ಚಂದನವನದ ಖ್ಯಾತ ನಟ ನಾಗಭೂಷಣ್ ಅವರು ಸೆಪ್ಟೆಂಬದ್ 30ರಂದು ಶೂಟಿಂಗ್ ಮುಗಿಸಿ ಬರುವಾಗ ಕೋಣನಕುಂಟೆ ಬಳಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗಳ ಮೇಲೆ ಕಾರ್ ಹರಿಸಿದ ಘಟನೆ ಇಂದು ಎಲ್ಲೆಡೆ ಭಾರಿ ಸುದ್ದಿಯಾಗುತ್ತಿದೆ. ಕೃಷ್ಣ ಮತ್ತು ಪ್ರೇಮಾ ದಂಪತಿಗಳ ಮೇಲೆ ಕಾರ್ ಹರಿಯಿತು. ಈ ಆಕ್ಸಿಡೆಂಟ್ ನಲ್ಲಿ ಪ್ರೇಮಾ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ. ಇನ್ನು ಕೃಷ್ಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಾಗಿರುವ ಪ್ರೇಮಾ ಅವರ ಮಗಳ ಮದುವೆ ಇನ್ನೇನು 15 ದಿನಗಳಲ್ಲಿ ನಡೆಯಬೇಕಿತ್ತು, ಅಷ್ಟರಲ್ಲೇ ಈ ರೀತಿಯ ಘಟನೆ ನಡೆದು ಪ್ರೇಮಾ ಅವರು ನಿಧನರಾಗಿದ್ದಾರೆ. ಆ ದಂಪತಿಯ ಇಬ್ಬರು ಮಕ್ಕಳ ನೋವು ಆಕ್ರಂದನ ಮುಗಿಲು ಮುಟ್ಟಿದ್ದು, ತಮಗೆ ನ್ಯಾಯ ಬೇಕು ಎಂದು ನಾಗಭೂಷಣ್ ಅವರ ವಿರುದ್ಧ ಪೊಲೀಸರ ಬಳಿ ದೂರು ನೀಡಿದ್ದಾರೆ. ನಾಗಭೂಷಣ್ ಅವರು ಅರೆಸ್ಟ್ ಸಹ ಆಗಿದ್ದರು, ಆದರೆ ಸ್ಟೇಶನ್ ಬೇಲ್ ಮೇಲೆ ಹೊರಬಂದಿದ್ದರು. ಆದರೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ನೋವು ಮಾತ್ರ ಕಡಿಮೆ ಆಗಿಲ್ಲ..
ಇನ್ನು ನಾಗಭೂಷಣ್ ಅವರು ಬೇಲ್ ಇಂದ ಹೊರಬಂದಿರುವುದಕ್ಕೆ ಸಾಮಾನ್ಯ ಜನರು ಅಸಮಾಧಾನ ಹೊರಹಾಕಿದ್ದಾರೆ, ಸಾಮಾನ್ಯ ಜನರು ಈ ಥರ ಆಕ್ಸಿಡೆಂಟ್ ಮಾಡಿಬಿಟ್ಟರೆ ಅವರನ್ನು ಬಿಡದೇ ಅರೆಸ್ಟ್ ಮಾಡುತ್ತಾರೆ, ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತಾರೆ. ಆದರೆ ಒಬ್ಬ ಸೆಲೆಬ್ರಿಟಿ ಮಾಡಿದರೆ ಆ ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ, ಅವರಿಗೆ ಜಾಸ್ತಿ ಶಿಕ್ಷೆ ಕೊಡೋದಿಲ್ಲ ಎಂದು ಜನರು ಪೊಲೀಸರ ವಿರುದ್ಧ, ಕಾನೂನಿನ ವಿರುದ್ಧ ಕಿಡಿಕಾರಿದ್ದಾರೆ.
ಈ ಒಂದು ಕೇಸ್ ಇಂದ ನಾಗಭೂಷಣ್ ಅವರು ಸಂಕಷ್ಟಕ್ಕೆ ಸಿಲುಕಿಕೊಂಡ ಹಾಗೆ ಆಗಿದೆ, ಅದರ ಬೆನ್ನಲ್ಲೇ ಈಗ ಅವರ ಮೇಲೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಮಾಹಿತಿ ಸಿಕ್ಕಿದೆ. ಅಂದು ಆಕ್ಸಿಡೆಂಟ್ ನಡೆದ ದಿನ ನಾಗಭೂಷಣ್ ಅವರಿಂದ ಒಬ್ಬ ಮಹಿಳೆಯ ಪ್ರಾಣ ಹಾನಿ ಆಯಿತು, ಕೃಷ್ಣ ಅವರು ಆಸ್ಪತ್ರೆ ಸೇರಿದ್ದಾರೆ, ಆದರೆ ಅದಷ್ಟೇ ಅಲ್ಲ ಸರ್ಕಾರಿ ಆಸ್ತಿ ಅಂದರೆ ವಿದ್ಯುತ್ ಕಂಬಕ್ಕೆ ಕೂಡ ಹಾನಿಯಾಗಿದೆ.
ನಾಗಭೂಷಣ್ ಅವರರು ಓವರ್ ಸ್ಪೀಡ್ ಆಗಿ ಕಾರ್ ಡ್ರೈವ್ ಮಾಡುತ್ತಾ ಬಂದು ಆಕ್ಸಿಡೆಂಟ್ ಮಾಡಿದಾಗ, ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದ್ದು, ಹಾಗಾಗಿ ಬೆಸ್ಕಾಂ ಅಧಿಕಾರಿಗಳು ಕೂಡ ನಾಗಭೂಷಣ್ ಅವರ ವಿರುದ್ಧ ದೂರು ನೀಡುವುದಕ್ಕೆ ಮುಂದಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.. ವಿದ್ಯುತ್ ಕಂಬಕ್ಕೆ ಹಾನಿ ಆಗಿರುವುದನ್ನು ಟ್ರಾಫಿಕ್ ಪೊಲೀಸರು ಬೆಸ್ಕಾಂ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಪೊಲೀಸರು ಈಗ ನಾಗಭೂಷಣ್ ಅವರ. ವಿರುದ್ಧ ದೂರು ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಶನ್ ನಲ್ಲಿ ನಾಗಭೂಷಣ್ ಅವರ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಮತ್ತೊಂದು ದೂರು ದಾಖಲು ಮಾಡಲಿದ್ದಾರೆ. ಪೊಲೀಸರು ನಾಗಭೂಷಣ್ ಅವರ ವಿರುದ್ಧ ಮತ್ತೊಂದು ಎಫ್.ಐ.ಆರ್ ಹಾಕಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದು ಕೇಸ್ ವಿಚಾರವಾಗಿ ನಾಗಭೂಷಣ್ ಅವರು ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಿದೆ.