ಮೂಳೆಗಳಿಂದ ಕ್ಯಾಲ್ಷಿಯಂ ಲೂಟಿ ಮಾಡುವ ಈ ಪದಾರ್ಥಗಳಿಂದ ದೂರವಿರಿ!

Health & Fitness

ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಕಷ್ಟಪಡಬೇಕು,ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಆಹಾರದ ಬದಲಾವಣೆಯನ್ನು ಮಾಡಿಕೊಳ್ಳಬೇಕು.ನಮ್ಮ ನಾಲಿಗೆ ಮತ್ತು ಕಣ್ಣಿನ ಮೇಲೆ ಹತೋಟಿಯನ್ನು ಸಾಧಿಸಬೇಕು.ಹೀಗೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಇನ್ನು ನಾವು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾ ಹೋದರೆ ನಮ್ಮ ದೇಹಕ್ಕೆ ಮತ್ತುಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ.ಇನ್ನು ನಾವು ಅನಾರೋಗ್ಯಕ್ಕೆ ಈಡಾಗಲು ಮುಖ್ಯವಾದ ಕಾರಣವೆಂದರೆ ನಾವು ರುಚಿಗೆ ಅನುಸಾರವಾಗಿ ಸಿಕ್ಕಿದ್ದನೆಲ್ಲ ಬಾಯಿಗೆ ಹಾಕಿಕೊಳ್ಳುವುದರಿಂದ.ಇನ್ನು ಈಗಿನ ಕಾಲದಲ್ಲಿ ಅನೇಕರಿಗೆ ಕ್ಯಾಲ್ಷಿಯಂನ ಕೊರತೆ ಎದ್ದು ಕಾಣುತ್ತಿದೆ.

ಈ ಕ್ಯಾಲ್ಷಿಯಂ ಕೊರತೆಯಿಂದ ನಮ್ಮ ಮೂಳೆ ಗಟ್ಟಿಯಾಗಿರುವುದಿಲ್ಲ .ಇನ್ನೂ ಈ ರೀತಿ ಮೂಳೆಯಲ್ಲಿರುವ ಕ್ಯಾಲ್ಷಿಯಂ ಅಂಶವನ್ನು ಕದಿಯುತ್ತಿರುವುದು ಯಾವ ಆಹಾರಗಳು ಯಾವುವು ಎಂದು ತಿಳಿಯೋಣ ಬನ್ನಿ.

ನಮ್ಮ ಮೂಳೆಯಲ್ಲಿರುವ ಕ್ಯಾಲ್ಷಿಯಂ ಅನ್ನು ಕೆಲವು ಆಹಾರ ಪದಾರ್ಥಗಳು ಹೀರಿಕೊಂಡು ಮೂಳೆಯನ್ನು ಮುರಿಯುವಂತೆ ಮಾಡುತ್ತಿದೆ.ಮೂಳೆಗಳನ್ನು ಫ್ರಾಜೈಲ್ ಬೋನ್ ಆಗಿಸುತ್ತಿದೆ.ಇನ್ನು ಈಗಿನ ಕಾಲದಲ್ಲಿ ಚಿಕ್ಕ ಪುಟ್ಟ ಏಟು ಬಿದ್ದರು ಮೂಳೆಗಳು ಮುರಿದು ಹೋಗುತ್ತಿದೆ ಇದಕ್ಕೆ ಕಾರಣ ಪ್ರಾಜೈಲ್ ಬೋನ್ ಆಗಿದೆ.

ಈ ಮೂಳೆಗಳು ಇಷ್ಟು ಬೇಗ ಮುರಿದು ಹೋಗಲು ಮುಖ್ಯ ಕಾರಣವೆಂದರೆ ಮತ್ತು ನಮ್ಮ ಮೂಳೆಯಲ್ಲಿರುವ ಕ್ಯಾಲ್ಷಿಯಂನ್ನು ಹೀರಿಕೊಳ್ಳುತ್ತಿರುವುದು ಯಾವ ಆಹಾರ ಎಂದು ತಿಳಿಯೋಣ ಬನ್ನಿ.

  • ಫ್ಲೋರೈಡ್

ನೀರಿನಲ್ಲಿ ಫ್ಲೋರೈಡ್ ಅಂಶ ಇರುತ್ತದೆ.ನಲ್ಲಿ ಯಲ್ಲಿ ಬರುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುತ್ತದೆ.
ಜಾಸ್ತಿ ಆಳವಾಗಿ ಬೋರ್ ಕೊರೆಸಿ ಅದರಲ್ಲಿ ಬರುತ್ತಿರುವ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತದೆ ಹಾಗೂ ಇದರಿಂದ ಮೂಳೆಯಲ್ಲಿರುವ ಕ್ಯಾಲ್ಷಿಯಂ ಕಡಿಮೆಯಾಗುತ್ತದೆ.

