ನಟ ನಾಗಭೂಷಣ್ ಅವರು ನಿನ್ನೆ ರಾತ್ರಿ ಕೋಣನಕುಂಟೆ ಬಳಿ ಕಾರ್ ಡ್ರೈವ್ ಮಾಡಿಕೊಂಡು ಹೋಗುವಾಗ, ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಅಂದು ರಾತ್ರಿ ನಾಗಭೂಷಣ್ ಅವರು ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದರು ಎನ್ನಲಾಗಿದ್ದು, ಈ ದಂಪತಿ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಊಟ ಮಾಡಿಕೊಂಡು, ವಾಕಿಂಗ್ ಗಾಗಿ ಹೊರಗಡೆ ಬಂದಿರುವಾಗ ಈ ದುರ್ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ನಡೆದಿರುವುದು ಏನು ಎಂದು ವಿಚಾರಣೆ ನಡೆಸಿದ್ದು, ಪೊಲೀಸರು ಹೇಳುವ ಹಾಗೆ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ. ಇನ್ನು ದಂಪತಿಗಳು ವಾಕಿಂಗ್ ಮಾಡುವಾಗ ಆ ರೀತಿ ಆಯಿತಾ ಅಥವಾ ದಿಢೀರ್ ಎಂದು ಅವರಿಬ್ಬರೇ ಕಾರ್ ಬಳಿ ಬಂದುಬಿಟ್ರ ಎನ್ನುವ ಬಗ್ಗೆ ಮಾಹಿತಿ ಇಲ್ಲ
ಆದರೆ ಈ ಅಪಘಾತದಿಂದ ಒಂದು ಪ್ರಾಣ ಹೋಗಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ನಾಗಭೂಷಣ್ ಅವರು ಆಕ್ಸಿಡೆಂಟ್ ಮಾಡಿ ಮೃತವಾಗಿರುವ ಮಹಿಳೆಯ ಹೆಸರು ಪ್ರೇಮಾ ಅವರಿಗೆ 48 ವರ್ಷ ವಯಸ್ಸಾಗಿತ್ತು. ಪ್ರೇಮಾ ಅವರು ಸ್ಥಳದಲ್ಲೇ ಮೃತವಾಗಿದ್ದು, ಅವರ ಪತಿಗೆ ಗಂಭೀರವಾಗಿ ಗಾಯವಾಗಿದೆ, ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅವರ ಆರೋಗ್ಯದ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ..
ಈ ದಂಪತಿಗಳ ಮಕ್ಕಳು ಹೇಳುವ ಪ್ರಕಾರ, ಇನ್ನು 15 ದಿನಗಳಲ್ಲಿ ಮಗಳ ಮದುವೆ ಇತ್ತು, ಮಗಳ ಮದುವೆ ಬಗ್ಗೆಯೇ ತಂದೆ ತಾಯಿ ಊಟ ಮಾಡುತ್ತಾ ಮಾತನಾಡಿ, ವಾಕಿಂಗ್ ಮಾಡಿಕೊಂಡು ಬರುತ್ತೇವೆ ಎಂದು ಮನೆಯಿಂದ ಹೊರಹೋಗಿದ್ದಾರೆ. 15 ನಿಮಿಷಗಳ ಒಳಗೆ ಈ ರೀತಿ ಆಗಿರುವ ಸುದ್ದಿ ಮಕ್ಕಳಿಗೆ ಗೊತ್ತಾಗಿದೆ. ನಟ ನಾಗಭೂಷಣ್ ಅವರ ವಿರುದ್ಧ ದಂಪತಿಯ ಮಕ್ಕಳು ಪೊಲೀಸರ ಬಳಿ ದೂರು ನೀಡಿದ್ದಾರೆ.
ಪೊಲೀಸರು ನಾಗಭೂಷಣ್ ಅವರನ್ನು ಅರೆಸ್ಟ್ ಮಾಡಿದ್ದರು, ದಂಪತಿಯ ಕಾರ್ ಬಳಿ ಬಂದರು ಎಂದು ನಾಗಭೂಷಣ್ ಅವರು ಹೇಳಿಕೆ ನೀಡಿದ್ದಾರೆ. ನಂತರ ಸ್ಟೇಶನ್ ಬೇಲ್ ಮೇಲೆ ನಾಗಭೂಷಣ್ ಅವರನ್ನು ರಿಲೀಸ್ ಮಾಡಲಾಗಿದ್ದು, ಮಂಗಳವಾರ ಮತ್ತೆ ಬರಬೇಕು ಎಂದು ತಿಳಿಸಿದ್ದಾರಂತೆ. ಆದರೆ ಪ್ರೇಮಾ ದಂಪತಿಯ ಮಕ್ಕಳು ಈ ವಿಚಾರದಲ್ಲಿ ಅಪಾರವಾದ ನೋವನ್ನು ಅನುಭವಿಸುತ್ತಿದ್ದಾರೆ. ಇನ್ನು 15 ದಿನಗಳಲ್ಲಿ ಮದುವೆ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಈಗ ಸೂತಕ ವಾತಾವರಣ ಶುರುವಾಗಿದೆ..
ತಂದೆಯನ್ನು ಉಳಿಸಿಕೊಳ್ಳಲು ಮಕ್ಕಳು ಕಷ್ಟಪಡುತ್ತಿದ್ದಾರೆ. ತಮಗೆ ನ್ಯಾಯ ಕೊಡಿಸಬೇಕು ಎಂದು ಮಕ್ಕಳು ಪೊಲೀಸರ ಮೊರೆ ಹೋಗಿದ್ದು, ಮದುವೆ ಆಗಬೇಕಿದ್ದ ಆ ಹೆಣ್ಣುಮಗಳು ನನ್ನ ತಾಯಿಯನ್ನು ವಾಪಸ್ ತಂದುಕೊಡು ಎಂದು ಕಣ್ಣೀರಿಡುತ್ತಿರುವ ವಿಡಿಯೋ ವೈರಲ್ ಆಗಿದೆ. ನಟ ನಿರ್ದೇಶಕ ನಾಗಭೂಷಣ್ ಅವರು ಈ ಘಟನೆಯ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.