡೆ ಹೋಗದಿರುವುದು.

5)ಎಕ್ಸ್ಟರ್ನಲ್ ಪೈಲ್ಸ್

ರಕ್ತನಾಳಗಳು ಊದಿಕೊಂಡು ಹೊರಗಡೆ ಜೋತು ಬೀಳುತ್ತದೆ.ಒಂದು ರಕ್ತನಾಳ ಅಥವಾ ಮೂರ್ನಾಲ್ಕು ರಕ್ತನಾಳಗಳು ಊದಿಕೊಂಡು ಜೋತು ಬೀಳಬಹುದು

ಮೂಲವ್ಯಾಧಿಯ ಲಕ್ಷಣಗಳು

 • ಗುದದ್ವಾರದ ಒಳಗಡೆ ಅಥವಾ ಹೊರಗಡೆಯ ಜಾಗದಲ್ಲಿ ಅನುಕೂಲವಾಗುವುದು.
 • ಮಲವಿಸರ್ಜನೆಯ ಸಮಯದಲ್ಲಿ ಉರಿಯುವುದು , ರಕ್ತ ಬೀಳುವುದು.
 • ಗುದದ್ವಾರದಲ್ಲಿ ನೋವಾಗುವುದು.
 • ರಕ್ತ ನಾಳಗಳಲ್ಲಿ ಇನ್ಫೆಕ್ಷನ್ ಆದರೆ ಜ್ವರ ಬರುವುದು , ಚಳಿ ಯಾಗುವುದು ,ಬೆವರುವುದು, ಸುಸ್ತಾಗುವುದು ಇತ್ಯಾದಿ.
 • ಮಲವಿಸರ್ಜನೆ ಮಾಡಿದ ನಂತರವೂ ತೃಪ್ತಿ ಆಗದಿರುವುದು ಅಂದರೆ ಪೂರ್ತಿಯಾಗಿ ಆಗದಿರುವುದು.
 • ಮಲ ವಿಸರ್ಜನೆ ಸಮಯದಲ್ಲಿ ಅತಿಯಾಗಿ ಒತ್ತಡ ಹಾಕುವುದು.

ಮೂಲವ್ಯಾಧಿಯ ಕಾರಣಗಳು

 • ಮೂಲವ್ಯಾಧಿ ಬರಲು ಮುಖ್ಯವಾದ ಕಾರಣ ಎಂದರೆ ಮಲವಿಸರ್ಜನೆ ಗಟ್ಟಿಯಾಗುವುದು.
 • ಅತಿಯಾಗಿ ಭೇದಿ ಹೋಗುವುದು.
 • ಹೆಚ್ಚಾಗಿ ಒಂದೇ ಕಡೆ ಕುಳಿತು ಕೆಲಸ ಮಾಡುವುದು.
 • ಗರ್ಭಿಣಿ ಮಹಿಳೆಯರು
 • ತುಂಬಾ ದಪ್ಪ ಇರುವುದು.
 • ಮದ್ಯಪಾನ ಮಾಡುವುದು.
 • ಲಿವರ್ ಗೆ ಸಂಬಂಧ ಪಟ್ಟ ಕಾಯಿಲೆ ಇರುವುದು.
 • ತುಂಬಾ ಸಮಯ ಬಾತ್ ರೂಂನಲ್ಲಿ ಕಳೆಯುವುದು.

ಪರಿಹಾರಗಳು :ಮಲವಿಸರ್ಜನೆ ಗಟ್ಟಿಯಾಗದಂತೆ ನೋಡಿಕೊಳ್ಳಬೇಕು ,ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.ಚಿಕನ್ ಮಟನ್ ಅನ್ನು ಸೇವಿಸಬಾರದು ಅದರಲ್ಲೂ ರಾತ್ರಿ ಊಟದ ಸಮಯದಲ್ಲಿ ಸೇವಿಸಲೇಬಾರದು.ನೀರು ಜಾಸ್ತಿ ಕುಡಿಯುವುದು .ಮೂಲಂಗಿ ಮತ್ತು ಮೊಸರು ಒಂದು ಚಿಕ್ಕ ಮೂಲಂಗಿ ಮತ್ತು ಅರ್ಧ ಕಪ್ ಮೊಸರನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ವಾರಕ್ಕೆ 3 ಬಾರಿ ಸೇವಿಸುತ್ತಾ ಬಂದರೆ ಕ್ರಮೇಣ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

