Naga Chaitanya: ಎರಡನೇ ಮದುವೆಗೆ ನಟ ನಾಗಚೈತನ್ಯ ರೆಡಿ! ಹುಡುಗಿ ಯಾರು ಗೊತ್ತಾ?

0 1

Naga Chaitanya: ಟಾಲಿವುಡ್ ನ ಸ್ಟಾರ್ ನಟ ನಾಗಾರ್ಜುನ ಅವರ ಮಗ ನಾಗಾಚೈತನ್ಯ ಅವರು ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾದರು ಎನ್ನುವ ವಿಚಾರ ಗೊತ್ತೇ ಇದೆ. ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸುವಾಗ ಈ ಜೋಡಿಯ ನಡುವೆ ಪ್ರೀತಿ ಶುರುವಾಗಿತ್ತು. ಐದಾರು ವರ್ಷಗಳ ಕಾಲ ಪ್ರೀತಿಸಿ, ಇವರಿಬ್ಬರು ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾದರು. ಆದರೆ ಈ ಬಾಂಧವ್ಯ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.

ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಈ ಜೋಡಿ ವಿಚ್ಛೇದನ ಪಡೆದರು. ಬೇರೆಯಾಗಲು ನಿಜವಾದ ಕಾರಣ ಏನು ಎಂದು ಇಬ್ಬರು ಕೂಡ ಬಹಿರಂಗಪಡಿಸಿಲ್ಲ. ಆದರೆ ಊಹಾಪೋಹಗಳು ಹೆಚ್ಚಾಗಿಯೇ ಕೇಳಿಬಂದವು. ಆದರೆ ಇವರಿಬ್ಬರು ಯಾವುದೇ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೇ, ತಮ್ಮ ತಮ್ಮ ಕೆರಿಯರ್ ಗಳಲ್ಲಿ ಬ್ಯುಸಿ ಆಗಿದ್ದಾರೆ..

ಇಬ್ಬರು ಕೂಡ ಸಿನಿಮಾ, ವೆಬ್ ಸೀರೀಸ್ ಎಂದು ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಸುದ್ದಿಗಳು ಬರುವುದಂತೂ ಕಡಿಮೆ ಆಗಿಲ್ಲ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ನಟ ನಾಗಚೈತನ್ಯ ಅವರು ಶೀಘ್ರದಲ್ಲೇ ಎರಡನೇ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಧ್ಯಕ್ಕೆ ಮಾಹಿತಿ ಸಿಕ್ಕಿದೆ..

ನಾಗಚೈತನ್ಯ ಅವರ ತಂದೆ ತಾಯಿಗೆ ಮಗ ಒಂಟಿಯಾಗಿ ಇರುವುದು ಇಷ್ಟವಿಲ್ಲ. ಹಾಗಾಗಿ ಎರಡನೇ ಮದುವೆ ಮಾಡುವುದಕ್ಕೆ ಮುಂದಾಗಿದ್ದು, ನಾಗಾರ್ಜುನ ಅವರ ಸೋದರ ಸಂಬಂಧಿಯ ಜೊತೆಗೆ ಮದುವೆ ನಿಶ್ಚಯ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವ ಬಗ್ಗೆ ಇನ್ನೂ ಕೂಡ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಧ್ಯಕ್ಕೆ ನಾಗಚೈತನ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

Leave A Reply

Your email address will not be published.