ಸೇವ್ ಅವರ್ ಬೂನ್ಎನ್ನುವ ಮ್ಯಾಗ್ ಜಿನ್ ನಲ್ಲಿ ಫ್ಲೋರೈಡ್ ಎನ್ನುವುದು ಮೂಳೆ ಟೊಳ್ಳಾಗಲು ಮುಖ್ಯ ಕಾರಣ ಎಂದು ವರದಿಯಾಗಿದೆ.ಫ್ಲೋರೈಡ್ ನಿಂದ ಮೂಳೆಗಳು ಹಾಳಾಗುತ್ತಿದೆ.ನಮ್ಮ ಮೂಳೆಯಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಫ್ಲೋರೈಡ್ ಅಂಶ ಹೀರಿಕೊಂಡು ಮೂಳೆಯನ್ನು ಬಹುಬೇಗ ಮುರಿಯುವಂತೆ ಮಾಡುತ್ತಿದೆ.

ನಮ್ಮ ಮೂಳೆಗಳು ಮುರಿಯಲು ಮುಖ್ಯ ಕಾರಣವೆಂದರೆ ನಮ್ಮಲ್ಲಿ ಕ್ಯಾಲ್ಷಿಯಂ ಕೊರತೆ ಇರುವುದು.ನಮ್ಮ ಮೂಳೆಯಲ್ಲಿ ಕ್ಯಾಲ್ಷಿಯಂ ಉಳಿಯಲು ಮುಖ್ಯವಾಗಿ ಈ ಕ್ಯಾಲ್ಷಿಯಂ ಹೀರಿಕೊಳ್ಳುವ ಆಹಾರ ಪದಾರ್ಥಗಳನ್ನು ನಾವು ಆದಷ್ಟು ಸೇವನೆ ಪ್ರಮಾಣವನ್ನು ಕಡಿಮೆ ಮಾಡಬೇಕು.

  • ಉಪ್ಪು

ವಿಶ್ವ ಆರೋಗ್ಯ ಸಂಸ್ಥೆಯು ಹೇಳಿರುವ ಪ್ರಕಾರ ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ
2 ರಿಂದ 3 ಗ್ರಾಂನಷ್ಟು ಉಪ್ಪನ್ನು ಸೇವಿಸಬೇಕು ಆದರೆ ಭಾರತೀಯ ಆಹಾರ ಪದ್ಧತಿಯಲ್ಲಿ 10 ರಿಂದ 15 ಗ್ರಾಂನಷ್ಟು ಉಪ್ಪನ್ನು ನಾವು ಸೇವಿಸುತ್ತಿದ್ದೇವೆ.ಈ ಹೆಚ್ಚಾದಂತ ಉಪ್ಪು ಬಹಳ ಸಮಸ್ಯೆಯನ್ನುಂಟು ಮಾಡುತ್ತವೆ.

ಈ ಹೆಚ್ಚಾದಂತ ಉಪ್ಪು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.ನಮ್ಮ ಹೊಟ್ಟೆಯಲ್ಲಿ ಆಸಿಡಿಟಿ ಜಾಸ್ತಿಯಾದಾಗ ನಾವು ತೆಗೆದುಕೊಳ್ಳುತ್ತಿರುವ ಜಾಸ್ತಿ ಉಪ್ಪು ಅಸಿಡಿಟಿಯನ್ನು ಉಂಟುಮಾಡುತ್ತದೆ.ಈ ಅಸಿಡಿಟಿಯನ್ನು ಸರಿ ಮಾಡುವುದಕ್ಕೆ ಮೂಳೆಯಲ್ಲಿರುವ ಕ್ಯಾಲ್ಷಿಯಂ ಅಂಶವು ಆ ಅಸಿಡಿಟಿಯನ್ನು ಬ್ಯಾಲೆನ್ಸ್ ಮಾಡಲು ಹೋಗುತ್ತದೆ.

ಉಪ್ಪು ಮತ್ತು ಹೈಪರ್ ಅಸಿಡಿಟಿ ಉಪ್ಪು ಮತ್ತು ಉಪ್ಪಿನಕಾಯಿ ನಮ್ಮ ಕ್ಯಾಲ್ಸಿಯಂನ್ನು ಕದಿಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

  • ಸನ್ ಸ್ಕ್ರೀನ್ ಲೋಷನ್

ನಮ್ಮ ದೇಹಕ್ಕೆ ಮತ್ತು ಮೂಳೆ ಆರೋಗ್ಯವಾಗಿರಲು ಅಗತ್ಯ ಪ್ರಮಾಣದ ವಿಟಮಿನ್ ಡಿ ಅಗತ್ಯವಾಗಿರುತ್ತದೆ.ಹೀಗಿರುವಾಗ ನಮ್ಮ ಚರ್ಮವನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಾವು ಸನ್ ಸ್ಕ್ರೀನ್ ಲೋಷನ್ ಬಳಸುತ್ತೇವೆ ಆದರೆ ಹೀಗೆ ಬಳಸುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ ಸಿಗದೆ ಮೂಳೆಗಳು ದುರ್ಬಲಗೊಳ್ಳುತ್ತದೆ.ಆದ್ದರಿಂದ ಆದಷ್ಟು ಬಿಸಿಲಿಗೆ ಮೈಯೊಡ್ಡಿ.ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

Leave a Reply

Your email address will not be published.