Namratha Gowda: ಬಾರ್ಬಿ ಗರ್ಲ್ ಆದ ನಮ್ಮು, ಅಭಿಮಾನಿಗಳು ಫಿದಾ!

0 16

Namratha Gowda: ನಾಗಿಣಿ2 ಸೀರಿಯಲ್ ಮೂಲಕ ಸಧ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿದವರು ನಟಿ ನಮ್ರತಾ ಗೌಡ. ನಾಗಿಣಿ ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಇವರು ಧರಿಸುವ ಉಡುಪುಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ನಾಗಿಣಿ ಪಾತ್ರದಲ್ಲಿ ಟ್ರಡಿಷನಲ್ ಉಡುಪಿನಲ್ಲಿ ಆಧುನಿಕವಾದ ಆಭರಣಗಳನ್ನು ಧರಿಸಿ ಬಹಳ ಟ್ರೆಂಡಿ ಆಗಿ ಕಾಣಿಸಿಕೊಳ್ಳುತ್ತಿದ್ದ ನಮ್ರತಾ ಅದಕ್ಕಿಂತ ಮೊದಲು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದರು.

ನಮ್ರತಾರಿಗೆ ಬಣ್ಣದ ನಂಟು ಹೊಸದಲ್ಲ. ಈ ಹುಡುಗಿ ಮೂರು ವರ್ಷದವರಿದ್ದಾಗಲೇ ನಟನೆ ಆರಂಭಿಸಿದ್ದರು. ಏಪ್ರಿಲ್ 14, 1993 ರಲ್ಲಿ ಜನಿಸಿದ ನಮ್ರತಾ ಗೌಡ, ಹುಟ್ಟಿದ್ದು ಬೆಳೆದಿದ್ದು ವಿದ್ಯಾಭ್ಯಾಸ ಮುಗಿಸಿದ್ದು ಪ್ರಸ್ತುತ ಇರುವುದು ಎಲ್ಲವೂ ಬೆಂಗಳೂರಿನಲ್ಲೇ. ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ, ಆರ್ಕಿಟೆಕ್ಚರ್ ವಿಷಯದಲ್ಲಿ ನಮ್ರತಾ ಗೌಡ ಪದವಿ ಶಿಕ್ಷಣ ಪಡೆದಿದ್ದಾರೆ. ನಮ್ರತಾ ಗೌಡ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ಪುಟ್ಟಗೌರಿ ಮದುವೆ ಧಾರಾವಾಹಿಯ ಹಿಮ ಪಾತ್ರದಿಂದ.

ಈ ವರ್ಷ ಬಿಗ್ ಬಾಸ್ ಶೋ ಇಂದ ಸುದ್ದಿಯಾಗಿದ್ದ ನಮ್ರತಾ ಫಿನಾಲೆಗೆ ಒಂದು ಹೆಜ್ಜೆ ಇರುವಾಗ, ಶೋ ಇಂದ ಎಲಿಮನೇಟ್ ಆದರು. ಇದೀಗ ಇಂಟರ್ವ್ಯೂ ಗಳನ್ನು ಕೊಡುತ್ತಾ ಬ್ಯುಸಿ ಆಗಿದ್ದಾರೆ, ಜೊತೆಗೆ ಫೋಟೋಗಳ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಶೈನ್ ಆಗುತ್ತಿದ್ದಾರೆ. ಸಧ್ಯಕ್ಕೆ ನಮ್ರತಾ ಅವರು ಪಿಂಕ್ ಕಲರ್ ಶಾರ್ಟ್ ಡ್ರೆಸ್ ಧರಿಸಿ ಹೊಸ ಫೋಟೋಸ್ ಶೇರ್ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಪಿಂಕ್ ಕಲರ್ ಶಾರ್ಟ್ ಡ್ರೆಸ್ ಅನ್ನು ನಮ್ರತಾ ಅವರು ಧರಿಸಿ ಹೊಸ ಫೋಟೋಸ್ ಗೆ ಕ್ಯೂಟ್ ಆಗಿ ಪೋಸ್ ನೀಡಿದ್ದು, ಈ ಫೋಟೋಸ್ ನೋಡಿದ ಅಭಿಮಾನಿಗಳು ನೀವು ಬಾರ್ಬಿ ಡಾಲ್ ಥರ ಕಾಣುತ್ತಿದ್ದೀರಾ ಎಂದು ನಮ್ರತಾ ಅವರಿಗೆ ಮೆಚ್ಚುಗೆ ನೀಡಿದ್ದಾರೆ. ಇದೀಗ ಈ ಫೋಟೋಸ್ ವೈರಲ್ ಆಗಿದೆ.

Leave A Reply

Your email address will not be published.