2 ಚಮಚ ಕೊತ್ತಂಬರಿ ಬೀಜಕ್ಕೆ 3 ರಿಂದ 4 ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ 2 ಚಮಚದಷ್ಟು ಕುಡಿಯುತ್ತಾ ಬಂದರೆ ಕ್ರಮೇಣ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಪ್ರತಿ ದಿನ ಒಂದು ಚಿಕ್ಕ ಬಾಳೆಹಣ್ಣು ಮತ್ತು ಅದರ ಜೊತೆಗೆ ಏಲಕ್ಕಿಯನ್ನು ಜೊತೆಗೆ ಬೆರೆಸಿಕೊಂಡು ತಿನ್ನುವುದರಿಂದ ಕೂಡ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಒಂದು ಲೋಟ ಹಾಲಿಗೆ 3 ರಿಂದ 4 ಹನಿ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಕೂಡ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಮಾವಿನ ಗೊರಟಿಗೆ (ವಾಟೆ) ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಒಂದು ಹಿಡಿಯಷ್ಟು ಬಿಲ್ವದ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರ 2 ಹನಿ ಎಷ್ಟು ರಸವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಒಂದು ಚಿಕ್ಕ ಸ್ಪೂನ್ ತುಳಸಿ ಎಲೆಯ ಪುಡಿಗೆ ಒಂದು ಸ್ಪೂನ್ ಬೆಣ್ಣೆ ಮತ್ತು ರುಚಿಗೆ ತಕ್ಕಷ್ಟು ಜೋನಿ ಬೆಲ್ಲವನ್ನು ಹಾಕಿಕೊಂಡು ದಿನಕ್ಕೆ 2 ಬಾರಿಯಂತೆ ಸೇವಿಸುತ್ತಾ ಬಂದರೆ ಕ್ರಮೇಣ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಪ್ರತಿ ರಾತ್ರಿ ಮಲಗುವ ಮುನ್ನ 2 ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ.

ಲೋಳೆಸರ ಅಥವಾ ಅಲೋವೆರಾದ ರಸವನ್ನು 2 ಚಮಚ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.

ಮುಟ್ಟಿದರೆ ಮುನಿ ಗಿಡವನ್ನು ಚೆನ್ನಾಗಿ ಒಣಗಿಸಿ ಅದರ ಅರ್ಧ ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಅದನ್ನು ದಿನಕ್ಕೆ 2 ಬಾರಿ ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
ಮುಟ್ಟಿದರೆ ಮುನಿ ಗಿಡದ ಪುಡಿ ಎಲ್ಲಾ ಆಯುರ್ವೇದ ಮತ್ತು ಗ್ರಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ.

ಯಾರಿಗೆ ಪೈಲ್ಸ್ ತುಂಬಾ ನೋವು ಆಗಿರುತ್ತದೆಯೋ ಅಂಥವರು ಒಂದು ಪ್ಲಾಸ್ಟಿಕ್ ಟಬ್ನಲ್ಲಿ ಬೆಚ್ಚಗಿನ ನೀರು ಮತ್ತು ಉಪ್ಪನ್ನು ಹಾಕಿಕೊಂಡು ಅದರೊಳಗೆ 10ರಿಂದ 15 ನಿಮಿಷ ಕುಳಿತುಕೊಳ್ಳುವುದು ಇದರಿಂದ ರಕ್ತ ನಾಳಗಳಲ್ಲಿನ ರಕ್ತ ಸಂಚಾರ ಹೆಚ್ಚಾಗಿ ಮಸಲ್ಸ್ ರಿಲ್ಯಾಕ್ಸ್ ಆಗುತ್ತದೆ.

ಒಂದು ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿಕೊಂಡು ಗುದದ್ವಾರದ ಬಳಿ ಮೆಲ್ಲಗೆ ಒತ್ತಿಕೊಂಡರೆ ನೋವು ಕಮ್ಮಿಯಾಗುತ್ತದೆ.ಇಷ್ಟೆಲ್ಲ ಮನೆಮದ್ದುಗಳನ್ನು ಮಾಡಿಯು ನಿಮಗೆ ವಾಸಿ ಆಗದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

ಇನ್ನು ಮೂಲವ್ಯಾಧಿ ಮಿತಿಮೀರಿದಾಗ ವೈದ್ಯರನ್ನು ಕಾಣಲೇಬೇಕು ಯಾಕೆಂದರೆ ಹೆಚ್ಚಾಗಿ ರಕ್ತವು ಬಿದ್ದು , ಹಿಮೋಗ್ಲೊಬಿನ್ ಮಟ್ಟ ಕಡಿಮೆಯಾಗುತ್ತದೆ.ಕ್ಯಾನ್ಸರ್ ಬರುವ ಸಂಭವವಿರುತ್ತದೆ.ಪಿಸ್ತೂಲ ಆಗುವ ಚಾನ್ಸಸ್ ಕೂಡ ಹೆಚ್ಚಾಗಿ ಇರುತ್ತದೆ.

ಧನ್ಯವಾದಗಳು.

Leave a Reply

Your email address will not be published.