Nagabhushan: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್! ನವಜೋಡಿಗೆ ಶುಭಕೋರಿ!

0 32

Nagabhushan: ನಟ ನಾಗಭೂಷಣ್ ಈಗ ಚಂದನವನದಲ್ಲಿ ಹೊಸದಾಗಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿರುವ ನಟ. ಉತ್ತಮವಾದ ಅಭಿನಯ ಚಾತುರ್ಯತೆಯಿಂದ ನಟ ನಾಗಭೂಷಣ್ ಅವರು ಚಂದನವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟ ಧನಂಜಯ್ ಅವರ ಹೊಯ್ಸಳ, ನಟ ಡಾರ್ಲಿಂಗ್ ಕೃಷ್ಣ ಅವರ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಕೂಡ ನಟಿಸಿದ್ದರು.

ಧನಂಜಯ್ ಅವರು ನಿರ್ಮಾಣ ಮಾಡುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದರು, ಇವರಿಗೆ ನಟ ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಿ ಜನರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿತು. ಇದೀಗ ಇವರು ಇನ್ನು ಒಂದು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಹ ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.

ಇದೆಲ್ಲವು ವೃತ್ತಿ ಜೀವನದ ಬಗ್ಗೆಯಾದರೆ, ಇದೀಗ ನಾಗಭೂಷಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೂಜಾ ಪ್ರಕಾಶ್ ಎನ್ನುವವರ ಜೊತೆಗೆ ನಾಗಭೂಷಣ್ ಅವರ ಮದುವೆ ನಡೆದಿದ್ದು, ನಟ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ನಿರೂಪಕಿ ಜಾನ್ವಿ ರಾಯಲ ಸೇರಿದಂತೆ ಚಿತ್ರರಂಗದ ಕಲಾವಿದರು ಇವರ ಮದುವೆಗೆ ಹೋಗಿ ಹೊಸ ಜೋಡಿಗೆ ವಿಶ್ ಮಾಡಿದ್ದಾರೆ.

Leave A Reply

Your email address will not be published.