Nagabhushan: ನಟ ನಾಗಭೂಷಣ್ ಮೇಲೆ ಹಿಟ್ ಅಂಡ್ ರನ್ ಕೇಸ್! ದಂಪತಿಗಳಿಗೆ ಡಿಕ್ಕಿ ಹೊಡೆದಿದೆ ನಟನ ಕಾರ್!

Written by Pooja Siddaraj

Published on:

ನಟ ನಾಗಭೂಷಣ್ ಈಗ ಚಂದನವನದಲ್ಲಿ ಹೊಸದಾಗಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿರುವ ನಟ. ಉತ್ತಮವಾದ ಅಭಿನಯ ಚಾತುರ್ಯತೆಯಿಂದ ನಟ ನಾಗಭೂಷಣ್ ಅವರು ಚಂದನವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟ ಧನಂಜಯ್ ಅವರ ಹೊಯ್ಸಳ, ನಟ ಡಾರ್ಲಿಂಗ್ ಕೃಷ್ಣ ಅವರ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಕೂಡ ನಟಿಸಿದ್ದರು.

ಧನಂಜಯ್ ಅವರು ನಿರ್ಮಾಣ ಮಾಡುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ಇವರಿಗೆ ನಟ ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಈ ವೇಳೆ ನಟ ನಾಗಭೂಷಣ್ ಅವರ ಕಾರ್ ಅಪಘಾತಜೆಕೆ ಒಳಗಾಗಿದ್ದು, ನಟನ ಮೇಲೆ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ.

ಈ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ ಎಂದು ಮಾಹಿತಿ ಸಿಕ್ಕಿದೆ. ಸೆಪ್ಟೆಂಬರ್ 30ರಂದು ಮಧ್ಯರಾತ್ರಿ ಚಿತ್ರೀಕರಣ ಮುಗಿಸಿಕೊಂಡು ಬರುತ್ತಿದ್ದ ವೇಳೆ, ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗಳಿಗೆ ನಾಗಭೂಷಣ್ ಅವರ ಕಾರ್ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಸಿಕ್ಕಿದೆ..

ಈ ಅಪಘಾತದಲ್ಲಿ 48 ವರ್ಷದ ಪ್ರೇಮ ಎನ್ನುವವರ ಸ್ಥಳದಲ್ಲೇ ವಿಧಿವಶರಾಗಿದ್ದಾರೆ ಎನ್ನಲಾಗಿದೆ. ಅವರ ಪತಿ ಕೃಷ್ಣ ಬಿ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಕಾರ್ ಗೆ ಈ ದಂಪತಿಗಳು ಅಡ್ಡ ಬಂದಿದ್ದು, ಆ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಜೊತೆಗೆ ನಟ ನಾಗಭೂಷಣ್ ಅವರ ಮೇಲೆ ಹಿಟ್ ಅಂಡ್ ರನ್ ಕೇಸ್ ಕೂಡ ದಾಖಲಾಗಿದೆ ಎಂದು ಸಹ ಮಾಹಿತಿ ಸಿಕ್ಕಿದೆ. ಈ ಘಟನೆಯಲ್ಲಿ ನಿಜಕ್ಕೂ ನಡೆದಿದ್ದು ಏನು ಎನ್ನುವ ಬಗ್ಗೆ ಇನ್ನೂ ನಾಗಭೂಷಣ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಟ ನಾಗಭೂಷಣ್ ಅವರು ಮಾಧ್ಯಮದ ಎದುರು ಈ ಘಟನೆಯ ಬಗ್ಗೆ ಕ್ಲಾರಿಟಿ ಕೊಡುತ್ತಾರ ಎಂದು ಕಾದು ನೋಡಬೇಕಿದೆ.

Leave a Comment