Namratha Gowda: ಮದುವೆ ಬಗ್ಗೆ ನಟಿ ನಮ್ರತಾ ಗೌಡ ಅವರ ಪ್ಲಾನಿಂಗ್ ಏನು ಗೊತ್ತಾ?

0 15

Namratha Gowda: ನಾಗಿಣಿ2 ಸೀರಿಯಲ್ ಮೂಲಕ ಸಧ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿದವರು ನಟಿ ನಮ್ರತಾ ಗೌಡ. ನಾಗಿಣಿ ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಇವರು ಧರಿಸುವ ಉಡುಪುಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ನಾಗಿಣಿ ಪಾತ್ರದಲ್ಲಿ ಟ್ರಡಿಷನಲ್ ಉಡುಪಿನಲ್ಲಿ ಆಧುನಿಕವಾದ ಆಭರಣಗಳನ್ನು ಧರಿಸಿ ಬಹಳ ಟ್ರೆಂಡಿ ಆಗಿ ಕಾಣಿಸಿಕೊಳ್ಳುತ್ತಿದ್ದ ನಮ್ರತಾ ಅದಕ್ಕಿಂತ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದರು.

ನಮ್ರತಾರಿಗೆ ಬಣ್ಣದ ನಂಟು ಹೊಸದಲ್ಲ. ಈ ಹುಡುಗಿ ಮೂರು ವರ್ಷದವರಿದ್ದಾಗಲೇ ನಟನೆ ಆರಂಭಿಸಿದ್ದರು. ಏಪ್ರಿಲ್ 14, 1993 ರಲ್ಲಿ ಜನಿಸಿದ ನಮ್ರತಾ ಗೌಡ, ಹುಟ್ಟಿದ್ದು ಬೆಳೆದಿದ್ದು ವಿದ್ಯಾಭ್ಯಾಸ ಮುಗಿಸಿದ್ದು ಪ್ರಸ್ತುತ ಇರುವುದು ಎಲ್ಲವೂ ಬೆಂಗಳೂರಿನಲ್ಲೇ. ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ, ಆರ್ಕಿಟೆಕ್ಚರ್ ವಿಷಯದಲ್ಲಿ ನಮ್ರತಾ ಗೌಡ ಪದವಿ ಶಿಕ್ಷಣ ಪಡೆದಿದ್ದಾರೆ. ನಮ್ರತಾ ಗೌಡ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ಪುಟ್ಟಗೌರಿ ಮದುವೆ ಧಾರಾವಾಹಿಯ ಹಿಮ ಪಾತ್ರದಿಂದ.

ಈ ವರ್ಷ ಬಿಗ್ ಬಾಸ್ ಶೋ ಇಂದ ಸುದ್ದಿಯಾಗಿದ್ದ ನಮ್ರತಾ ಫಿನಾಲೆಗೆ ಒಂದು ಹೆಜ್ಜೆ ಇರುವಾಗ, ಶೋ ಇಂದ ಎಲಿಮನೇಟ್ ಆದರು. ಇದೀಗ ಇಂಟರ್ವ್ಯೂ ಗಳನ್ನು ಕೊಡುತ್ತಾ ಬ್ಯುಸಿ ಆಗಿರುವ ನಮ್ರತಾ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಮದುವೆ ಬಗ್ಗೆ ಆಸಕ್ತಿ ಇತ್ತು, ಈಗ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಮೂಲಕ, ನಮ್ರತಾ ಅವರು ತಮಗೆ ಮದುವೆ ಬಗ್ಗೆ ಸಧ್ಯಕ್ಕೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ..

ಇತ್ತ ಅಭಿಮಾನಿಗಳು ಸ್ನೇಹಿತ್ ನಮ್ರತಾ ಲವ್ ಸ್ಟೋರಿ ಏನಾಯ್ತು ಎಂದು ಆಸಕ್ತಿ ತೋರಿಸಿದ್ದಾರೆ. ಇನ್ನು ನಮ್ರತಾ ಅವರು ಫಿನಾಲೆಯಲ್ಲಿ ಇರುವುದಕ್ಕೆ ಅರ್ಹತೆ ಹೊಂದಿರುವ ಸ್ಪರ್ಧಿ ಆಗಿದ್ದು, ಅಷ್ಟು ಬೇಗ ಎಲಿಮಿನೇಟ್ ಆಗಬಾರದಿತ್ತು ಎನ್ನುತ್ತಿದ್ದಾರೆ.

Leave A Reply

Your email address will not be published.