Nagabhushan: ಅಪಘಾತದ ನಂತರ ಮಾಧ್ಯಮದವರೊಡನೆ ಸುದ್ದಿಗೋಷ್ಠಿ ಮಾಡಿದ ನಟ ನಾಗಭೂಷಣ್, ಹಿಟ್ ಅಂಡ್ ರನ್ ಕೇಸ್ ಅಲ್ಲ ಎಂದ ನಟ

Written by Pooja Siddaraj

Published on:

ಈ ಆಕ್ಸಿಡೆಂಟ್ ನಡೆದ ಬಳಿಕ ನಾಗಭೂಷಣ್ ಅವರ ಮೇಲೆ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ ಎಂದು ಹೇಳಲಾಗಿತ್ತು. ಮೃತರಾದ ಪ್ರೇಮ ಅವರ ಇಬ್ಬರು ಮಕ್ಕಳು ಕೂಡ ತಮಗೆ ನ್ಯಾಯ ಬೇಕು ಎಂದು ಮಾಧ್ಯಮದ ಎದುರು ಮಾತನಾಡಿದ್ದರು. ಆಕ್ಸಿಡೆಂಟ್ ನಡೆದ 15 ದಿನಕ್ಕೆ ಪ್ರೇಮಾ ಅವರ ಮಗಳ ಮದುವೆ ಇತ್ತು, ಆ ಮದುವೆ ವೇಳೆಯಲ್ಲಿ ಇಂಥ ಘಟನೆ ನಡೆದದ್ದು, ಅವರ ಕುಟುಂಬಕ್ಕೆ ದೊಡ್ಡ ಆಘಾತ ಆಗಿತ್ತು.

ಆಪಘಾತದ ಬಗ್ಗೆ ಪ್ರೇಮಾ ಅವರ ಮಗ ಪಾರ್ಥ ಮಾತನಾಡಿ, ಆಕ್ಸಿಡೆಂಟ್ ಆದಾಗ ನಾವು ಅಲ್ಲಿ ಇರಲಿಲ್ಲ ಒಬ್ಬ ನಟ ಆಕ್ಸಿಡೆಂಟ್ ಮಾಡಿದ್ದಾರೆ ಅಂತ ಹೇಳಿದ್ದಾರೆ ಬೇರೆ ಯಾರಾದರೂ ಆಗಿದ್ದರೆ ಜೈಲಿಗೆ ಹಾಕುತ್ತಿದ್ದರು, ಈಗಲೂ ಅದೇ ರೀತಿ ಮಾಡಬೇಕು. ನಮಗೆ ನ್ಯಾಯ ಸಿಗಬೇಕು ಎಂದಿದ್ದರು. ಆದರೆ ನಾಗಭೂಷಣ್ ಅವರ ಕಡೆಯಿಂದ ಈ ವಿಷಯದ ಬಗ್ಗೆ ಯಾವುದೇ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ನಾಗಭೂಷಣ್ ಅವರು ಪ್ರೆಸ್ ಮೀಟ್ ಮೂಲಕ ಆಕ್ಸಿಡೆಂಟ್ ಬಗ್ಗೆ ಮಾತನಾಡಿದ್ದಾರೆ..

ಪ್ರೆಸ್ ಮೀಟ್ ನಲ್ಲಿ ನಾಗಭೂಷಣ್ ಅವರು ಮಾತನಾಡಿದ್ದು ಹೀಗೆ, “ಆ ದಿನ ರಾತ್ರಿ ಅಪಘಾತ ಸಂಭವಿಸಿತು, ನಾನು ಸ್ವಲ್ಪ ಟೈಮ್ ತಗೊಂಡು ನಿಮ್ಮ ಎದುರು ಬಂದಿದ್ದೀನಿ. ಅಪಘಾತದಿಂದ ನನಗೆ ಡಿಸ್ಟರ್ಬ್ ಆಗಿದ್ದು, ಅದನ್ನ ಈಗಲೂ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಅಪಘಾತ ನಡೆದಿದ್ದು ನಾನು ಆರ್.ಆರ್ ನಗರದಿಂದ ಕೋಣನಕುಂಟೆಗೆ ಹೋಗುವಾಗ, ಇದನ್ನ ಕೆಲವರು ಹಿಟ್ ಅಂಡ್ ರನ್ ಕೇಸ್ ಅಂತ ಹೇಳ್ತಿದ್ದಾರೆ. ನಾನು ಎಲ್ಲಿಗೂ ಓಡಿ ಹೋಗಲಿಲ್ಲ.

ನಾನೇ ಅವರನ್ನ ಆಸ್ಪತ್ರೆಗೆ ಸೇರಿಸಿದೆ. ಆಕ್ಸಿಡೆಂಟ್ ಆದ್ಮೇಲೆ ನನ್ನ ಕಾರ್ ನ ಬಂಪರ್ ಅನ್ನು ಕಿತ್ತು ಬಿಸಾಕಿದ್ದು ಕೂಡ ನಾನೇ, ಅಪಘಾತ ನಡೆದ ಮೇಲೆ ಆ ಮಹಿಳೆಯನ್ನ ನನ್ನ ಮಡಿಲಿನಲ್ಲಿ ಮಲಗಿಕೊಂಡು ಸಮಾಧಾನ ಮಾಡಿದ್ದೆ. ಅಪಘಾತ ಆದಮೇಲೆ ಪೊಲೀಸರಿಗೆ ವಿಷಯ ತಿಳಿಸಿದ್ದು ಕೂಡ ನಾನೇ. ನಂತರ ಬಂದ ಪೊಲೀಸರು ನಾನು ಮದ್ಯಸೇವನೆ ಮಾಡಿದ್ದೀನಾ ಅಂತ ಚೆಕ್ ಮಾಡಿದ್ರು, ಈ ಆಕ್ಸಿಡೆಂಟ್ ಇಂದ ನಾನು ಕೂಡ ಕುಗ್ಗಿಹೋಗಿದ್ದೀನಿ.

ಆ ಸಮಯದಲ್ಲಿ ಒಬ್ಬ ಮನುಷ್ಯನಾಗಿ ಏನು ಮಾಡಬೇಕಿತ್ತೋ ಅದನ್ನ ಮಾಡಿದ್ದೀನಿ. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ ಕೂಡ ಆಕ್ಸಿಡೆಂಟ್ ನಲ್ಲಿ ವಿಧಿವಶರಾದರು. ಇಲ್ಲಿ ನನ್ನ ನೋವಿಗಿಂತ ಅವರ ನೋವು ದೊಡ್ಡದು. ನನಗೆ ಎಲ್ಲರು ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತೀಯಾ ಅಂತ ಹೇಳಿದ್ರು, ದಯವಿಟ್ಟು ಯಾರು ಕೂಡ ಆಕ್ಸಿಡೆಂಟ್ ಆದಾಗ ಓಡಿ ಹೊಗಬೇಡಿ..” ಎಂದು ಹೇಳಿದ್ದಾರೆ ನಟ ನಾಗಭೂಷಣ್.

ಈಗ ನಾಗಭೂಷಣ್ ಅವರು ಸ್ಟೇಶನ್ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ನಾಗಭೂಷಣ್ ಅವರ ಪರೀಕ್ಷೆಯನ್ನು ಮಾಡಿದ್ದು, ಆಕ್ಸಿಡೆಂಟ್ ಆದಾಗ ಅವರು ಮದ್ಯಸೇವನೆ ಮಾಡಿರಲಿಲ್ಲ ಎನ್ನುವುದು ಟೆಸ್ಟ್ ಮೂಲಕ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

Leave a Comment