Mrunal Thakur: ಹುಡುಗರ ಕ್ರಶ್ ಮೃಣಾಲ್ ಠಾಕೂರ್ ಗೆ ಕೂಡಿಬಂತ ಕಂಕಣ ಭಾಗ್ಯ? ಹುಡುಗರ ಹಾರ್ಟ್ ಫೇಲ್!

Written by Pooja Siddaraj

Published on:

Mrunal Thakur: ಬಾಲಿವುಡ್ ನಲ್ಲಿ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದರು ಸಹ ನಟಿ ಮೃಣಾಲ್ ಠಾಕೂರ್ ಅವರಿಗೆ ಹೆಚ್ಚಿನ ಬೇಡಿಕೆ ಶುರುವಾಗಿದ್ದು, ತೆಲುಗಿನ ಸೀತಾರಾಮಮ್ ಸಿನಿಮಾ ಮೂಲಕ ಎಂದರೆ ತಪ್ಪಲ್ಲ. ಮೃಣಾಲ್ ಠಾಕೂರ್ ಅವರು ಈ ಸಿನಿಮಾದಲ್ಲಿ ಸೀತಾಮಹಾಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕ್ಲಾಸಿಕ್ ಲವ್ ಸ್ಟೋರಿ ಜನರ ಮನಸ್ಸಿನಲ್ಲಿ ಉಳಿದಿದೆ..

ನಟಿ ಮೃಣಾಲ್ ಠಾಕೂರ್ ಅವರು ಸೀತಾರಾಮಮ್ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದು ಇಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಸೀತಾರಾಮಮ್ ಸಿನಿಮಾದ ಸೀತಾಮಹಾಲಕ್ಷ್ಮೀ ಪಾತ್ರ ಎಲ್ಲಾ ಹುಡುಗರ ಕ್ರಶ್ ಎಂದರೆ ತಪ್ಪಲ್ಲ. ಮೃಣಾಲ್ ಠಾಕೂರ್ ಅವರು ಇದಾದ ಬಳಿಕ ತೆಲುಗಿನಲ್ಲಿ ನಟ ನಾನಿ ಅವರೊಡನೆ ಹಾಯ್ ನಾನ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

ನಾನಿ ಅವರೊಡನೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು ನಟಿ ಮೃಣಾಲ್ ಠಾಕೂರ್. ಆಗಾಗ ಕೆರಿಯರ್ ವಿಚಾರಕ್ಕೆ ಸುದ್ದಿಯಾಗುವ ಮೃಣಾಲ್ ಅವರು ಇದೀಗ ಮದುವೆ ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ, ಸೀತಾರಾಮಮ್ ಸಿನಿಮಾಗೆ ಮೃಣಾಲ್ ಠಾಕೂರ್ ಅವರಿಗೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಬಂದಿದೆ. ಇವರಿಗೆ ಅವಾರ್ಡ್ ಕೊಟ್ಟಿದ್ದು ನಟ ಅಲ್ಲೂ ಅರ್ಜುನ್ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲೂ ಅರವಿಂದ್ ಅವರು.

ವೇದಿಕೆ ಮೇಲೆ ಮೃಣಾಲ್ ಅವರ ಬಗ್ಗೆ ಮಾತನಾಡಿದ ಅಲ್ಲೂ ಅರವಿಂದ್ ಅವರು, ಆದಷ್ಟು ಬೇಗ ಮೃಣಾಲ್ ಅವರಿಗೆ ಹೈದರಾಬಾದ್ ಹುಡುಗನ ಜೊತೆಗೆ ಮದುವೆಯಾಗಲಿ ಎಂದು ವಿಶ್ ಮಾಡಿದ್ದಾರೆ. ಆದರೆ ಈ ಮಾತಿನಿಂದ ಮೃಣಾಲ್ ಅವರ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗಿದೆ ಎಂದರೆ ತಪ್ಪಲ್ಲ, ಅದಕ್ಕೆ ಕಾರಣ ಈ ಹಿಂದೆ ಅಲ್ಲೂ ಅರವಿಂದ್ ಅವರು ಇದೇ ಮಾತನ್ನು ನಟಿ ಲಾವಣ್ಯ ತ್ರಿಪಾಠಿ ಅವರಿಗು ಹೇಳಿದ್ದರು. ಈಗ ವರುಣ್ ತೇಜ್ ಅವರೊಡನೆ ಲಾವಣ್ಯ ತ್ರಿಪಾಠಿ ಅವರ ಮದುವೆ ನಡೆಯಲಿದೆ.

ಹಾಗಾಗಿ ಅಲ್ಲೂ ಅರವಿಂದ್ ಅವರು ಹೇಳುವ ಮಾತುಗಳು ನಿಜವಾಗಬಹುದು ಎಂದು ಅಭಿಮಾನಿಗಳು ಆತಂಕ ಪಟ್ಟುಕೊಂಡಿದ್ದಾರೆ. ಬೇಗ ಮೃಣಾಲ್ ಠಾಕೂರ್ ಅವರ ಮದುವೆ ನಡೆದು ಹೋಗುತ್ತಾ ಎಂದು ಬೇಸರ ಪಡುತ್ತಿದ್ದಾರೆ. ಇನ್ನು ಮೃಣಾಲ್ ಅವರು ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿ ಇದ್ದು, ಸಿನಿಮಾ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇರುವಾಗ ಮದುವೆ ಆಗುತ್ತಾರಾ ಎಂದು ಕಾದು ನೋಡಬೇಕಿದೆ

Leave a Comment